news18-kannada Updated:December 9, 2020, 8:10 PM IST
ಮಾಜಿ ಸಿಎಂಗಳಾದ
ಎಚ್.ಡಿ. ಕುಮಾರಸ್ವಾಮಿ-ಸಿದ್ದರಾಮಯ್ಯ.
ಕೋಲಾರ (ಡಿಸೆಂಬರ್ 09); ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿಕಾರಿರುವ ಹೆಚ್.ಡಿ. ಕುಮಾರಸ್ವಾಮಿ, "ರಾಜ್ಯದಲ್ಲಿ ಹಲವಾರು ಭಾಗ್ಯಗಳನ್ನ ಕೊಟ್ಟಿದ್ದೇನೆ, 13 ಸಲ ಬಜೆಟ್ ಮಂಡಿಸಿದ್ದೇನೆ ಎಂದು ಸಿದ್ದರಾಮಯ್ಯ ಹೋದಲ್ಲೆಲ್ಲಾ ಹೇಳಿಕೊಳ್ಳುತ್ತಾರೆ. ಆದರೆ, ಅವರೇನು ತಮ್ಮ ಮನೆಯಿಂದ ಹಣ ತಂದು ಕೊಟ್ಟಿದ್ದಾರ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೋಲಾರದ ರತ್ನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ನಂತರ ಮಾತನಾಡಿದ ಕುಮಾರಸ್ವಾಮಿ, "ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾನು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೇನೆ. 19 ಸಾವಿರ ಕೋಟಿ ಹಣವನ್ನ ರಾಜ್ಯದ ತೆರಿಗೆ ಹಣದಿಂದ ಕೊಟ್ಟಿದ್ದೇನೆ. ಆದರೆ, ನಾನು ಎಲ್ಲೂ ನನ್ನ ಮನೆಯಿಂದ ಹಣ ತಂದುಕೊಟ್ಟೆ ಎಂದು ಹೇಳಿಲ್ಲ. ಆದರೆ, ಸಿದ್ದರಾಮಯ್ಯ ಯಾವುದೋ ಹುಂಡಿಯಿಂದ ಹಣ ತಂದಹಾಗೆ ಮಾತನಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಜ್ಯದಲ್ಲಿ ಆರ್ಥಿಕ ಸಚಿವರಾಗಿ 13 ಬಾರಿ ಬಜೆಟ್ ಮಂಡನೆ ಮಾಡಿದವರಿಗೆ ಅಷ್ಟೂ ತಿಳುವಳಿಕೆ ಇಲ್ವಾ? 13 ಬಾರಿ ಬಜೆಟ್ ಮಂಡಿಸಿದ ಹಣವನ್ನ ಸಿದ್ದರಾಮಯ್ಯ ಅವರ ಮನೆಯಿಂದ ತಂದು ಕೊಟ್ಟಿದ್ದಾರಾ" ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ವಿರುದ್ಧವೂ ಕಿಡಿಕಾರಿರುವ ಕುಮಾರಸ್ವಾಮಿ, "ನಾನು ಬೆಳಗ್ಗೆಯೇ ಸಿಎಂ ರನ್ನ ಭೇಟಿ ಮಾಡಿದ್ದೇನೆ. ಆದರೆ, ಡಿಕೆ ಶಿವಕುಮಾರ್ ಮಧ್ಯರಾತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಸದನದಲ್ಲಿ ಖುದ್ದು ಸಿಎಂ ಯಡಿಯೂರಪ್ಪ, ಈ ವಿಚಾರ ಹೇಳಿದ್ದು ಮಧ್ಯರಾತ್ರಿ ಬಂದು ನನ್ನ ಬಳಿ ಕೆಲಸ ಮಾಡಿಕೊಂಡು ಹೋಗಿದೀರಾ ಎಂದು ಡಿಕೆಶಿ ವಿರುದ್ಧ ಗುಡುಗಿದ್ದಾರೆ. ನಾನು ಅಭಿವೃದ್ಧಿ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೇನೆ. ಆದರೆ ನನ್ನ ವೈಯಕ್ತಿಯ ಕೆಲಸಗಳನ್ನು ಮಾಡಿಕೊಳ್ಳಲು ಭೇಟಿ ಮಾಡಿಲ್ಲ.
ಇದನ್ನೂ ಓದಿ : ಡೀಲ್ ಮಾಸ್ಟರ್ ಆಗಿ ಜೀವನ ಮಾಡೋ ಹೀನಾಯ ಪರಿಸ್ಥಿತಿಗೆ ಬಂದಿಲ್ಲ, ಮಾತನಾಡೊ ಮುನ್ನ ಎಚ್ಚರಿಕೆ ಇರಲಿ; ಕುಮಾರಸ್ವಾಮಿ
ಪ್ರಧಾನಿ ಮಾಡಿ ಎಂದು ದೇವೇಗೌಡರು ಅರ್ಜಿ ಹಾಕಿಲ್ಲ, ಉತ್ತಮವಾಗಿ ಕೆಲಸ ಮಾಡುತ್ತಿದ್ದ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಇಳಿಸಿದ್ದು ಯಾರು? ಇವರಿಗೆ ಬಹುಮತ ಇಲ್ಲದೆ ಬನ್ನಿ ಎಂದು ಕಾಲಿಗೆ ಬಿದ್ದು ಪ್ರಧಾನಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಮೊನ್ನೆ ನಾನು ಸಿಎಂ ಆದಾಗಲು ನಮ್ಮ ಬಳಿಗೆ ಬಂದು ಕೇಳಿಕೊಂಡಿದ್ದರು, ನಾನು ಬಿಜೆಪಿ ಪರ ಮೃದುದೋರಣೆ ಇಟ್ಟುಕೊಂಡಿಲ್ಲ. ಎಲ್ಲಾ ಉಪಚುನಾವಣೆಯಲ್ಲು ಬಿಜೆಪಿಯವರು ಜಯ ಗಳಿಸಿದ್ದಾರೆ. ಜನರೇ ಅವರ ಬಗ್ಗೆ ಮೃದುದೋರಣೆ ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.
Published by:
MAshok Kumar
First published:
December 9, 2020, 8:10 PM IST