Dr Veerendra Heggade - ಡಾ. ಡಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

ಡಾ ಡಿ ವಿರೇಂದ್ರ ಹೆಗ್ಗಡೆ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ... ಹೆಗ್ಗಡೆಯ ವ್ಯಕ್ತಿತ್ವ ಎಂತಹವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹೆಗ್ಗೆಡೆಯವರ ನಡೆ, ವಿನಯತೆಗೆ ಶ್ರೇಷ್ಠಾತಿ ಶ್ರೇಷ್ಠರಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಹೆಗ್ಗಡೆಯವರ ಈ ಒಂದು ವಿಶೇಷ ಹವ್ಯಾಸದ ಬಗ್ಗೆ ಗೊತ್ತಿರುವವರು ಬಹಳ ಕಡಿಮೆ.

ಡಾ. ವೀರೇಂದ್ರ ಹೆಗ್ಗಡೆ

ಡಾ. ವೀರೇಂದ್ರ ಹೆಗ್ಗಡೆ

  • Share this:
ದಕ್ಷಿಣ ಭಾರತದ ಪರಮ ಪವಿತ್ರ ತಾಣ ಧರ್ಮಸ್ಥಳ... ಅಲ್ಲಿನ ಅಭಯ ದಾನ, ಅನ್ನದಾನಕ್ಕೆ ಕೋಟ್ಯಾಂತರ ಭಕ್ತರು ಮನಸೋತಿದ್ದಾರೆ.. ಮನಸೋಲುತ್ತಿದ್ದಾರೆ.. ಹೌದು..ಧರ್ಮಸ್ಥಳ ಎಂಬ ಹೆಸರನ್ನು ವಿಶ್ವವಿಖ್ಯಾತಗೊಳಿಸಿದವರು ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ ವಿರೇಂದ್ರ ಹೆಗ್ಗಡೆ... ಲಕ್ಷಾಂತರ ಭಕ್ತರ ಮನೆಗಳಲ್ಲಿ ಧರ್ಮಸ್ಥಳದ ಮಂಜುನಾಥನ ಚಿತ್ರದ ಜೊತೆಗೆ ವಿರೇಂದ್ರ ಹೆಗ್ಗಡೆಯವರ ಪೋಟೋಗೂ ಆರಾಧನೆಯಾಗುತ್ತಿದೆ.. ಭಕ್ತರ ಮನೆಗಳಲ್ಲಿ ಪೋಟೋಗಳಲ್ಲಿ ಪೂಜಿಸುತ್ತಿರುವ ವಿರೇಂದ್ರ ಹೆಗ್ಗಡೆಯವರಿಗೆ ಪೋಟೋಗ್ರಾಫಿ ಅಂದ್ರೆ ಅಚ್ಚು ಮೆಚ್ಚು. ತನ್ನ ಸುಪ್ತ ಮನಸ್ಸಿನ ತುಡಿತಗಳನ್ನು ಪೋಟೋಗಳಲ್ಲಿ ಪ್ರದರ್ಶಿಸುವ ವಿರೇಂದ್ರ ಹೆಗ್ಗಡೆ ಒಬ್ಬ ಸೂಪರ್ ಪೋಟೋಗ್ರಾಫರ್.

ವಿರೇಂದ್ರ ಹೆಗ್ಗಡೆಯವರ ಕೈಯಲ್ಲಿ ಕ್ಯಾಮೆರಾ ಇರದ ದಿನಗಳಿಲ್ಲ. ಪ್ರತಿ ಬಾರಿಯ ಪ್ರವಾಸದಲ್ಲಿ ತನ್ನ ನೆಚ್ಚಿನ ಕ್ಯಾಮೆರಾದೊಂದಿಗೆ ಪ್ರಯಾಣಿಸುವ  ವಿರೇಂದ್ರ ಹೆಗ್ಗಡೆಯವರು ಭಾವ ತುಂಬಿದ ಪೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಧರ್ಮಾಧಿಕಾರಿಯವರ ಪೋಟೋ ಫ್ರೇಮ್​ಗಳನ್ನು ಗಮನಿಸಿದಾಗ ಯಾವ ಶ್ರೇಷ್ಠ ಪೋಟೋಗ್ರಾಫರ್​ಗಳಿಗೂ ಕಡಿಮೆ ಇಲ್ಲ ಎನಿಸುತ್ತದೆ. ಅವರು ಕ್ಲಿಕ್ಕಿಸಿದ ಪೋಟೋಗಳಲ್ಲಿ ಅವರ ಪರಿಸರ ಮತ್ತು ಸಾಮಾಜಿಕ ಕಾಳಜಿಯನ್ನು ಕಾಣಬಹುದು. ಡಾ| ವಿರೇಂದ್ರ ಹೆಗ್ಗಡೆಯವರಿಗೆ ಬಾಲ್ಯದಿಂದಲೇ ಪೋಟೋ ತೆಗೆಯುವ ಗೀಳು. ಹೋದಲೆಲ್ಲಾ ಫೋಟೋಗಳನ್ನು ಕ್ಲಿಕ್ಕಿಸುವ ವಿರೇಂದ್ರ ಹೆಗ್ಗಡೆಯವರ ಪೋಟೋಗಳು ಒಂದಕ್ಕಿಂತ ಒಂದು ಸೂಪರ್. ವಿರೇಂದ್ರ ಹೆಗ್ಗಡೆಯವರ ಪೋಟೋಗಳಲ್ಲಿ ಸಾಮಾಜಿಕ ಮತ್ತು ಪರಿಸರ ಕಾಳಜಿ ಪ್ರತಿರೂಪಗೊಳಿಸುತ್ತದೆ. ವಿದೇಶ ಪ್ರವಾಸಗಳಲ್ಲಿ ಕ್ಯಾಮೆರಾದೊಂದಿಗೆ ಹೋಗುವ ಖಾವಂದರು ನೋಡಿದ ಎಲ್ಲಾ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ.

ಡಾ ಹೆಗ್ಗಡೆಯವರಿಗೆ ಪ್ರತಿಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯೋದಂದ್ರೆ ತುಂಬಾ ಇಷ್ಟ. ತಮ್ಮ ಸುಪ್ತ ಮನಸ್ಸಿನ ಭಾವನೆಗೆಳನ್ನು ಪೋಟೋಗಳಲ್ಲಿ ಕಾಣುವ ವಿರೇಂದ್ರ ಹೆಗ್ಗಡೆಯವರಿಗೆ ತಾವೊಬ್ಬ ದೊಡ್ಡ ಪೋಟೋಗ್ರಾಫರ್ ಎಂಬ ಅಹಂಕಾರ ಇಲ್ಲ. ಪ್ರೋಫೇಶನ್ ಪೋಟೋಗ್ರಾಫರ್​ಗೂ ಮೀರಿದ ಪೋಟೋಗಳನ್ನು ಕ್ಲಿಕ್ಕಿಸಿದರೂ ತಮ್ಮ ಪೋಟೋದ ಬಗ್ಗೆ ಎಂದೂ ಅಹಂ ಪ್ರದರ್ಶಿಸಿಲ್ಲ. ಪರಿಣತಿಯನ್ನು ಹೊಂದಿದ್ದರೂ ಮತ್ತಷ್ಟು ಕಲಿಯಬೇಕೆಂಬ ತನ್ಮಯತೆ ಡಾ| ಡಿ ವಿರೇಂದ್ರ ಹೆಗ್ಗಡೆಯವರದ್ದು. ಛಾಯಚಿತ್ರಗ್ರಾಹಕನ ಅಂತರಂಗದ ಪ್ರತಿಬಿಂಬ ಪೋಟೋಗಳಲ್ಲಿ ಕಾಣುವ ಮತ್ತು ವಸ್ತುವನ್ನು ಆಸ್ವಾಧಿಸುವ ಶಕ್ತಿ ಪೋಟೋಗ್ರಾಫರ್​ಗಳಿಗೆ ಮಾತ್ರ ಇರೋದ್ರಿಂದ ಯುವಕರು ಹೆಚ್ಚೆಚ್ಚು ಪೋಟೋಗ್ರಾಫಿ ಹವ್ಯಾಸ ಅಳವಡಿಸಿಕೊಳ್ಳಬೇಕೆಂದು ವಿರೇಂದ್ರ ಹೆಗ್ಗಡೆಯವರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಮಂಡ್ಯ ಬೆಲ್ಲಕ್ಕೆ ಅಂಟಿದ ಕಳಂಕ: ಕಳಪೆ ಬೆಲ್ಲ ತಯಾರಕರ ವಿರುದ್ಧ ಟೊಂಕಕಟ್ಟಿ ನಿಂತ ಆಲೆಮನೆ ಮಾಲೀಕರು

ವಿರೇಂದ್ರ ಹೆಗ್ಗಡೆಯವರು ತಮ್ಮ ಕುಟುಂಬದ ಜೊತೆಗೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಕುಟುಂಬದ ಜೊತೆಗೆ ಹೋದಾಗ ತಮ್ಮ ಕುಟುಂಬದ ಪೋಟೋವನ್ನು ವಿರೇಂದ್ರ ಹೆಗ್ಗಡೆಯವರೇ ಕ್ಲಿಕ್ಕಿಸುತ್ತಾರೆ. ಮನೆಯ ಯಜಮಾನನ ಕೈಚಳಕದಲ್ಲಿ ತಾವು ಸೆರೆಯಾಗಿರೋದು ಕಂಡು ಕುಟುಂಬದವರೂ ಖುಷಿಯಾಗುತ್ತಾರೆ. ಹೆಚ್ಚಾಗಿ ಚೀನಾ ದೇಶಕ್ಕೆ ಪ್ರವಾಸಕ್ಕೆ ಹೋಗುವ ಹೆಗ್ಗಡೆ ಕುಟುಂಬ ಅಲ್ಲಿನ ಜನ, ಅವರ ಜೀವನ ಶೈಲಿಯ ಬಗ್ಗೆ ಅಧ್ಯಯನ ಮಾಡುತ್ತಾರೆ. ಪೃಕೃತಿಯ ಸುಂದರ ದೃಶ್ಯಕಾವ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಹೆಗ್ಗಡೆ ಅದ್ಭುತವಾಗಿ ಸೆರೆಹಿಡಿಯುತ್ತಾರೆ.

ತಮ್ಮ ಮನಸ್ಸಿನ ಭಾವನೆಗಳನ್ನು ಸೆರೆಹಿಡಿಯುವ ಹೆಗ್ಗಡೆಯವರು ಪೋಟೋಗ್ರಾಫಿಯಲ್ಲಿ ಇನ್ನೂ ಹೆಚ್ಚು ಅಧ್ಯಯನ ಮಾಡುತ್ತಿದ್ದಾರೆ. ತನ್ನ ಮನಸ್ಸಿನ ಖುಷಿಗಾಗಿ ಪೋಟೋ ಕ್ಲಿಕ್ಕಿಸುವ ವಿರೇಂದ್ರ ಹೆಗ್ಗಡೆಯವರು ಅದನ್ನೆಂದೂ ಹೊರಜಗತ್ತಿನಲ್ಲಿ ಪ್ರದರ್ಶಿಸಿ ಮೆಚ್ಚುಗೆಯ ಮಾತು ಕೇಳಿ ಖುಷಿ ಪಡೆದುಕೊಂಡಿಲ್ಲ.

ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಶ್ರೇಷ್ಠ ಪೋಟೋಗ್ರಾಫರ್ ಮಾತ್ರವಲ್ಲ, ಅದ್ಭುತ ಸಂಗ್ರಹಕಾರ ಕೂಡಾ ಹೌದು. ವಿರೇಂದ್ರ ಹೆಗ್ಗಡೆಯವರ ಬಳಿ ಅತೀ ಅಪರೂಪದಲ್ಲಿ ಅಪರೂಪವಾದ 250 ಕ್ಯಾಮೆರಾಗಳಿವೆ. ಕ್ಯಾಮೆರಾ ಬೆಳೆದು ಬಂದ ಹಾದಿಯೇ ಹೆಗ್ಗಡೆಯವರ ಬಳಿ ಇದೆ. ಕ್ಯಾಮಾರಾಗಳನ್ನು ಸಂಗ್ರಹ ಮಾಡೋದು ಕೂಡ ಹೆಗ್ಗಡೆಯವರ ಹವ್ಯಾಸಗಳಲ್ಲಿ ಒಂದಾಗಿದೆ. ಅತ್ಯಂತ ಹಳೆಯ ಸ್ಪೈ ಕ್ಯಾಮೆರಾ, ಇನ್ ಹೋಲ್ ಕ್ಯಾಮೆರಾ, ಫೀಲ್ಡ್ ಕ್ಯಾಮೆರಾ, ಅತೀ ಚಿಕ್ಕ ಎಸ್​ಎಲ್​ಆರ್ ಕ್ಯಾಮೆರಾ ಸೇರಿದಂತೆ ತಲೆಮಾರಿನ ಹಿಂದಿನ ಕ್ಯಾಮೆರಾಗಳು ಹೆಗ್ಗಡೆಯವರ ಸಂಗ್ರಹಾಲಯದಲ್ಲಿದೆ. ಅವುಗಳೆಲ್ಲವೂ ಅತೀ ಸುರಕ್ಷಿತವಾಗಿ ಮುಂದಿನ ಪೀಳಿಗೆ ಕಾಣಲು ಯೋಗ್ಯವಾಗುವಂತೆ ವಿರೇಂದ್ರ ಹೆಗ್ಗಡೆ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಮನಗರದ ಜೆಡಿಎಸ್ ಭದ್ರಕೋಟೆಗೆ ಡಿ.ಕೆ. ಬ್ರದರ್ಸ್ ರಾಯಲ್ ಎಂಟ್ರಿ; ಹೋರಾಟಕ್ಕೆ ಹೆಚ್​ಡಿಕೆ ಸಜ್ಜು

ನಿಮಗೆ ಆಶ್ಚರ್ಯವಾಗಬಹುವುದು, ವಿರೇಂದ್ರ ಹೆಗ್ಗಡೆಯವರ ಸಂಗ್ರಹಾಲಯದಲ್ಲಿ 250 ಕ್ಯಾಮೆರಾಗಳ ಪೈಕಿ 90% ಕ್ಯಾಮೆರಾಗಳು ಇಂದಿಗೂ ಬಳಕೆಯೋಗ್ಯವಾಗಿದೆ‌. ಅತೀ ಅಪರೂಪವಾದ ಕ್ಯಾಮೆರಾಗಳನ್ನು ಪ್ರದರ್ಶನಗಳಿಂದ ಸಂಗ್ರಹಿಸುವ ವಿರೇಂದ್ರ ಹೆಗ್ಗಡೆಯವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ವಿರೇಂದ್ರ ಹೆಗ್ಗಡೆಯವರು  ಪೋಟೋ ತೆಗೆಯಲು ಏಳು ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಉಳಿದ ಎಲ್ಲಾ ಕ್ಯಾಮೆರಾಗಳು ಹೆಗ್ಗಡೆಯವರ ಸಂಗ್ರಹಾಲಯದಲ್ಲಿ ಕಾಣಸಿಗುತ್ತವೆ. ವಿರೇಂದ್ರ ಹೆಗ್ಗಡೆಯವರು ಪ್ರೊಫೆಶನಲ್ ಪೋಟೋಗ್ರಾಫರ್​ಗಳಿಗಿಂತ ಕಡಿಮೆ ಇಲ್ಲದಿದ್ದರೂ ತಾನು ತೆಗೆದ ಪೋಟೋಗಳ ಬಗ್ಗೆ ಅನುಭವಿ ಪೋಟೋಗ್ರಾಫರ್​ಗಳಲ್ಲಿ ಚರ್ಚೆ ನಡೆಸುತ್ತಾರೆ. ತಾನು ತೆಗೆದ ಪೋಟೋಗಳ ಲೈಟಿಂಗ್ ಮತ್ತು ಸಬ್ಜೆಕ್ಟ್ ಆಯ್ಕೆಯ ಬಗ್ಗೆ ಚರ್ಚೆ ನಡೆಸುತ್ತಾರೆ. ತಾನು ಮುಂದೆ ಯಾವ ರೀತಿಯಾಗಿ ಉತ್ತಮ ಪೋಟೋ ತೆಗೆಯಬಹುದೆಂದು ಅಭಿಪ್ರಾಯಗಳನ್ನು ಕೇಳುತ್ತಾರೆ. ಹೀಗೆ ಸದಾ ಕಲಿಕೆಯಲ್ಲಿರುವ ವಿರೇಂದ್ರ ಹೆಗ್ಗಡೆಯವರು ತಾನು ತೆಗೆದ ಉತ್ತಮ ಪೋಟೋಗಳನ್ನು ಫ್ರೇಮ್ ಹಾಕಿ ಆಗಮಿಸಿದ ಗಣ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡುತ್ತಾರೆ.

ಕ್ಯಾಂಡಿಡ್ ಪೋಟೋಗ್ರಾಫಿಯನ್ನು ಜಾಸ್ತಿ ಇಷ್ಟ ಪಡುವ ವಿರೇಂದ್ರ ಹೆಗ್ಗಡೆಯವರು ಜನರ ಸಹಜ ಹಾವಬಾವಗಳನ್ನು ಸೆರೆಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಆಧುನಿಕ ಯುಗಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳು ಬಳಕೆಯಲ್ಲಿದ್ದರೂ ಹೆಗ್ಗಡೆಯವರು ಬಳಸಿದ ಕ್ಯಾಮೆರಾಗಳು, ಬಳಸಿದ ಪೋಟೋಗ್ರಾಫ್​ಗಳಿಲ್ಲ ಅನ್ನೋದು ಕೂಡಾ ಸಿಹಿ ಸತ್ಯವಾಗಿದೆ.

ವರದಿ: ಕಿಶನ್ ಕುಮಾರ್
Published by:Vijayasarthy SN
First published: