HOME » NEWS » District » DHOBIS ARE IN CRITICAL CONDITION AS THEY HAVENT GET LOCKDOWN RELIEF FUND IN KARNATAKA MAK

ಸಂಕಷ್ಟದಲ್ಲಿ ದೋಬಿಗಳು; ಇನ್ನೂ ಸಿಕ್ಕಿಲ್ಲ ಸರ್ಕಾರದ ಲಾಕ್‌ಡೌನ್ ಸಹಾಯಧನ

ತೀರಾ ಬಡತನದಲ್ಲಿರುವ ಅಗಸರ ಕುಟುಂಬಗಳಿಗೆ ಸರಕಾರವು ಆನ್‌ಲಾಕ್ ಘೋಷಣೆಯಾದ ನಂತರ ಪ್ರತಿ ಕುಟುಂಬಕ್ಕೆ 5000 ರೂ. ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿತ್ತು. ಅದಕ್ಕಾಗಿ ಸೇವಾ ಸಿಂಧುವಿನಲ್ಲಿ ಮಡಿವಾಳ ಸಮುದಾಯದವರು ತಮ್ಮ ಮಾಹಿತಿಯನ್ನು ಅಪಲೋಡ್ ಮಾಡಿದ್ದಾರೆ. ಆದರೆ, ಅಪ್‌ಲೋಡ್‌ ಮಾಡಿ ಎರಡು ತಿಂಗಳಾಗುತ್ತಾ ಬಂದರೂ ಸರಕಾರದಿಂದ ಒಂದು ನಯಾಪೈಸೆ ಹಣ ಬಂದಿಲ್ಲ.

news18-kannada
Updated:August 6, 2020, 6:14 PM IST
ಸಂಕಷ್ಟದಲ್ಲಿ ದೋಬಿಗಳು; ಇನ್ನೂ ಸಿಕ್ಕಿಲ್ಲ ಸರ್ಕಾರದ ಲಾಕ್‌ಡೌನ್ ಸಹಾಯಧನ
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು; ಮಹಾಮಾರಿ ಕೊರೋನಾ ಅನೇಕರಿಗೆ ಸಂಕಷ್ಟ ತಂದಿದೆ. ನಿತ್ಯ ದುಡಿದು ಬದುಕು ಅನೇಕ ಕುಟುಂಬಗಳು ಈಗಲೂ ನೆಲೆ ಕಂಡುಕೊಂಡಿಲ್ಲ. ಈ ಮಧ್ಯೆ ಸರಕಾರ ಇಂಥ ಕುಶಲಕರ್ಮಿಗಳಿಗೆ 5 ಸಾವಿರ ರೂಪಾಯಿ ನೆರವು ನೀಡುವುದಾಗಿ ಘೋಷಿಸಿತ್ತು. ಆದರೆ, ಇಲ್ಲಿಯವರೆಗೂ ಕುಶಲಕರ್ಮಿಗಳಿಗೆ ಹಣ ಜಮಾ ಆಗಿಲ್ಲ. ಹೀಗಾಗಿ ಸಂಕಷ್ಟ ಸಮಯದಲ್ಲಿ ಸರಕಾರ ನೀಡುವ ಪರಿಹಾರ ಹಣಕ್ಕಾಗಿ ಕಾಯಿಯುವಂತಾಗಿದೆ.

ಮಾರ್ಚ್‌ ತಿಂಗಳಲ್ಲಿ ಕಾಣಿಸಿಕೊಂಡ ಮಹಾಮಾರಿ‌ ಕೊರೋನಾ ನಿತ್ಯ ದುಡಿದು ತಿನ್ನುವ ಕುಟುಂಬಗಳ ಬದುಕನ್ನೆ ಕಸಿದುಕೊಂಡಿತ್ತು. ಕೊರೋನಾ ಹರಡುವ ಹಿನ್ನಲೆಯಲ್ಲಿ ಬಟ್ಟೆ ಸ್ವಚ್ಛ ಹಾಗು ಇಸ್ತ್ರಿ ಮಾಡುವ ಮಡಿವಾಳ ಅಥವಾ ಅಗಸರ ಅಂಗಡಿಗಳನ್ನು ಸಹ ಬಂದ ಮಾಡಲಾಗಿತ್ತು. ಸುಮಾರು ಎರಡು ತಿಂಗಳು ಈ ಕುಟುಂಬಗಳಿಗೆ ದುಡಿಮೆ ಇರಲಿಲ್ಲ,  ಅಂದು ದಾನಿಗಳು ನೀಡಿರುವ ಆಹಾರ ಪೊಟ್ಟಣವನ್ನು ನೆಚ್ಚಿಕೊಂಡು ಅನೇಕರು ಬದುಕು ಸವೆಸಿದ್ದಾರೆ.

ತೀರಾ ಬಡತನದಲ್ಲಿರುವ ಅಗಸರ ಕುಟುಂಬಗಳಿಗೆ ಸರಕಾರವು ಆನ್‌ಲಾಕ್ ಘೋಷಣೆಯಾದ ನಂತರ ಪ್ರತಿ ಕುಟುಂಬಕ್ಕೆ 5000 ರೂ. ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿತ್ತು. ಅದಕ್ಕಾಗಿ ಸೇವಾ ಸಿಂಧುವಿನಲ್ಲಿ ಮಡಿವಾಳ ಸಮುದಾಯದವರು ತಮ್ಮ ಮಾಹಿತಿಯನ್ನು ಅಪಲೋಡ್ ಮಾಡಿದ್ದಾರೆ. ಆದರೆ, ಅಪ್‌ಲೋಡ್‌ ಮಾಡಿ ಎರಡು ತಿಂಗಳಾಗುತ್ತಾ ಬಂದರೂ ಸರಕಾರದಿಂದ ಒಂದು ನಯಾಪೈಸೆ ಹಣ ಬಂದಿಲ್ಲ.

ಇದನ್ನೂ ಓದಿ : ಕೊರೋನಾ ಕುರಿತು ತಪ್ಪು ಮಾಹಿತಿ; ಟ್ರಂಪ್ ಹಂಚಿಕೊಂಡ ವಿಡಿಯೋ ನಿರ್ಬಂಧಿಸಿದ ಟ್ವಿಟರ್‌-ಫೇಸ್‌ಬುಕ್

ಈಗ ಅನ್‌ಲಾಕ್‌ ಘೋಷಣೆಯಾಗಿದ್ದರೂ ಲಾಂಡ್ರಿಗಳಿಗೆ ಬಟ್ಟೆ ನೀಡುವ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರಕಾರ ಘೋಷಣೆ ಮಾಡಿದಂತೆ ಪರಿಹಾರವನ್ನು ಬೇಗನೆ ನೀಡಬೇಕು. ಕೇವಲ ಪರಿಶೀಲನೆ ನೆಪದಲ್ಲಿ ಕಾಯಿಸಬಾರದು ಎಂದು ಮಡಿವಾಳ ಸಮುದಾಯದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲು ಕಾರ್ಮಿಕ ಇಲಾಖೆಗೆ ನೀಡಿದ್ದು, ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಸಿಬ್ಬಂದಿಗೆ ಜವಾಬ್ದಾರಿ ವಹಿಸಿದ್ದಾರೆ.
Youtube Video

ಈಗಾಗಲೇ ಶೇ.60 ರಷ್ಟು ಅರ್ಜಿಗಳನ್ನು ಪರಿಶೀಲನೆ ಮಾಡಿ ಅನುಮೋದನೆ ನೀಡಲಾಗಿದೆ. ಸರಕಾರದಿಂದ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 4562 ಜನ ಅಗಸರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 536 ಜನರ ಅರ್ಜಿ ಪರಿಶೀಲನೆ ಮಾಡಿ 22 ಜನರ ಅರ್ಜಿ ತಿರಸ್ಕರಿಸಲಾಗಿದೆ. 173 ಜನರ ಅರ್ಜಿಯನ್ನು ಅನುಮೋದನೆ ಮಾಡಲಾಗಿದೆ. ಈಗಾಗಲೇ ವಿಳಂಭವಾಗಿರುವದರಿಂದ ಪರಿಶೀಲನೆಯ ನೆಪದಲ್ಲಿ ಅಧಿಕಾರಿಗಳು ದಿನ ದೂಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.
Published by: MAshok Kumar
First published: August 6, 2020, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories