Diesel Theft: ಚಿನ್ನ, ಬೆಳ್ಳಿ ಬೇಡ ಎಂದು ಡೀಸೆಲ್ ಕದ್ದ ಕಳ್ಳರು..!; 4 ಲಕ್ಷ ರೂಪಾಯಿ ಮೌಲ್ಯದ ಡೀಸೆಲ್ ಸ್ಟಾಕ್

ಯಾದಗಿರಿ ನಗರದ ಮುಂಡರಗಿ ರಸ್ತೆ ಮಾರ್ಗದ ಎಸ್ಸಾರ್ ಪೆಟ್ರೋಲ್ ಬಂಕ್​​ನಲ್ಲಿ ನಿನ್ನೆ ತಡರಾತ್ರಿ 2700 ಲೀಟರ್ ಡೀಸೆಲ್​ ಕಳ್ಳತನವಾಗಿದೆ. ಜೂನ್ 20 ರಂದು ಗುರು ಪೆಟ್ರೋಲ್ ಬಂಕ್ ನಲ್ಲಿ 2000 ಲೀಟರ್ ಡೀಸೆಲ್​ ಕಳ್ಳತನ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯಾದಗಿರಿ(ಜು.02): ದೇಶಾದ್ಯಂತ ಪೆಟ್ರೋಲ್​-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್​ ಬೆಲೆ 100 ರೂ.ದಾಟಿದೆ. ಬೆಲೆ ಏರಿಕೆಯಿಂದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಪೆಟ್ರೋಲ್​-ಡೀಸೆಲ್​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಾಗಿರುವ ಹಿನ್ನೆಲೆ, ಈಗ ಪೆಟ್ರೋಲ್​​ ಖದೀಮರು ಸೃಷ್ಟಿಯಾಗಿದ್ದಾರೆ.  ಹೌದು, ಪೆಟ್ರೋಲ್​-ಡೀಸೆಲ್​ ಬೆಲೆ ಗಗನಕ್ಕೇರಿರುವ ಕಾರಣಕ್ಕೆ ಕಳ್ಳರು ಪೆಟ್ರೋಲ್​ ಕದ್ದಿದ್ದಾರೆ. ಯಾದಗಿರಿಯಲ್ಲಿ ಖದೀಮರ ಗ್ಯಾಂಗ್​ ಒಂದು ಡೀಸೆಲ್​ ಕಳ್ಳತನ ಮಾಡಿದೆ. 

  ಪೆಟ್ರೋಲ್​ ಬಂಕ್​ ಮಾಲೀಕರು ಮತ್ತು ಸಿಬ್ಬಂದಿ ಎಚ್ಚರ ತಪ್ಪಿದರೆ, ನಿದ್ರೆಗೆ ಜಾರಿದರೆ ಬಂಕ್​ನಲ್ಲಿರುವ ಪೆಟ್ರೋಲ್​-ಡೀಸೆಲ್​ ಖಾಲಿಯಾಗೋದು ಗ್ಯಾರಂಟಿ. ಯಾದಗಿರಿ ನಗರದಲ್ಲಿ ಡೀಸೆಲ್​​ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಖದೀಮರು ಹಗಲು ಹೊತ್ತು ಹೊಂಚು ಹಾಕಿ ರಾತ್ರಿ ಹೊತ್ತು ಡಿಸೇಲ್ ಕಳ್ಳತನ ಮಾಡುತ್ತಿದ್ದಾರೆ.

  ಯಾದಗಿರಿ ನಗರದಲ್ಲಿರುವ ಎರಡು ಪೆಟ್ರೋಲ್ ಬಂಕ್​ಗಳಲ್ಲಿ  4700 ಲೀಟರ್ ಡಿಸೇಲ್ ಕಳ್ಳತನ ಮಾಡಿದ್ದಾರೆ.  4700 ಲೀಟರ್ ಡಿಸೇಲ್ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಯಾದಗಿರಿ ನಗರದ ಮುಂಡರಗಿ ರಸ್ತೆ ಮಾರ್ಗದ ಎಸ್ಸಾರ್ ಪೆಟ್ರೋಲ್ ಬಂಕ್​​ನಲ್ಲಿ ನಿನ್ನೆ ತಡರಾತ್ರಿ 2700 ಲೀಟರ್ ಡೀಸೆಲ್​ ಕಳ್ಳತನವಾಗಿದೆ. ಜೂನ್ 20 ರಂದು ಗುರು ಪೆಟ್ರೋಲ್ ಬಂಕ್ ನಲ್ಲಿ 2000 ಲೀಟರ್ ಡೀಸೆಲ್​ ಕಳ್ಳತನ ಮಾಡಿದ್ದಾರೆ.

  ಇದನ್ನೂ ಓದಿ:ಮದುವೆಗೆ ಬಂದವ್ರು ಪಾತ್ರೆ ತೊಳೆದು ಹೋಗಿ: ಬಂದ ಅತಿಥಿಗಳು ಫುಲ್ ಸುಸ್ತು !

  ಒಟ್ಟು 4 ಲಕ್ಷ ರೂ ಮೌಲ್ಯದ ಡೀಸೆಲ್​ನ್ನು ಕದ್ದೊಯ್ದಿದ್ದಾರೆ. ಅಂಡರ್ ಗ್ರೌಂಡ್ ನಲ್ಲಿರುವ ಡಿಸೇಲ್ ಟ್ಯಾಂಕ್ ಕವರ್ ಓಪನ್ ಮಾಡಿ ಪೈಪ್ ಹಾಕಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾವನ್ನು ಬಟ್ಟೆಯಿಂದ ಕವರ್ ಮಾಡಿ ಬಳಿಕ ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಸಿಗದೇ ಹಾಗೆ ಕಳ್ಳತನ ಎಸಗಿದ್ದಾರೆ.

  ಸ್ಥಳಕ್ಕೆ ಎಸ್ಪಿ ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒರಿಸ್ಸಾ, ಕೇರಳ, ಆಂಧ್ರಪ್ರದೇಶ, ಲಡಾಖ್, ಬಿಹಾರ, ಜಮ್ಮು ಕಾಶ್ಮೀರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್​ಗೆ 102 ರೂ. ಆಗಿದೆ. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

  ಇದನ್ನೂ ಓದಿ:Bengaluru: ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತು ಆ ದೊಡ್ಡ ಶಬ್ಧ; ಇದಕ್ಕೆ ಕಾರಣವೇನು?

  ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.16 ರೂ. ಇದೆ. ಕೊಲ್ಕತ್ತಾದಲ್ಲಿ 99.04 ರೂ., ಮುಂಬೈನಲ್ಲಿ 105.24 ರೂ., ಚೆನ್ನೈನಲ್ಲಿ 100.13 ರೂ., ನೋಯ್ಡಾದಲ್ಲಿ 96.39 ರೂ., ಬೆಂಗಳೂರಿನಲ್ಲಿ 102.48 ರೂ., ಭುವನೇಶ್ವರದಲ್ಲಿ 99.77 ರೂ., ಹೈದರಾಬಾದ್ನಲ್ಲಿ 103.05 ರೂ., ಜೈಪುರದಲ್ಲಿ 106.18 ರೂ., ಲಕ್ನೋದಲ್ಲಿ 96.31 ರೂ., ಪಾಟ್ನಾದಲ್ಲಿ 101.49 ರೂ., ತಿರುವನಂತಪುರದಲ್ಲಿ 100.87 ರೂ. ಆಗಿದೆ.

  ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಈಗಾಗಲೇ ಡೀಸೆಲ್ ಬೆಲೆ ಶತಕ ಬಾರಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಭುವನೇಶ್ವರ, ಚೆನ್ನೈ ಸೇರಿ ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ ಬೆಲೆ 89.18 ರೂ. ಇದೆ. ಚೆನ್ನೈನಲ್ಲಿ 93.72 ರೂ, ಮುಂಬೈನಲ್ಲಿ 96.72 ರೂ, ಬೆಂಗಳೂರಿನಲ್ಲಿ 94.54 ರೂ, ಹೈದರಾಬಾದ್ನಲ್ಲಿ 97.20 ರೂ. ಇದೆ.
  Published by:Latha CG
  First published: