Dinesh Kallahalli - ಇನ್ನೂ 3 ಜನರ ಸಿಡಿ ಬಗ್ಗೆ ಮುಂದೆ ಮಾತನಾಡುತ್ತೇನೆ: ದಿನೇಶ್ ಕಲ್ಲಹಳ್ಳಿ

ದೊಡ್ಡ ಪ್ರಕರಣವನ್ನ ಬಯಲಿಗೆ ತಂದ ನನಗೆ ಯಾವುದೇ ಭಯ ಇಲ್ಲ. ಆದರೆ, ಜನರು ನನ್ನನ್ನು ಸಂಶಯದಿಂದ ನೋಡುವಂತಾಗಿದೆ. ಆದರೆ, ನನ್ನ ಹೋರಾಟವನ್ನ ಮುಂದುವರಿಸುತ್ತೇನೆ. ಇನ್ನೂ 3 ಮಂದಿಯ ಸಿಡಿ ವಿಚಾರವನ್ನ ಮುಂದೆ ತಿಳಿಸುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ದಿನೇಶ್ ಕಲ್ಲಹಳ್ಳಿ

ದಿನೇಶ್ ಕಲ್ಲಹಳ್ಳಿ

  • Share this:
ರಾಮನಗರ: ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಹಗರಣದ ಆರೋಪ ಮಾಡಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಇನ್ನೂ ಮೂರು ಮಂದಿಯ ಸಿಡಿ ವಿಚಾರವನ್ನು ಮುಂದೆ ಮಾತನಾಡುವುದಾಗಿ ಹೇಳಿದ್ದಾರೆ. ಕನಕಪುರದ ಕಲ್ಲಹಳ್ಳಿ ನಿವಾಸದಲ್ಲಿ ಮಾತನಾಡಿದ ಅವರು, ತಾನು ದೂರು ವಾಪಸ್ ಪಡೆಯುವ ಬಗ್ಗೆ ನ್ಯೂಸ್ 18 ಸಂದರ್ಶನ ನೀಡಿದ್ದಾರೆ. 

ನನ್ನ ಸಾಮಾಜಿಕ ಹೋರಾಟಕ್ಕೆ ಧಕ್ಕೆಯಾಗಿದೆ. ಕುಮಾರಸ್ವಾಮಿ ಹೇಳಿಕೆಯಿಂದಾಗಿ ನೊಂದು ನಾನು ದೂರು ವಾಪಸ್ ಪಡೆಯಲು ಮುಂದಾಗಿದ್ದೇನೆ. ಈಗ ಕುಮಾರಣ್ಣನವರೇ ದೂರು ಕೊಡಲಿ. ತನಿಖೆ ಮುಂದುವರೆಸಲಿ. ಅವರೇ ಹೇಳಿದ್ದಾರೆ 5 ಕೋಟಿ ಡೀಲ್ ನಡೆದಿದೆ ಎಂದು. ಹಾಗಾಗಿ ಅವರಿಗೆ ಎಲ್ಲಾ ವಿಚಾರ ಗೊತ್ತಿರಬೇಕಲ್ಲವೇ. ಜೊತೆಗೆ 3 ತಿಂಗಳ ಹಿಂದೆಯೇ ಗೊತ್ತಿತ್ತು ಎಂದಿದ್ದಾರೆ ಕುಮಾರಣ್ಣ. ಹಾಗಾಗಿ ನಾನು ಕುಮಾರಣ್ಣನ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡ್ತೇನೆ. ನನ್ನ ವಕೀಲರ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡ್ತೇನೆ. ನನ್ನ ನೈತಿಕತೆ ಉಳಿಸಿಕೊಳ್ಳಲು ದೂರು ವಾಪಸ್ ಪಡೆಯಲು ಮುಂದಾಗಿದ್ದೇನೆ ಎಂದಿದ್ದಾರೆ.

ಇನ್ನೂ 3 ಜನರ ಸಿಡಿ ಬಗ್ಗೆ ಮುಂದೆ ಮಾತನಾಡುತ್ತೇನೆ. ಈ ಸಂದರ್ಭದಲ್ಲಿ ಆ ವಿಚಾರದ ಬಗ್ಗೆ ಪ್ರಸ್ತಾಪ ಬೇಡ ಎಂದು ನ್ಯೂಸ್ 18 ಗೆ ದಿನೇಶ್ ಕಲ್ಲಹಳ್ಳಿ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು 5 ಕೋಟಿಗೆ ಡೀಲ್ ಆಗಿದ್ದಾರೆಂದು ಹೇಳಿದ್ದಾರೆ. ಆದರೆ ಕುಮಾರಣ್ಣನಿಗೆ ಆಗ ಸಾಮಾಜಿಕ ಬದ್ಧತೆ ಇರಲಿಲ್ಲವಾ? 3 ತಿಂಗಳ ಹಿಂದೆಯೇ ಗೊತ್ತಿತ್ತು ಅಂತಾರೆ. ಆದರೆ ಅವರಿಗೆ ಗೊತ್ತಿದ್ದರೆ ಆಗಲೇ ಯಾಕೆ ಹೇಳಲಿಲ್ಲ ಅವರು ಎಂದಿದ್ದಾರೆ. ಇನ್ನು ಇಷ್ಟು ದಿನ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ ಅವರು, 5 ಕೋಟಿ ಡೀಲ್ ಬಗ್ಗೆ ಕುಮಾರಣ್ಣ ಪ್ರೂವ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Ramesh Jarkiholi – ಬೆಂಗಳೂರಿನಲ್ಲಿ ಎರಡು ಕಡೆ ಷಡ್ಯಂತ್ರ; ಜೈಲಿಗೆ ಹಾಕಿಸುವವರೆಗೂ ಬಿಡಲ್ಲ: ರಮೇಶ್ ಜಾರಕಿಹೊಳಿ

ಇಂತಹ ದೊಡ್ಡ ಪ್ರಕರಣವನ್ನ ಬಯಲಿಗೆ ತಂದ ನನಗೆ ಯಾವುದೇ ಆತಂಕವಿಲ್ಲ. ಆದರೆ ಜನರು ಈಗ ನನ್ನನ್ನ ನೋಡುತ್ತಿರುವ ಭಾವನೆಯೇ ಬದಲಾಗಿದೆ. ಹಣಕ್ಕಾಗಿ ಹೋರಾಟ ಮಾಡ್ತಾನೆ ಎಂಬ ಹಣೆಪಟ್ಟಿ ನನಗೆ ಬರುತ್ತಿದೆ. ಹಾಗಾಗಿ ಕುಮಾರಸ್ವಾಮಿಯವರು ಡೀಲ್ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಲಿ, ನಂತರ ಮಾತನಾಡಲಿ ಎಂದು ಒತ್ತಾಯಿಸಿದ್ದಾರೆ.

ಭಯದಿಂದ ದೂರು ವಾಪಸ್ ಪಡೆಯುವ ಮೂಲಕ ದಿನೇಶ್ ಕಲ್ಲಹಳ್ಳಿ ಜಾರಿಕೊಳ್ತಿದ್ದಾರೆಂದು ಹೇಳ್ತಿದ್ದಾರೆ. ಆದರೆ ನನಗೆ ಈ ಕೇಸ್ ನಲ್ಲಿ ಯಾವುದೇ ಭಯದ ವಾತವರಣ ಇಲ್ಲ. ನಾನು ಅಂತಿಮ ಹಂತದವರೆಗೆ ಹೋರಾಟ ಮಾಡುತ್ತೇನೆ. ಸ್ವತಃ ನಾನೇ ದೂರು ಪಡೆಯುವ ಅವಶ್ಯಕತೆ ಇದ್ದಲ್ಲಿ ಕಬ್ಬನ್ ಪಾರ್ಕ್ ಠಾಣೆಗೆ ನಾನೇ ಹೋಗ್ತೇನೆ. ಆದರೆ ಈ ಪ್ರಕರಣದ ವಿಚಾರವಾಗಿ ನಾನು ಮುಂದೆಯೂ ಸಹ ಹೋರಾಟಕ್ಕೆ ಸಿದ್ಧ ಎಂದು ದಿನೇಶ್ ಕಲ್ಲಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಇಂದು ಮಂಗಳವಾರ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ ಸಿಡಿ ನಕಲಿ ಎಂದು ಹೇಳಿದ್ದಾರೆ. ತನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಈ ಷಡ್ಯಂತ್ರದ ಹಿಂದಿರುವವರನ್ನು ಜೈಲಿಗೆ ಹಾಕಿಸುವವರೆಗೂ ಸುಮ್ಮನಿರಲ್ಲ ಎಂದಿದ್ಧಾರೆ.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: