HOME » NEWS » District » DISASTER MANAGEMENT RAPID ACTION TEAM BUILT IN CHAMARAJANAGAR DISTRICT NCHM SNVS

ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯಪಡೆ ರಚನೆ

ದಿಢೀರ್ ಆಗಿ ಪ್ರಾಕೃತಿಕ ವಿಪತ್ತು ಎದುರಾದಾಗ ರಕ್ಷಣಾ ಕಾರ್ಯಕ್ಕೆ ಎನ್​ಡಿಆರ್​ಎಫ್ ಮೊದಲಾದ ಪಡೆಗಳ ಮೇಲೆ ಹೆಚ್ಚು ಅವಲಂಬಿತವಾಗುವುದನ್ನು ತಪ್ಪಿಸಲು ಸ್ಥಳೀಯವಾಗಿಯೇ ದೊಡ್ಡ ಕಾರ್ಯಕರ್ತರ ತಂಡಗಳನ್ನ ಚಾಮರಾಜನಗರದಲ್ಲಿ ರಚಿಸಲಾಗಿದೆ.

news18-kannada
Updated:February 23, 2021, 1:44 PM IST
ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯಪಡೆ ರಚನೆ
ವಿಪತ್ತು ನಿರ್ವಹಣೆ ಕ್ಷಿಪ್ರ ಕಾರ್ಯಾಚರಣೆ ತಂಡ
  • Share this:
ಚಾಮರಾಜನಗರ: ಯಾವುದೇ ವಿಪತ್ತು ಸಂಭವಿಸಿದಾಗ ರಕ್ಷಣಾ ಕಾರ್ಯಕ್ಕಾಗಿ ಎಸ್.ಡಿ.ಆರ್.ಎಫ್. ಅಥವಾ ಎನ್.ಡಿ.ಆರ್.ಎಫ್ ತಂಡಕ್ಕಾಗಿ ಕಾಯುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲಾಡಳಿತ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲೇ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯ ಪಡೆ (D-RAT – Disaster - Rapid Action Team) ಯೊಂದನ್ನು ರಚಿಸಿದ್ದು, ಈ ಪಡೆಗೆ ತರಬೇತಿ ಆರಂಭಿಸಿದೆ.

ಪ್ರಕೃತಿ ವಿಕೋಪ, ಅತಿಯಾದ ಮಳೆ, ಪ್ರವಾಹ, ಅಗ್ನಿಅನಾಹುತ, ಕಾಡಿಗೆ ಬೆಂಕಿ, ದೊಡ್ಡ ಪ್ರಮಾಣದ ಅಪಘಾತ, ಅನಾವೃಷ್ಠಿ, ಹೀಗೆ ಯಾವುದೇ ವಿಪತ್ತು ಸಂಭವಿಸಿದಾಗ ತುರ್ತಾಗಿ ರಕ್ಷಣಾ ಕಾರ್ಯ ಮಾಡಲು  ಹಾಗು ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಯಾವುದೇ ಜಿಲ್ಲೆಗಳಲ್ಲು ತರಬೇತಿ ಪಡೆದ ವೃತ್ತಿಪರ ಪಡೆ ಇಲ್ಲ, ವಿಪತ್ತುಗಳ ಸಂಭವಿಸಿದಾಗ  ವಿಪತ್ತು ನಿರ್ವಹಣಾ  ಪ್ರಾಧಿಕಾರದ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು ತಮ್ಮ ಜೊತೆಯಲ್ಲಿರುವ ಅಧಿಕಾರಿಗಳನ್ನೇ ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ಇಲ್ಲವೇ ಎಸ್.ಡಿ.ಆರ್.ಎಫ್ ಅಥವಾ ಎನ್.ಡಿ.ಆರ್.ಎಫ್ ತಂಡ ಬರುವಿಕೆಗೆ ಕಾಯಬೇಕು.  ಹಾಗಾಗಿ ದೊಡ್ಡ ವಿಪತ್ತು ಉಂಟಾದಾಗ ತಕ್ಷಣಕ್ಕೆ ತಮಗೆ ತರಬೇತಿ ಪಡೆದ ಮಾನವ ಸಂಪನ್ಮೂಲ ಅತ್ಯಗತ್ಯ ಎಂಬುದನ್ನು ಮನಗಂಡ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, 50 ಮಂದಿ ಸ್ವಯಂ ಸೇವಕರನ್ನು ಒಳಗೊಂಡ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯಪಡೆ ರಚಿಸಿದ್ದಾರೆ.

ನೆಹರು ಯುವಕ ಕೇಂದ್ರದಿಂದ ಈ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ವಿಪತ್ತು ನಿರ್ವಹಣೆಗೆ ಬೇಕಾದ ಎಲ್ಲಾ ಕೌಶಲ್ಯಗಳ ತರಬೇತಿಯನ್ನು ಇವರಿಗೆ ನೀಡಲಾಗುತ್ತಿದೆ. ಮೂರು ದಿನಗಳ ಕಾಲ ಈ ತರಬೇತಿ ಕಾರ್ಯಾಗಾರ ನಡೆಯಲಿದ್ದು ನುರಿತ ತಜ್ಞರಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ, ಪ್ರಾಯೋಗಿಕ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: ಸಿಎಂ ಸ್ಥಾನ ಸಾಂವಿಧಾನಿಕವಾಗಿ ಗೌರವಯುತವಾದದ್ದು; ಎಲ್ಲರೂ ಗೌರವ ಕೊಡಬೇಕು: ಕೃಷಿ ಸಚಿವ ಬಿ. ಸಿ. ಪಾಟೀಲ

ವಿಪತ್ತು ನಿರ್ವಹಣೆಯಲ್ಲಿ ಪರಿಣಿತಿ ಹೊಂದಿದ ಇಂತಹ ತಂಡವೊಂದು ಜಿಲ್ಲಾಧಿಕಾರಿಗಳ ಜೊತೆ ಇದ್ದರೆ ಯಾವುದೇ ವಿಪತ್ತನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲುಸಹ ವರ್ಷದಲ್ಲಿ ಹಲವಾರು ವಿಪತ್ತುಗಳು ಸಂಭವಿಸುವ ಸಾಧ್ಯತೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಹಾಗು, ಅರಣ್ಯಕ್ಕೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳಗಳು ಹೆಚ್ಚಾಗಿದ್ದು ಲಕ್ಷ ಲಕ್ಷ ಜನ ಭಾಗವಹಿಸುವುದರಿಂದ ಜಾತ್ರೆ, ಉತ್ಸವದ ಸಂದರ್ಭಗಳಲ್ಲಿ ಕಾಲ್ತುಳಿತದಂತಹ ದುರಂತಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ, ಹಾಗಾಗಿ ಸ್ಥಳೀಯವಾಗಿ ವಿಪತ್ತು ನಿರ್ವಹಣಾ ಕ್ಷಿಪ್ರ ಕಾರ್ಯ ತಂಡ ಇದ್ದರೆ ಇಂತಹ ಪರಿಸ್ಥಿತಿಗಳನ್ನು ತ್ವರಿತವಾಗಿ ನಿಭಾಯಿಸಿ ರಕ್ಷಣಾ  ಕಾರ್ಯ ಕೈಗೊಳ್ಳಬಹುದು ಹಾಗಾಗಿ ಇಂತಹ ಒಂದು ತಂಡವೊಂದನ್ನು ರಚಿಸಲಾಗಿದೆ  ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಿಂಗ್​ಮೇಕರ್ ಆದ ಜೆಡಿಎಸ್; ಎರಡೂ ಪಕ್ಷಗಳಿಗೆ ಜೆಡಿಎಸ್‌ ದೋಸ್ತಿಯೇ ಅನಿವಾರ್ಯ

ಈ ಕ್ಷಿಪ್ರ ಕಾರ್ಯಪಡೆಯ ಸ್ವಯಂಸೇವಕರು ತರಬೇತಿ ಪಡೆದ ನಂತರ ತಮ್ಮ ಗ್ರಾಮಗಳಿಗೆ ವಾಪಸ್ ತೆರಳಿದ ಮೇಲೆ ಸಮಯದಾಯವನ್ನು ಜಾಗೃತಗೊಳಿಸುತ್ತಾರೆ. ಅವರ ಸಾಮರ್ಥ್ಯ ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತಾರೆ. ನಮ್ಮ ಯೋಜನೆಯ ಪ್ರಕಾರ ಮುಂದಿನ ವರ್ಷದವರೆಗೆ ನಮ್ಮ ಜಿಲ್ಲೆಯಲ್ಲಿ 500 ಜನ ಸ್ವಯಂಸೇವಕರು ನಮಗೆ ಲಭ್ಯವಿರುತ್ತಾರೆ. ಹಾಗಾಗಿ  ಪ್ರವಾಹ ಬಂದಾಗ ನುರಿತ  ಈಜುಗಾರರನ್ನು ಹುಡುಕಬೇಕಾದ ಅಗತ್ಯ ಇರುವುದಿಲ್ಲ. ಬೆಂಕಿ ಬಿದ್ದಾಗ  ಬೆಂಕಿ ಆರಿಸುವ ಪರಿಣಿತರನ್ನು ಹುಡುಕಬೇಕಿಲ್ಲ. ಹೀಗೆ ಯಾವುದೇ ಸಂದರ್ಭದಲ್ಲಿ ವಿಪತ್ತು ಸಂಭವಿಸಿದಾಗ ಈ ಸ್ವಯಂಸೇವಕರು ಸನ್ನದ್ದರಾಗಿ ರಕ್ಷಣಾ ಕಾರ್ಯಕ್ಕೆ ಧಾವಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ ಎಸ್.ಡಿ.ಆರ್.ಎಫ್ (SDRF) ಅಥವಾ ಎನ್.ಡಿ.ಆರ್.ಎಫ್ (NDRF) ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ.ವರದಿ: ಎಸ್.ಎಂ.ನಂದೀಶ್
Published by: Vijayasarthy SN
First published: February 23, 2021, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories