ಕೋವಿಡ್ ರೋಗಿ ಮೃತಪಟ್ಟು 2 ದಿನ ನಂತರ ಆರೋಗ್ಯ ವಿಚಾರಣೆ; 9 ದಿನ ನಂತರ ಮನೆ ಸೀಲ್​ಡೌನ್; ಇಲಾಖೆ ಯಡವಟ್ಟು

62 ವರ್ಷದ ವ್ಯಕ್ತಿ ಕೊರೋನಾದಿಂದ ಮೃತಪಡುತ್ತಾರೆ. ಅವರು ಸತ್ತ 9 ದಿನಕ್ಕೆ ಮನೆ ಸೀಲ್​ಡೌನ್ ಮಾಡಲಾಗುತ್ತದೆ. ಈ ಬೆಳವಣಿಗೆ ಕಂಡು ಅವರ ಮನೆಯ ಹಿರಿಯ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

news18-kannada
Updated:August 2, 2020, 1:48 PM IST
ಕೋವಿಡ್ ರೋಗಿ ಮೃತಪಟ್ಟು 2 ದಿನ ನಂತರ ಆರೋಗ್ಯ ವಿಚಾರಣೆ; 9 ದಿನ ನಂತರ ಮನೆ ಸೀಲ್​ಡೌನ್; ಇಲಾಖೆ ಯಡವಟ್ಟು
ಸಾಂದರ್ಭಿಕ ಚಿತ್ರ
  • Share this:
ಧಾರವಾಡ: ಕೊರೋನಾ ವೈರಸ್ ಎಂಬ ಮಹಾಮಾರಿ ರಾಜ್ಯದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಇತ್ತ ಆರೋಗ್ಯ ಇಲಾಖೆ ಸಿಬ್ಬಂದಿಯ ಯಡವಟ್ಟಿನಿಂದ ಸೋಂಕಿತರ ಸಂಬಂಧಿಗಳಿಗೆ ಆಘಾತ ಆಗಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಮೃತಪಟ್ಟು 2 ದಿನಗಳ ನಂತರ ಆರೋಗ್ಯ ವಿಚಾರಣೆಗೆ ಮುಂದಾಗಿದ್ಧಾರೆ. 9 ದಿನಗಳ ಬಳಿಕ ಮನೆ ಸೀಲ್​ಡೌನ್ ಮಾಡಲಾಗಿದೆ. ಇವೆಲ್ಲಾ ಬೆಳವಣಿಗೆ ಕಂಡ ಕುಟುಂಬದ ಮತ್ತೋರ್ವ ವೃದ್ಧೆ ಆತಂಕಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಧಾರವಾಡದ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ನಿವಾಸಿಯಾದ 62 ವರ್ಷದ ಚಂದ್ರಶೇಖರ್ ಎಂಬುವರಿಗೆ  ಹೃದಯ ನೋವು ಕಾಣಿಸಿಕೊಳ್ಳುತ್ತದೆ. ಹೃದಯ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಸಂಬಂಧಿಗಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ‌ಮುಂದಾಗುತ್ತಾರೆ. ಆದ್ರೆ ಖಾಸಗಿ ಆಸ್ಪತ್ರೆಯವರು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಾಗುವಂತೆ ಹೇಳುತ್ತಾರೆ. ಅದರಂತೆ ಜುಲೈ 23 ರಂದು ಕಿಮ್ಸ್ ಗೆ ದಾಖಲು ಮಾಡುತ್ತಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಬಳಿಕ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಬಳಿಕ ಚಿಕಿತ್ಸೆ ಫಲಿಸದೇ ಜುಲೈ 24 ರಂದು ರಾತ್ರಿ 8 ಗಂಟೆಗೆ ಮೃತಪಟ್ಟ ಬಗ್ಗೆ ಹೇಳಿದ್ದಾರೆ. ಅದರಂತೆ ಶವವನ್ನು ಸಹ ಅಂತ್ಯಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: Kamal Rani - ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೊಸ ದಾಖಲೆ ಸೃಷ್ಟಿಸಿದ್ದ ಸಚಿವೆ ಇಂದು ಕೋವಿಡ್​ನಿಂದ ಸಾವು

ಆದ್ರೆ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಎರಡು ದಿನಗಳ ಬಳಿಕ ಮೃತ‌ವ್ಯಕ್ತಿಯ ಸಂಬಂಧಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಕರೆ ಬರುತ್ತೆ. ನಿಮ್ಮ‌ ಮನೆಯ ಸದಸ್ಯ ಆರಾಮಾಗಿ ಇದಾರಾ ಎಂದು ಸಿಬ್ಬಂದಿ ಕೇಳಿದಾಗ, ಅವರು ಮೊನ್ನೆಯೇ‌ ನಿಧನವಾಗಿದ್ದಾರೆ ಎಂದು ಮನೆ ಸಂಬಂಧಿಗಳು ಹೇಳಿದ ಬಳಿಕ ಫೋನ್ ಕಟ್ ಆಗಿದೆ.

ಇಲಾಖೆ ಸಿಬ್ಬಂದಿ ಯಡವಟ್ಟು ಇಷ್ಟಕ್ಕೇ ನಿಲ್ಲುವುದಿಲ್ಲ. ಕೊರೋನಾ ರೋಗಿ ವ್ಯಕ್ತಿ ಮೃತಪಟ್ಟು 9 ದಿನಗಳ‌ ಬಳಿಕ ಅವರ ಮನೆ ಸೀಲ್​ಡೌನ್ ಮಾಡಿದ್ದಾರೆ. ಇದರಿಂದ ಮೃತನ ಸಂಬಂಧಿಗಳಿಗೆ ಶಾಕ್ ಆಗಿದೆ.

ಇದನ್ನೂ ಓದಿ: ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರಾಸಕ್ತಿ - ಕೊರೋನಾ ನೆಪದಲ್ಲಿ ಲೂಟಿಯಲ್ಲಿ ಆಸಕ್ತಿ ; ಪ್ರಿಯಾಂಕ್ ಖರ್ಗೆ ಕಿಡಿಕೊರೊನಾ ಸೋಂಕಿನಿಂದ ವ್ಯಕ್ತ ‌ಮೃತಪಟ್ಟು ಅಂತ್ಯಸಂಸ್ಕಾರ ನೆರವೇರಿಸಿದ ಬಳಿಕೆ ಇಲಾಖೆ ಅಧಿಕಾರಿಗಳು‌ ಆರೋಗ್ಯ ವಿಚಾರಿಸಲು ಫೋನ್ ಮಾಡಿದ್ದು‌, 9 ದಿನಗಳ ಬಳಿಕ ಮನೆ ‌ಸೀಲ್​ಡೌನ್ ಮಾಡಿದ್ದು ನೋಡಿದ್ರೆ ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಮನೆ ಸೀಲ್​ಡೌನ್ ಮಾಡುತ್ತಿದಂತೆ‌ ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಕುಟುಂಬದ 95 ವರ್ಷದ  ಓರ್ವ ವೃದ್ಧೆ ಸಹ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕೊರೋನಾ ವೈರಸ್​ನಿಂದ ಹಲವರು ಮೃತಪಡುತ್ತಿದ್ದರೆ ಇನ್ನೂ ಕೆಲ ಸಾವುಗಳು ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟಿನಿಂದ ಸಂಭವಿಸುತ್ತಿವೆ. ಮುಂದಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಯಡವಟ್ಟು ಮಾಡದಿರಲಿ ಎಂಬುದು ನಮ್ಮ ಆಶಯ.

ವರದಿ: ಮಂಜುನಾಥ ಯಡಳ್ಳಿ
Published by: Vijayasarthy SN
First published: August 2, 2020, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading