HOME » NEWS » District » DHARME GOWDA WHO DOES NOT MENTION THE EXACT REASON OF DEATH IN THE DEATH NOTE RHHSN VCTV

ಡೆತ್​ನೋಟ್​ನಲ್ಲಿ ಸಾವಿಗೆ ನಿಖರ ಕಾರಣ ಉಲ್ಲೇಖಿಸದ ಧರ್ಮೇಗೌಡರು; ಕೈ ಬರಹ ಖಾತ್ರಿಗೆ ಪತ್ರ ಬೆಂಗಳೂರಿಗೆ ರವಾನೆ

ಇನ್ನು ಧರ್ಮೇಗೌಡರ ಮನೆಯಲ್ಲಿ ಏನಾದರೂ ಸಮಸ್ಯೆ ಇತ್ತಾ, ಸಾವಿಗೆ ನಿಖರ ಕಾರಣವಾದರೂ ಏನು ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಸದ್ಯ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿಯಬೇಕಿದೆ.

news18-kannada
Updated:January 6, 2021, 6:17 AM IST
ಡೆತ್​ನೋಟ್​ನಲ್ಲಿ ಸಾವಿಗೆ ನಿಖರ ಕಾರಣ ಉಲ್ಲೇಖಿಸದ ಧರ್ಮೇಗೌಡರು; ಕೈ ಬರಹ ಖಾತ್ರಿಗೆ ಪತ್ರ ಬೆಂಗಳೂರಿಗೆ ರವಾನೆ
ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ
  • Share this:
ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಡೆತ್ ನೋಟ್ ಬರೆದಿಟ್ಟು ಡಿಸೆಂಬರ್ 28 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಡೆತ್ ನೋಟ್ ನಲ್ಲಿ ಇದೇ ಕಾರಣದಿಂದ ಸಾವನಪ್ಪುತ್ತಿದ್ದೇನೆಂದು ಧರ್ಮೆಗೌಡರು ಉಲ್ಲೇಖ ಮಾಡಿಲ್ಲ. ನನ್ನ ಆತ್ಮಹತ್ಯೆಗೆ ಇದೇ ಕಾರಣ ಎಂದು ಡೆತ್ ನೋಟ್ ನಲ್ಲಿ ಎಲ್ಲೂ ಕೂಡ ಪ್ರಸ್ತಾಪ ಮಾಡಿಲ್ಲ ಎಂಬುದು ಇದೀಗ ನ್ಯೂಸ್ 18 ಗೆ ಮಾಹಿತಿ ಲಭ್ಯವಾಗಿದೆ.

ಹೌದು, ಡಿಸೆಂಬರ್ 28 ರಂದು ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಸಾವು ಹಲವು ಅನುಮಾನಕ್ಕೆ ಎಡೆಮಾಡೆಕೊಟ್ಟಿದೆ. ಅಷ್ಟಕ್ಕೂ ಈ ಅನುಮಾನಕ್ಕೆ ಕಾರಣವಾಗಿರೋದು ಆತ್ಮಹತ್ಯೆಗೂ ಮುನ್ನ ಎಸ್.ಎಲ್. ಧರ್ಮೇಗೌಡರು ಬರೆದಿಟ್ಟಿರುವ ಡೆತ್ ನೋಟ್. ಹೌದು, ಧರ್ಮೇಗೌಡರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಸುಮಾರು ಎರಡು ಪುಟದ ಡೆತ್ ನೋಟ್ ಬರೆದಿದ್ದಾರೆ ಅನ್ನೋದು ತಿಳಿದುಬಂದಿದ್ದರೂ ನಿಖರವಾಗಿ ಏನು ಬರೆದಿದ್ದರೂ ಅನ್ನೋದು ಈ ಕ್ಷಣಕ್ಕೂ ಕೂಡ ಗೊತ್ತಾಗಿರಲಿಲ್ಲ. ಅವರು ಬರೆದಿಟ್ಟ ಡೆತ್ ನೋಟ್ ನಲ್ಲಿ ಏನೇನು ಇದೆ ಎಂಬುದು ಈವರೆಗೆ ತಿಳಿದಿರಲಿಲ್ಲ. ಸದ್ಯ ಧರ್ಮೇಗೌಡರ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹಾಸನ ಜಿಲ್ಲೆ ಅರಸೀಕೆರೆ ರೈಲ್ವೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಸೂರಜ್ ಸಾವಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಪ್ರಯತ್ನ ಮಾಡ್ತಾ ಇದ್ದಾರೆ.

ಇನ್ನು ಧರ್ಮೇಗೌಡರು ಡೆತ್ ನೋಟ್ ನಲ್ಲಿ ಇದೇ ಕಾರಣದಿಂದ ಸಾವನಪ್ಪುತ್ತಿದ್ದೇನೆಂದು ಎಲ್ಲೂ ಕೂಡ ಉಲ್ಲೇಖ ಮಾಡಿಲ್ಲ. ಡೆತ್ ನೋಟ್ ನಲ್ಲಿ ಆಸ್ತಿ ವಿಚಾರ ಪ್ರಸ್ತಾಪ ಮಾಡಿರೋ ಧರ್ಮೇಗೌಡರು, ನನ್ನ ಆಸ್ತಿಯನ್ನ ನನ್ನ ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಿ ಎಂದು ಉಲ್ಲೇಖ ಮಾಡಿದ್ದಾರೆ. ಇನ್ನು ವಿಧಾನಪರಿಷತ್ ನಲ್ಲಿ ನಡೆದ ಘಟನೆ ಮನಸ್ಸಿಗೆ ನೋವು ತಂದಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಆದರೆ ಸಾವಿಗೆ ಇದೇ ಕಾರಣ, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆಂದು ಎಲ್ಲೂ ಹೇಳಿಲ್ಲ. ಡೆತ್ ನೋಟ್ ನಲ್ಲಿ ಸಾವಿಗೆ ನಿಖರ ಕಾರಣ ಪ್ರಸ್ತಾಪ ಮಾಡದೇ ಆತ್ಮಹತ್ಯೆ ಶರಣಾಗಿದ್ದಾರೆ.

ಇದನ್ನು ಓದಿ: ಬೆಂಗಳೂರಿನ ಮತ್ತೊಬ್ಬರಲ್ಲಿ ರೂಪಾಂತರಿ ಕೊರೋನಾ‌ ಪತ್ತೆ: 11ಕ್ಕೆ ಏರಿದ ಬ್ರಿಟನ್ ಸೋಂಕಿತರ ಸಂಖ್ಯೆ

ಇನ್ನು ತನಿಖೆ ಚುರುಕುಗೊಳಿಸಿರುವ ರೈಲ್ವೆ ಪೊಲೀಸರು ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ ದಿನದ ಕಾರ್ಯಕ್ರಮಗಳ ಮಾಹಿತಿ ಸಂಗ್ರಹಿಸಿದ್ದಾರೆ. ಡಿಸೆಂಬರ್ 28 ರಂದು ಚಿಕ್ಕಮಗಳೂರು ನಗರದಲ್ಲಿ ಎಲ್ಲೇಲ್ಲಿ ಭಾಗವಹಿಸಿದ್ದರು. ಕೊನೆಯ ಭಾಷಣದ ಹಾವಬಾವ ಹೇಗಿತ್ತು ಎಂಬ ಮಾಹಿತಿಯನ್ನು ಚಿಕ್ಕಮಗಳೂರು ನಗರಕ್ಕೆ ಬಂದು ಸಂಗ್ರಹಿಸಿದ್ದಾರೆ. ಇನ್ನು ಧರ್ಮೇಗೌಡರ ಕೈ ಬರಹ ಖಾತ್ರಿ ಮಾಡಿಕೊಳ್ಳಲು ಬೆಂಗಳೂರಿನ ಎಫ್ ಎಸ್ ಎಲ್ ಗೆ ರವಾನೆ ಮಾಡಿ ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ, ಈ ಕ್ಷಣದವರೆಗೂ ನಿಗೂಢವಾಗಿರುವ ಪರಿಷತ್ ಉಪಸಭಾಪತಿಯವರ ಆತ್ಮಹತ್ಯೆಯ ಹಿಂದೆ ಏನೋ ಬಲವಾದ ಕಾರಣವಿದೆ ಅನ್ನೋದಂತೂ ಸ್ಪಷ್ಟ. ಇನ್ನು ಧರ್ಮೇಗೌಡರ ಮನೆಯಲ್ಲಿ ಏನಾದರೂ ಸಮಸ್ಯೆ ಇತ್ತಾ, ಸಾವಿಗೆ ನಿಖರ ಕಾರಣವಾದರೂ ಏನು ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಸದ್ಯ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿಯಬೇಕಿದೆ.
Published by: HR Ramesh
First published: January 6, 2021, 6:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories