HOME » NEWS » District » DISTRIBUTION OF FOOD GRAINS EVEN WITHOUT RATION CARDS FROM JUNE SAYS MINISTER GOPALAIAH MAK

ಜೂನ್ ತಿಂಗಳಿನಿಂದ ಪಡಿತರ ಚೀಟಿ ಇಲ್ಲದಿದ್ದರೂ ಆಹಾರ ಧಾನ್ಯ ವಿತರಣೆ; ಸಚಿವ ಗೋಪಾಲಯ್ಯ

ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಜೊತೆಗೆ 1 ಕೆ.ಜಿ. ಕಡಲೆ ಮತ್ತು 1 ಕೆ.ಜಿ ತೊಗರಿ ಬೇಳೆ ವಿತರಿಸಲಾಗುವುದು. ಇನ್ನು ರಾಜ್ಯದಲ್ಲಿ ಎಲ್ಲೇ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳ ಪೂರೈಕೆ ಮಾಡದಿದಲ್ಲಿ ಅಥವಾ ತೂಕದ ಪ್ರಮಾಣದಲ್ಲಿ ಕಡಿಮೆ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೋಪಾಲಯ್ಯ ತಿಳಿಸಿದ್ದಾರೆ.

news18-kannada
Updated:May 30, 2020, 9:18 PM IST
ಜೂನ್ ತಿಂಗಳಿನಿಂದ ಪಡಿತರ ಚೀಟಿ ಇಲ್ಲದಿದ್ದರೂ ಆಹಾರ ಧಾನ್ಯ ವಿತರಣೆ; ಸಚಿವ ಗೋಪಾಲಯ್ಯ
ಸಚಿವ ಗೋಪಾಲಯ್ಯ
  • Share this:
ಕೊಡಗು (ಮೇ 30); ದೇಶದಾದ್ಯಂತ ಕೊರೋನಾ ಲಾಕ್‌ಡೌನ್ ಚಾಲ್ತಿಯಲ್ಲಿದ್ದು ಪಡಿತರ ಚೀಟಿ ಇರುವ ಅಥವಾ ಇಲ್ಲದಿರುವ ಪ್ರತಿಯೊಬ್ಬರಿಗೂ ಪಡಿತರ ಧಾನ್ಯಗಳು ದೊರೆಯಲಿವೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಇಂದು ಮಾತನಾಡಿರುವ ಅವರು, "ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಶೇ.95 ರಷ್ಟು ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಕಾರ್ಡ್ ಇಲ್ಲದಿರುವ ಕುಟುಂಬಗಳಿಗೂ ಆಹಾರ ಧಾನ್ಯ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ವಲಸೆ ಕಾರ್ಮಿಕರಿಗೆ ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯದ ಪಾಲಿನ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು" ಎಂದು ಅವರು ಮಾಹಿತಿ ನೀಡಿದ್ದಾರೆ.

"ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಜೊತೆಗೆ 1 ಕೆ.ಜಿ. ಕಡಲೆ ಮತ್ತು 1 ಕೆ.ಜಿ ತೊಗರಿ ಬೇಳೆ ವಿತರಿಸಲಾಗುವುದು. ಇನ್ನು ರಾಜ್ಯದಲ್ಲಿ ಎಲ್ಲೇ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳ ಪೂರೈಕೆ ಮಾಡಿದ್ದಲ್ಲಿ ಅಥವಾ ತೂಕದ ಪ್ರಮಾಣದಲ್ಲಿ ಕಡಿಮೆ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮೂಲಕವೂ ಆಹಾರ ಧಾನ್ಯ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ" ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ ; ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪನವರೇ ಮೂರು ವರ್ಷಕ್ಕೆ ಸಿಎಂ; ಕಟ್ಟಾ ಸುಬ್ರಮಣ್ಯ ನಾಯ್ಡು
First published: May 30, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories