MS Dhoni: ಫ್ಲಾಟ್​ ಕೊಂಡುಕೊಂಡ ಧೋನಿ ಹಾಗೂ 1,800ಕ್ಕೂ ಹೆಚ್ಚು ಜನರಿಗೆ 15 ದಿನಗಳಲ್ಲಿ ಬಾಕಿ ಹಣ ನೀಡುವಂತೆ ನೋಟಿಸ್‌..!

ಈ ಹಿಂದೆ, ಆಗಸ್ಟ್ 14, 2021ರಂದು, ಉನ್ನತ ನ್ಯಾಯಾಲಯವು ಸಹ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಮನೆ ಖರೀದಿದಾರರು ಬಾಕಿ ಮೊತ್ತ ಪಾವತಿಸಲು ಮತ್ತು ನೋಂದಾಯಿಸಲು 15 ದಿನಗಳ ನೋಟಿಸ್ ನೀಡುವುದಾಗಿ ಹೇಳಿತ್ತು. ಇದನ್ನು 9,538 ಖರೀದಿದಾರರಿಗೆ ನೀಡಬೇಕಿತ್ತು. ಹಾಗೂ ಗಡುವನ್ನು ಪೂರೈಸಲು ವಿಫಲವಾದರೆ, ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುವುದಿಲ್ಲ ಮತ್ತು ಹರಾಜು ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು.

ಎಂ.ಎಸ್. ಧೋನಿ

ಎಂ.ಎಸ್. ಧೋನಿ

 • Share this:

  ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಉತ್ತರ ಪ್ರದೇಶದ ನೋಯ್ಡಾದ ಆಮ್ರಪಾಲಿ ಹೌಸಿಂಗ್ ಪ್ರಾಜೆಕ್ಟ್‌ಗಳ 1,800 ಮನೆ ಖರೀದಿದಾರರಿಗೆ ಎರಡು ವಾರಗಳಲ್ಲಿ ತಮ್ಮ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗಿದೆ.


  ಸುಪ್ರೀಂ ಕೋರ್ಟ್ ನೇಮಿಸಿದ ರಿಸೀವರ್ ಹಾಗೂ ಹಿರಿಯ ವಕೀಲ ಆರ್ ವೆಂಕಟರಮಣಿ, ವಸತಿ ಯೋಜನೆಯ ನಿವಾಸಿಗಳು ನೋಟಿಸ್ ನೀಡಿದ 15 ದಿನಗಳೊಳಗೆ ಪಾವತಿಗಳನ್ನು ಮಾಡುವಂತೆ ಸೂಚಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.


  ಮನೆ ಖರೀದಿದಾರರು ಗ್ರಾಹಕರ ಡೇಟಾಬೇಸ್‌ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಲು ವಿಫಲವಾದರೆ ಮತ್ತು ಅವರು ನಿಗದಿತ ಕಾಲಮಿತಿಯೊಳಗೆ ಪಾವತಿ ಮಾಡಲು ವಿಫಲವಾದರೆ ಈ ಮನೆ ಖರೀದಿದಾರರಿಂದ ಬುಕ್ ಮಾಡಲಾದ ಫ್ಲ್ಯಾಟ್‌ಗಳ ಹಂಚಿಕೆಗಳು ರದ್ದಾಗುವ ಸಾಧ್ಯತೆಯಿದೆ. ಈ ಸಂಬಂಧ ಧೋನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಆಮ್ರಪಾಲಿ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದ ಮಹೇಂದ್ರ ಸಿಂಗ್ ಧೋನಿ, 2016ರ ಏಪ್ರಿಲ್‌ನಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಆಮ್ರಪಾಲಿ ಸ್ಥಗಿತಗೊಂಡ ಯೋಜನೆಗಳ ಹೂಡಿಕೆ ಪುನರ್‌ ನಿರ್ಮಾಣ ಸ್ಥಾಪನೆ (ASPIRE) ಎಂಬ ಸಂಸ್ಥೆಯನ್ನೂ ರಚಿಸಲಾಗಿದೆ.


  ಸರ್ಕಾರಿ ಸ್ವಾಮ್ಯದ ಎನ್‌ಬಿಸಿಸಿಗೆ 20ಕ್ಕೂ ಹೆಚ್ಚು ವಸತಿ ಯೋಜನೆಗಳ ನಿರ್ಮಾಣವನ್ನು 8,000 ಕೋಟಿ ರೂ.ಗಳ ಅಂದಾಜು ಹೂಡಿಕೆಯ ಬಜೆಟ್ ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಈ ಯೋಜನೆಯು ನ್ಯಾಯಾಲಯ ನೇಮಿಸಿದ ಸಮಿತಿಯ ವ್ಯಾಪ್ತಿಗೆ ಬರುತ್ತಿದೆ ಎಂದು ವರದಿಯಾಗಿದೆ.


  ಆಮ್ರಪಾಲಿ ಯೋಜನೆಗಳನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡ ನಂತರ, ಎಲ್ಲಾ ಮನೆ ಖರೀದಿದಾರರು ತಮ್ಮ ವಿವರಗಳನ್ನು ನೋಂದಾಯಿಸಲು ಮತ್ತು ಬಾಕಿ ಪಾವತಿಗಳನ್ನು ಮಾಡಲು ಕೇಳಲಾಯಿತು. ಈ ಮನೆ ಖರೀದಿದಾರರು ಈ ವಿಷಯಕ್ಕೆ ಸಂಬಂಧಿಸಿದಂತೆ 2019ರ ಜುಲೈನಲ್ಲಿ ತೀರ್ಪು ನೀಡಿದ ನಂತರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯ ಗಮನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯವು ನೇಮಿಸಿದ ರಿಸೀವರ್ ಜಾಹೀರಾತಿನಲ್ಲಿ ಈ ಸೂಚನೆಯ ಉದ್ದೇಶವನ್ನು ಹೇಳಿದ ನಂತರ ಇದನ್ನು ಸಾರ್ವಜನಿಕರ ಗಮನಕ್ಕೆ ತರಲಾಯಿತು.

  ಎಂ.ಎಸ್ ಧೋನಿ. ಈ ಹಿಂದೆ ಈ ಪ್ರಾಜೆಕ್ಟ್‌ನಲ್ಲಿ ಸೆಕ್ಟರ್ 45 ನೋಯ್ಡಾದಲ್ಲಿ ಸಫೈರ್‌ ಫೇಸ್‌ - 1ನಲ್ಲಿ C-P5 ಹಾಗೂ C-P6 ಎಂಬ ಎರಡು ಫ್ಲ್ಯಾಟ್‌ಗಳನ್ನು ಬುಕ್ ಮಾಡಿದ್ದರು ಎಂದು ವರದಿಗಳು ಹೇಳುತ್ತವೆ. ಧೋನಿಯನ್ನು ಪ್ರತಿನಿಧಿಸುವ ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಅರುಣ್ ಪಾಂಡೆ ಕೂಡ ಈ ಯೋಜನೆಯಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ ಎಂಬುದನ್ನು ಗಮನಿಸಬೇಕು. ಅವರು ಅದೇ ಪ್ರಾಜೆಕ್ಟ್‌ನಲ್ಲಿ C-P4 ಘಟಕದಲ್ಲಿ ಬುಕ್ ಮಾಡಿದ್ದಾರೆ ಎಂದೂ ವರದಿಗಳು ಸೂಚಿಸುತ್ತವೆ. ಧೋನಿಯಂತೆಯೇ, ಪಾಂಡೆ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

  ಗ್ರೇಟರ್ ನೋಯ್ಡಾ ಪ್ರದೇಶದಲ್ಲಿರುವ ಪ್ರಾಜೆಕ್ಟ್‌ಗಳ ಖರೀದಿದಾರರಿಗಾಗಿ ನಿಯೋಜಿತ ರಿಸೀವರ್ ಶೀಘ್ರದಲ್ಲೇ ಪ್ರತ್ಯೇಕ ಸೂಚನೆ ನೀಡಲಿದ್ದಾರೆ. ಈ ಸೂಚನೆಯ "ಪರಿಣಾಮವಾಗಿ, ಅವರನ್ನು ಡೀಫಾಲ್ಟರ್‌ಗಳೆಂದು ಪರಿಗಣಿಸಬೇಕು ಮತ್ತು ಅವರ ಬುಕ್ಕಿಂಗ್​ಗಳನ್ನು ರದ್ದುಗೊಳಿಸಲಾಗುವುದು" ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾದ ಜನರ ಕುರಿತು ಮಾತನಾಡಿದ್ದಾರೆ.

  ''ಕಸ್ಟಮರ್‌ ಡೇಟಾದಲ್ಲಿ ನೋಂದಾಯಿಸಲು ಮತ್ತು ಈ ಸೂಚನೆ ಬಂದ ದಿನದಿಂದ 15 ದಿನಗಳಲ್ಲಿ ಪಾವತಿ ಮಾಡಲು ಪ್ರಾರಂಭಿಸುವುದನ್ನು ವಿಫಲವಾದರೆ ಹಂಚಿಕೆಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲು ಕಾರಣವಾಗುತ್ತದೆ'' ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.


  ಈ ಹಿಂದೆ, ಆಗಸ್ಟ್ 14, 2021ರಂದು, ಉನ್ನತ ನ್ಯಾಯಾಲಯವು ಸಹ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಮನೆ ಖರೀದಿದಾರರು ಬಾಕಿ ಮೊತ್ತ ಪಾವತಿಸಲು ಮತ್ತು ನೋಂದಾಯಿಸಲು 15 ದಿನಗಳ ನೋಟಿಸ್ ನೀಡುವುದಾಗಿ ಹೇಳಿತ್ತು. ಇದನ್ನು 9,538 ಖರೀದಿದಾರರಿಗೆ ನೀಡಬೇಕಿತ್ತು. ಹಾಗೂ ಗಡುವನ್ನು ಪೂರೈಸಲು ವಿಫಲವಾದರೆ, ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗುವುದಿಲ್ಲ ಮತ್ತು ಹರಾಜು ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು.


  ನ್ಯಾಯಾಧೀಶರಾದ ಯು.ಯು.ಲಲಿತ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ,


  ಮನೆ ಖರೀದಿದಾರರ ಪರ ಹಾಜರಾದ ವಕೀಲ ಎಂಎಲ್ ಲಾಹೋಟಿ ನಂತರ ಈ ವಿಷಯದ ಕುರಿತು ಆದೇಶ ಹೊರಡಿಸುವುದಾಗಿ ಹೇಳಿತ್ತು.


  ಇದನ್ನೂ ಓದಿ: IQRA cheating- ಬೆಂಗಳೂರಲ್ಲಿ ಮತ್ತೊಂದು ಬ್ಲೇಡ್ ಕಂಪನಿ; ಇಕ್ರಾಗೆ ಲಕ್ಷ ಲಕ್ಷ ಕೊಟ್ಟವರ ಕಣ್ಣೀರು

  ಜುಲೈ 2019ರಲ್ಲಿ, ಸುಪ್ರೀಂ ಕೋರ್ಟ್ ಆಮ್ರಪಾಲಿ ಗ್ರೂಪ್ ಅನ್ನು NCRನಲ್ಲಿನ ಪ್ರಮುಖ ಸ್ಥಳಗಳಿಂದ ಭೂಮಿಗೆ ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ತೀರ್ಪು ನೀಡಿತು. ರೇರಾ ರಿಯಲ್ ಎಸ್ಟೇಟ್ ಕಾನೂನಿನ ಅಡಿಯಲ್ಲಿ ನೋಂದಾಯಿಸುವುದನ್ನು ಸಹ ತಡೆಯಲಾಗಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: