ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರಿಂದ ವಿಭಿನ್ನ ಬಗೆಯ ಐಸ್ ಕ್ರೀಂ; ಮಾರುಕಟ್ಟೆಯಲ್ಲಿ ವಿಭಿನ್ನ ಫ್ಲೇವರ್ ಐಸ್ ಕ್ರೀಂ ಸದ್ದು

ಸುಹಾಸ್ ತಯಾರಿಸುವ ಐಸ್ ಕ್ರೀಂ ಪಕ್ಕಾ ಸಾವಯವ ಆಗಿದ್ದು, ಯಾವುದೇ ರಾಸಾಯನಿಕಗಳ ಕಲಬರಕೆ ಮಾಡಲಾಗುತ್ತಿಲ್ಲ. ಕಪ್ ಗಳಲ್ಲಿ, ಫಾಮಿಲಿ ಪ್ಯಾಕ್ ಮೂಲಕವೂ ಈ ಐಸ್ ಕ್ರೀಂ ದೊರೆಯುತ್ತದೆ.

news18-kannada
Updated:September 5, 2020, 7:19 AM IST
ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರೊಬ್ಬರಿಂದ ವಿಭಿನ್ನ ಬಗೆಯ ಐಸ್ ಕ್ರೀಂ; ಮಾರುಕಟ್ಟೆಯಲ್ಲಿ ವಿಭಿನ್ನ ಫ್ಲೇವರ್ ಐಸ್ ಕ್ರೀಂ ಸದ್ದು
ಸಾವಯವ ಐಸ್​ಕ್ರೀಂ
  • Share this:
ಮಂಗಳೂರು(ಸೆಪ್ಟೆಂಬರ್ 05): ಇತ್ತೀಚಿನ ದಿನಗಳಲ್ಲಿ ಸಭೆ-ಸಮಾರಂಭಗಳಲ್ಲಿ ವಿಶೇಷ ರೀತಿಯ ಐಸ್ ಕ್ರೀಂ ಒಂದು ಗಮನ ಸೆಳೆಯಲಾರಂಭಿಸಿದೆ. ಪುತ್ತೂರಿನ ಕೃಷಿಕನೋರ್ವ ಈ ಐಸ್ ಕ್ರೀಂ ತಯಾರಕರಾಗಿದ್ದು, ಇವರ ಬಳಿ ವಿಭಿನ್ನ ರೀತಿಯ ಐಸ್ ಕ್ರೀಂ ಗಳ ಆಯ್ಕೆಗಳಿವೆ. ಕಾಯಿ ಮೆಣಸಿನ ಐಸ್ ಕ್ರೀಂ, ಬೀಟ್​​ರೋಟ್ ಐಸ್ ಕ್ರೀಂ, ಕ್ಯಾಬೀಜ್ ಐಸ್ ಕ್ರೀಂ, ಹಲಸಿನ ಐಸ್ ಕ್ರೀಂ ಹೀಗೆ ಹಲವು ರೀತಿಯ ಐಸ್ ಕ್ರೀಂ ತಯಾರಿಸುವ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಯುವ ಕೃಷಿಕರೋರ್ವರು ಸುದ್ಧಿಯಲ್ಲಿದ್ದಾರೆ. ಸಂಪೂರ್ಣ ಸಾವಯವ ಮತ್ತು ಸ್ವದೇಶಿ ಚಿಂತನೆಯಲ್ಲಿ ತಯಾರಾದ ಈ ಐಸ್ ಕ್ರೀಂ ಗಳು ಇದೀಗ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಮಾರುಕಟ್ಟೆಗೆ ಈಗಾಗಲೇ ಪ್ರವೇಶಿಸಿದೆ. ವಿವಿಧ ರೀತಿಯ ಐಸ್ ಕ್ರೀಂ ಫ್ಲೇವರ್ ಗಳನ್ನು ಈ ಯುವ ಕೃಷಿಕ ಪರಿಚಯಿಸುವ ಮೂಲಕ ಐಸ್ ಕ್ರೀಂ ನಲ್ಲೂ ಭಿನ್ನತೆಯನ್ನು ಪರಿಚಯಿಸಿದ್ದಾರೆ.

ವಿಶೇಷ ರೀತಿಯ ಐಸ್ ಕ್ರೀಂ ತಯಾರಿಸುವ ಮೂಲಕ ಈ ಯುವ ಕೃಷಿಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಸಭೆ-ಸಮಾರಂಭಗಳಲ್ಲಿ ಇವರ ಐಸ್ ಕ್ರೀಂ ಇದೀಗ ಫೇಮಸ್ ಆಗಲಾರಂಭಿಸಿದೆ. ಅಲ್ಲದೆ ಹಲವು ಮೇಳಗಳು, ಜಾತ್ರೆ ಹೀಗೆ ಎಲ್ಲಾ ಕಡೆಗಳಲ್ಲೂ ಮರಿಕೆ ಎನ್ನುವ ಹೆಸರಿನ ಐಸ್ ಕ್ರೀಂ ಸ್ಟಾಲ್ ಗಳನ್ನು ಹಾಕುವ ಮೂಲಕ ಹೆಸರಾಂತ ಐಸ್ ಕ್ರೀಂ ಬ್ರಾಂಡ್ ಗಳಿಗೂ ಪೈಪೋಟಿ ನೀಡಲಾಗುತ್ತಿದೆ.

ಕೊರೋನಾ ಸೋಂಕು ಪತ್ತೆಯಾದ ಬಳಿಕ ಐಸ್ ಕ್ರೀಂ ಉತ್ಪಾದನೆಯನ್ನು ಕಡಿಮೆಗೊಳಿಸಿರುವ ಯುವ ಕೃಷಿಕ ಸುಹಾಸ್ ಮತ್ತೆ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಶೀತ, ನೆಗಡಿ ಮೊದಲಾದ ಕಾರಣಗಳಿಂದಾಗಿ ಜನ ಐಸ್ ಕ್ರೀಂ ತಿನ್ನಲು ಹಿಂದೇಟು ಹಾಕುತ್ತಿದ್ದ ಕಾರಣ ಐಸ್ ಕ್ರೀಂ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ವಾರ ಮತ್ತೆ ಉತ್ಪಾದನೆ ಆರಂಭಗೊಳ್ಳಲಿದ್ದು, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ , ಪುತ್ತೂರು, ಬೆಳ್ತಂಗಡಿ ಹಾಗೂ ಮಂಗಳೂರಿನಲ್ಲಿ ಐಸ್ ಕ್ರೀಂ ಗಳು ಲಭ್ಯವಾಗಲಿದೆ. ಕೊರೋನಾ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಐಸ್ ಕ್ರೀಂ ಗಳನ್ನೂ ತಯಾರಿಸಲಾಗುವುದು ಎಂದು ಐಸ್ ಕ್ರೀಂ ತಯಾರಕ ಸುಹಾಸ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪ್ರೀತಿಯ ಸಾಕುನಾಯಿಗೆ ಸೀಮಂತ ಕಾರ್ಯ ಮಾಡಿದ ವಿಜಯಪುರದ ಕುಟುಂಬ

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲೂ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿದ್ದು, ಐಸ್ ಕ್ರೀಂ ಕೂಡಾ ಇದರಿಂದ ಹೊರತಾಗಿಲ್ಲ. ಆದರೆ, ಸುಹಾಸ್ ತಯಾರಿಸುವ ಐಸ್ ಕ್ರೀಂ ಪಕ್ಕಾ ಸಾವಯವ ಆಗಿದ್ದು, ಯಾವುದೇ ರಾಸಾಯನಿಕಗಳ ಕಲಬರಕೆ ಮಾಡಲಾಗುತ್ತಿಲ್ಲ. ಕಪ್ ಗಳಲ್ಲಿ, ಫಾಮಿಲಿ ಪ್ಯಾಕ್ ಮೂಲಕವೂ ಈ ಐಸ್ ಕ್ರೀಂ ದೊರೆಯುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರ ಸ್ವದೇಶೀ ಹಾಗೂ ಆತ್ಮನಿರ್ಭರ ಕರೆಯ ಹಿನ್ನಲೆಯಲ್ಲಿ ಐಸ್ ಕ್ರೀಂ ನಲ್ಲಿ ಇನ್ನಷ್ಟು ಪರಿವರ್ತನೆಗಳನ್ನು ಮಾಡುವ ಉದ್ದೇಶವನ್ನು ಸುಹಾಸ್ ಹೊಂದಿದ್ದಾರೆ.
Published by: G Hareeshkumar
First published: September 5, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading