ಧಾರವಾಡ: ಕೊರೋನಾ ಲಸಿಕೆ ಹಾಕಲು ಇಪ್ಪತ್ತು ಸಾವಿರ ಆರೋಗ್ಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದ ಜಿಲ್ಲಾಡಳಿತ

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು.ಜ.08 ರಂದು ಜಿಲ್ಲೆಯ ಆಯ್ದ ಎಂಟು ಆಸ್ಪತ್ರೆಗಳಲ್ಲಿ ಲಸಿಕೆಯ ಸಾಗಣೆಯಿಂದ ಹಿಡಿದು, ಅದನ್ನು ವ್ಯಕ್ತಿಗೆ ಹಾಕುವವರೆಗೆ  ಪ್ರತಿಯೊಂದು ಹಂತಗಳ  ಪ್ರಯೋಗಾರ್ಥಕ ಅಣುಕು ಲಸಿಕೆ ( Dry Run) ಪರೀಕ್ಷೆ ಕೈಗೊಳ್ಳಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧವಾಗಿವೆ.

ಕೋವಿಡ್ ಲಸಿಕೆ.

ಕೋವಿಡ್ ಲಸಿಕೆ.

  • Share this:
ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಹಂಚಿಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಕಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಡದಲ್ಲಿನ ಜಿಲ್ಲಾಸ್ಪತ್ರೆ, ತಾಲ್ಲೂಕಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಸಿಕೆ‌ ಸಂಗ್ರಹಕ್ಕೆ 61ಐ‌ಎಲ್‌ಆರ್ ಮತ್ತು 61ಡೀಪ್ ಫ್ರೀಜರ್‌ಗಳು ಸಜ್ಜಾಗಿವೆ. ಧಾರವಾಡ ಜಿಲ್ಲೆಯಲ್ಲಿ 6.50 ಲಕ್ಷ ಡೋಜ್ ಸಂಗ್ರಹಿಸಲು ಸಿದ್ಧತೆಯಾಗಿದೆ. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸುಮಾರು 20 ಸಾವಿರ ಡೋಜ್ ಸಂಗ್ರಹಕ್ಕೆ ಐಎಲ್ಆರ್ ವ್ಯವಸ್ಥೆಯಿದೆ. ಎಸ್.ಡಿಎಂ ಆಸ್ಪತ್ರೆ, ರೈಲ್ವೆ ಆಸ್ಪತ್ರೆಯಲ್ಲಿಯೂ ವ್ಯಾಕ್ಸಿನ್ ಸಂಗ್ರಹಕ್ಕೆ ವ್ಯವಸ್ಥೆ ಇದ್ದು ಮೂರು ಹಂತದಲ್ಲಿ ವ್ಯಾಕ್ಸಿನ್ ಕೊಡಲು ಯುದ್ಧೋಪಾದಿ ತಯಾರಿ ನಡೆದಿದೆ‌ ಎಂಬ ಮಾಹಿತಿಗಳು ದೊರೆಯುತ್ತಿವೆ.

20 ಸಾವಿರ ಜನ ಹೆಲ್ತ್ ಕೇರ್ ವರ್ಕರ್ಸ್‌ಗಳನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಜ್ಜುಗೊಳಿಸಿವೆ. ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಪಟ್ಟಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳಿಸಲಾಗಿದೆ. ಮೂರು ಹಂತದಲ್ಲಿ ಲಸಿಕೆ ನೀಡಲು ತಯಾರಿಯಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತ. ಕೊರೊನಾ ವಾರಿಯರ್ಸ್ ಮತ್ತು ಫ್ರಂಟ್‌ಲೈನ್ ಕೆಲಸಗಾರರಿಗೆ ಎರಡನೆಯ ಹಂತ. ಐವತ್ತು ವರ್ಷ ದಾಟಿದವರು, ಅನಾರೋಗ್ಯ ಪೀಡಿತರಿಗೆ ಮೂರನೆಯ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಜೆಡಿಎಸ್​ನಿಂದ ಉಚ್ಛಾಟಿಸಲಿ; ಜಿ.ಟಿ. ದೇವೇಗೌಡ

ಜ.8 ರಂದು ಕೋವಿಡ್ ಲಸಿಕೆಯ  ಪ್ರಯೋಗಾರ್ಥಕ ಅಣಕು  ಪರೀಕ್ಷೆ

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು.ಜ.08 ರಂದು ಜಿಲ್ಲೆಯ ಆಯ್ದ ಎಂಟು ಆಸ್ಪತ್ರೆಗಳಲ್ಲಿ ಲಸಿಕೆಯ ಸಾಗಣೆಯಿಂದ ಹಿಡಿದು, ಅದನ್ನು ವ್ಯಕ್ತಿಗೆ ಹಾಕುವವರೆಗೆ  ಪ್ರತಿಯೊಂದು ಹಂತಗಳ  ಪ್ರಯೋಗಾರ್ಥಕ ಅಣುಕು ಲಸಿಕೆ ( Dry Run) ಪರೀಕ್ಷೆ ಕೈಗೊಳ್ಳಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧವಾಗಿವೆ.

ಧಾರವಾಡದ ಜಿಲ್ಲಾ ಆಸ್ಪತ್ರೆ, ಪುರೋಹಿತ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ,ಹುಬ್ಬಳ್ಳಿಯ ಕಿಮ್ಸ್,ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜು, ಸುಚಿರಾಯು ಆಸ್ಪತ್ರೆ, ಗರಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ನವಲಗುಂದ ತಾಲೂಕು ಆಸ್ಪತ್ರೆ ಹಾಗೂ  ಸತ್ತೂರಿನ ಎಸ್ ಡಿ ಎಂ ಆಸ್ಪತ್ರೆಗಳಿಗೆ ಅಂದು ಈ ಪ್ರಯೋಗಾರ್ಥ  ಪರೀಕ್ಷೆ ನಡೆಯಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Published by:MAshok Kumar
First published: