HOME » NEWS » District » DHARWAD KIADB SERVES NOTICE TO FARMERS FOR LAND ACQUISITION FARMERS REFUSE TO LEAVE THEIR LAND MYD SKTV

8 ಸಾವಿರ ಎಕರೆ ಜಮೀನು ಪಡೆಯಲು ಕೆ.ಐ.ಎ.ಡಿ.ಬಿ ಯಿಂದ ರೈತರಿಗೆ ನೋಟಿಸ್ : ಯಾವುದೇ ಕಾರಣಕ್ಕೂ ಜಮೀನ ನೀಡಲ್ಲ ಎಂದು ಪಟ್ಟುಹಿಡಿದ ರೈತ ವರ್ಗ

ಧಾರವಾಡ ತಾಲೂಕಿನ ಗುಳೇದಕೊಪ್ಪ, ಶಿಂಗನಹಳ್ಳಿ, ಕೋಟೂರ, ಹೆಗ್ಗೇರಿ, ವೆಂಕಟಾಪುರ, ಕಲ್ಲಾಪುರ, ವೀರಾಪುರ ಸೇರಿದಂತೆ ಹದಿನಾಲ್ಕು ಗ್ರಾಮಗಳ ರೈತರಿಗೆ ಸದ್ಯ ನೋಟಿಸ್ ನೀಡಲಾಗುತ್ತಿದೆ. ಈ ಗ್ರಾಮಗಳಲ್ಲಿನ ನೂರಾರು ರೈತರ 8 ಸಾವಿರಕ್ಕೂ ಅಧಿಕ ಎಕರೆಯಷ್ಟು ಜಮೀನನ್ನು ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ.

news18-kannada
Updated:April 10, 2021, 8:29 AM IST
8 ಸಾವಿರ ಎಕರೆ ಜಮೀನು ಪಡೆಯಲು ಕೆ.ಐ.ಎ.ಡಿ.ಬಿ ಯಿಂದ ರೈತರಿಗೆ ನೋಟಿಸ್ : ಯಾವುದೇ ಕಾರಣಕ್ಕೂ ಜಮೀನ ನೀಡಲ್ಲ ಎಂದು ಪಟ್ಟುಹಿಡಿದ ರೈತ ವರ್ಗ
ಆತಂಕದಲ್ಲಿರುವ ರೈತರು
  • Share this:
ಧಾರವಾಡ(ಏಪ್ರಿಲ್ 09) : ಅವರೆಲ್ಲ ಕೃಷಿಯನ್ನೇ ನಂಬಿ ಜೀವನ ನಡೆಸುವ ರೈತರು. ಜಮೀನೇ ನಮಗೆ ಆಧಾರ ಎಂದುಕೊಂಡವರಿಗೆ ಕೆ.ಐ.ಎ.ಡಿ.ಬಿ ನೋಟಿಸ್ ನೀಡುವ ಮೂಲಕ ಶಾಕ್ ನೀಡಿದೆ. ಧಾರವಾಡ ಜಿಲ್ಲೆಯ ಹದಿನಾಲ್ಕು ಗ್ರಾಮದ ರೈತರಿಗೆ ಕೆ.ಐ.ಎ.ಡಿ.ಬಿ ನೋಟಿಸ್ ನೀಡುತ್ತಿರೊ ಹಿನ್ನೆಲೆ ರೈತ ವರ್ಗಕ್ಕೆ ಬಡಸಿಡಿಲು ಬಡಿದಂತಾಗಿದೆ. ಬದುಕಿಗೆ ಆಸರೆಯಾಗಿದ್ದ ಭೂಮಿಯನ್ನೇ ಕಳೆದುಕೋಳ್ಳಬೇಕಾ ಎಂಬ ಭೀತಿಯಲ್ಲಿದ್ದಾರೆ ರೈತರು. ಆದ್ರೆ ನಮ್ಮ ಫಲವತ್ತಾದ ಜಮೀನುಗಳನ್ನು ನೀಡಲ್ಲ ಎಂದು ಪಟ್ಟುಹಿಡಿದ್ದಾರೆ.  

ಧಾರವಾಡ ತಾಲೂಕಿನ ಗುಳೇದಕೊಪ್ಪ, ಶಿಂಗನಹಳ್ಳಿ, ಕೋಟೂರ, ಹೆಗ್ಗೇರಿ, ವೆಂಕಟಾಪುರ, ಕಲ್ಲಾಪುರ, ವೀರಾಪುರ ಸೇರಿದಂತೆ ಹದಿನಾಲ್ಕು ಗ್ರಾಮಗಳ ರೈತರಿಗೆ ಸದ್ಯ ನೋಟಿಸ್ ನೀಡಲಾಗುತ್ತಿದೆ. ಈ ಗ್ರಾಮಗಳಲ್ಲಿನ ನೂರಾರು ರೈತರ 8 ಸಾವಿರಕ್ಕೂ ಅಧಿಕ ಎಕರೆಯಷ್ಟು ಜಮೀನನ್ನು ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಈ ಸಂಬಂಧ ರೈತರ ಮನೆಗಳಿಗೆ ನೋಟೀಸ್ ಬರೋಕೆ ಶುರವಾಗಿದ್ದೇ ತಡ ರೈತರಲ್ಲಿ ಆತಂಕ ಮನೆ ಮಾಡಿದೆ.

ಈಗಾಗಲೇ ಧಾರವಾಡದ ಇದೇ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನುಗಳನ್ನು ಕೆ.ಐ.ಎ.ಡಿ.ಬಿ ಭೂ ಸ್ವಾಧೀನ ಮಾಡಿಕೊಂಡಿದೆ. ಈ ಪ್ರದೇಶದಲ್ಲಿ ಕೈಗಾರಿಕೆಗಳು ಸಹ ಸ್ಥಾಪನೆ ಆಗಿವೆ. ಆದ್ರೆ ಈಗ ಮತ್ತೆ ಸಾವಿರಾರು ಎಕರೆ ಜಮೀನು ಪಡೆಯಲು ಕೆ.ಐ.ಎ.ಡಿ.ಬಿ ನೋಟಿಸ್ ನೀಡುತ್ತಿರುವುದು ಹಲವು ಅನುಮಾಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನು ಈ ರೈತರಿಗೆಲ್ಲ ಹೊರಡಿಸಲಾಗಿರೋ ನೋಟಿಸ್ ತುಂಬಾ ತಡವಾಗಿ ನೀಡಿದ್ದಾರೆ ಅನ್ನೋ ಆರೋಪವೂ ಸಹ ಕೇಳಿ ಬಂದಿದೆ. ಅದರಲ್ಲಿ ರೈತರಗೆ ನೀಡಲಾಗಿದ್ದ ಅವಧಿಯೂ ಸಹ ಮುಗಿಯೋಕೆ ಬಂದಿದೆ. ಹೀಗಾಗಿ ಕಂಗೆಟ್ಟು ಹೋದ ರೈತರಲ್ಲಿ ಆತಂಕ ಮನೆ ಮಾಡಿದೆ. ಆದ್ರೆ ಯಾವುದೇ ಕಾರಣಕ್ಕೂ ನಮ್ಮ ಜಮೀಣುಗಳನ್ನು ನೀಡಲ್ಲ ಎಂದು ರೈತರು ಪಟ್ಟಹಿಡಿದಿದ್ದಾರೆ.

ನಮ್ಮ ಜಮೀನುಗಳನ್ನ ಪಡೆಯಲು ಕೆ.ಐ.ಎ.ಡಿ.ಬಿ ನೋಟಿಸ್ ನೀಡಿದ್ರಲ್ಲಿ ರಾಜಕೀಯ ಇದೆ. ಯಾರದೋ ಲಾಭಕ್ಕೆ ನಮ್ಮ ಜಮೀನುಗಳಲ್ಲಿ ನೀಡಲ್ಲ, ನಮ್ಮ ವಿರೋಧದ ನಡುವೆ ಜಮೀನುಗಳಿಗೆ ಅಧಿಕಾರಿಗಳು ಕಾಲಿಡಲು ಬಿಡಲ್ಲ ಎಂದು ರೈತ ವಿಠ್ಠಲ ಎಚ್ಚರಿಕೆ ನೀಡಿದ್ದಾರೆ. ರೈತರಿಗೆ ಕೆ.ಐ.ಎ.ಡಿ.ಬಿ ಯಿಂದ ನೀಡಿದ ನೋಟಿಸ್ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಜಿಲ್ಲಾಧಿಕಾರಿ ನಿತೇಶ ಪಾಟೀಲ.

ಒಟ್ಟಾರೆಯಾಗಿ ರೈತರ ಬದುಕಿಗೆ ಆಸರೆಯಾದ ಜಮೀನುಗಳ ಮೇಲೆ ಕೆ.ಐ.ಎ.ಡಿ.ಬಿ ಕಣ್ಣು ಬಿದ್ದಿದೆ. ಈ ಭೂಮಿ ತುಂಬಾ ಫಲವತ್ತಾಗಿರೋ ಕಾರಣಕ್ಕೆ ಎಷ್ಟೇ ಲಕ್ಷ ಕೊಟ್ಟರೂ ನಾವು ಬಿಟ್ಟು ಕೊಡೊದಿಲ್ಲ ಎಂದು ಪಟ್ಟು ಹಿಡಿದ್ದಾರೆ ರೈತರು. ಆದ್ರೆ ಕೆಐಎಡಿಬಿ ಮಾತ್ರ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಆದ್ರೆ ರೈತರ ವಿರೋಧದ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Published by: Soumya KN
First published: April 10, 2021, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories