ಧಾರವಾಡದಲ್ಲಿ ಕೊರೋನಾ ಸ್ಥಿತಿಗತಿ, ಸವಾಲುಗಳ ಬಗ್ಗೆ ಮಾಹಿತಿ ನೀಡಿದ ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್

ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರೋಗ ನಿಯಂತ್ರಣ ಸಾಧ್ಯ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಬೇಗ ಪತ್ತೆ, ಬೇಗ ಚಿಕಿತ್ಸೆ ಮಾಡಿದ್ರೆ ಜಿಲ್ಲೆಯಲ್ಲಿ ರೋಗ ಇನ್ನೂ ಬೇಗ ಕಡಿಮೆಯಾಗುತ್ತೆ ಎಂದು ಚೋಳನ್ ಅವರು ನೂತನ ಜಿಲ್ಲಾಧಿಕಾರಿಗೆ ಕಿವಿಮಾತು ಹೇಳಿದ್ದಾರೆ.

news18-kannada
Updated:June 30, 2020, 7:27 PM IST
ಧಾರವಾಡದಲ್ಲಿ ಕೊರೋನಾ ಸ್ಥಿತಿಗತಿ, ಸವಾಲುಗಳ ಬಗ್ಗೆ ಮಾಹಿತಿ ನೀಡಿದ ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜೊತೆ ದೀಪಾ ಚೋಳನ್
  • Share this:
ಹುಬ್ಬಳ್ಳಿ(ಜೂನ್ 30): ಕೊರೋನಾ ನಿರ್ವಹಣೆ, ನಿಯಂತ್ರಣ ಮತ್ತು ಸವಾಲುಗಳ ಕುರಿತು ನಿರ್ಗಮಿತ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನ್ಯೂಸ್18 ಜೊತೆಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸರ್ವಶಿಕ್ಷಣ ಅಭಿಯಾನದ ಪ್ರೊಜೆಕ್ಟ್ ಡೈರಕ್ಟರ್‌ ಆಗಿ ಬೆಂಗಳೂರಿಗೆ ವರ್ಗಾವಣೆಯಾಗಿರುವ ದೀಪಾ ಚೋಳನ್ ಅವರು, ವರ್ಗಾವಣೆಯ ನಡುವೆಯೂ ಜಿಲ್ಲೆಯ ಕೊರೊನಾ ಪರಿಸ್ಥಿತಿಯ ಅನುಭವ ಹಂಚಿಕೊಂಡಿದ್ದಾರೆ.

ಲಾಕ್‌ಡೌನ್ ಆದಾಗ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಒಂದು ಸವಾಲಾಗಿತ್ತು. ಕೋವಿಡ್ ಪರೀಕ್ಷೆ, ಕೇಸ್ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆಗೆ ಗಮಹರಿಸಬೇಕಿತ್ತು. ಕೊರೊನಾ ವಾರಿಯರ್ಸ್ ಸಹಕಾರದಿಂದ ಹೆಚ್ಚಿನ ಕೊವಿಡ್ ಪರೀಕ್ಷೆ ಸಾಧ್ಯವಾಯಿತು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಲಾಗುತ್ತಿದೆ. ತುಂಬಾ ಜನ ಗುಣಮುಖರಾಗಿದ್ದು ನನಗೆ ಸಂತೋಷ ಕೊಟ್ಟಿದೆ. ಕೊರೋನಾ ಚಾಲೆಂಜ್ ನಮಗೆ ಹೊಸದಾಗಿತ್ತು. ಮುಂಚೆ ಯಾವತ್ತೂ ನೋಡದ ಚಾಲೆಂಜ್ ಇದಾಗಿತ್ತು. ಜನರಿಗೆ ಮಾಹಿತಿ ನೀಡಬೇಕಿತ್ತು, ಎಚ್ಚರಿಸಬೇಕಿತ್ತು. ಮಾಸ್ಕ್ ಧರಿಸುವುದು, ಸ್ಯಾನಿಟೈಜ್ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಬಹಳಷ್ಟು ತಿಳುವಳಿಕೆ ಹೇಳಬೇಕಾಯಿತು. ಇದಕ್ಕೂ ಮುಂಚೆ ಇಂತಹ ಕೆಲಸ ಮಾಡಿರಲಿಲ್ಲ. ಲಾಕ್‌ಡೌನ್ ಸಡಿಲಿಕೆಯ ನಂತರ ಜನರಿಗೆ ಮತ್ತಷ್ಟು ತಿಳುವಳಿಕೆ ಹೇಳಿದ್ದೇವೆ. ಕೆಮ್ಮು, ಜ್ವರ ಬಂದರೆ ಕೂಡಲೆ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿ. ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಚಿಕಿತ್ಸೆ ಕೊಡುವುದು ಸರಳ ಎಂದು ತಿಳಿಸಿದ್ದೇವೆ ಎಂದು ಧಾರವಾಡ ಜಿಲ್ಲೆಯ ಕೊರೋನಾ ಸ್ಥಿತಿಗತಿಯ ಕುರಿತು ದೀಪಾ ಚೋಳನ್ ವಿವರಿಸಿದ್ದಾರೆ.

ಇದನ್ನೂ ಓದಿ: ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ನಿತೇಶ್ ಪಾಟೀಲ್ ಅಧಿಕಾರ ಸ್ವೀಕಾರಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಿಗೆ ನ್ಯೂಸ್18 ಮೂಲಕ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಧಾರವಾಡ ಒಂದು ಒಳ್ಳೆಯ ಜಿಲ್ಲೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಉತ್ತಮ ಸಹಕಾರ ಕೊಡುತ್ತಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರೋಗ ನಿಯಂತ್ರಣ ಸಾಧ್ಯ. ಆರೋಗ್ಯ ಇಲಾಖೆಯಿಂದ ನಮಗೆ ನಿರಂತರ ನಿರ್ದೇಶನ ಬರುತ್ತಿತ್ತು. ಯಾರಿಗೆ ಕ್ವಾರಂಟೈನ್ ಮಾಡಬೇಕು, ಯಾರಿಗೆ ಟೆಸ್ಟ್ ಮಾಡಬೇಕು ಎಂದು ಸೂಚನೆ ಬರುತ್ತಿತ್ತು. ಪಾಸಿಟಿವ್ ಬಂದರೆ ಹೇಗೆಲ್ಲಾ ಚಿಕಿತ್ಸೆ ನೀಡಬೇಕೆಂದು ಹೇಳುತ್ತಿದ್ದರು. ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಸದ್ಯಕ್ಕೆ ಕೇವಲ 139 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಎಲ್ಲರನ್ನೂ ಬೇಗ ಗುಣಮುಖರಾಗಿ ಕಳಿಸುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ. ಬೇಗ ಪತ್ತೆ, ಬೇಗ ಚಿಕಿತ್ಸೆ ಮಾಡಿದ್ರೆ ಜಿಲ್ಲೆಯಲ್ಲಿ ರೋಗ ಇನ್ನೂ ಬೇಗ ಕಡಿಮೆಯಾಗುತ್ತೆ ಎಂದವರು ತಿಳಿಸಿದ್ದಾರೆ.
First published: June 30, 2020, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading