• Home
  • »
  • News
  • »
  • district
  • »
  • ಕೊರೋನಾ ಭಯ ಹೋಗಲಾಡಿಸಿ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸಲು ಯೋಗ, ಧ್ಯಾನದ ಮೊರೆ ಹೋದ ಧಾರವಾಡ ಜಿಲ್ಲಾಡಳಿತ!

ಕೊರೋನಾ ಭಯ ಹೋಗಲಾಡಿಸಿ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸಲು ಯೋಗ, ಧ್ಯಾನದ ಮೊರೆ ಹೋದ ಧಾರವಾಡ ಜಿಲ್ಲಾಡಳಿತ!

ಕೊರೋನಾ ವಾರಿಯರ್ಸ್ ಮತ್ತು ನಾಗರಿಕರಿಗೆ ಧಾರವಾಡ ಜಿಲ್ಲಾಡಳಿತ ಆಯೋಜಿಸಿರುವ ಯೋಗ ತರಬೇತಿ.

ಕೊರೋನಾ ವಾರಿಯರ್ಸ್ ಮತ್ತು ನಾಗರಿಕರಿಗೆ ಧಾರವಾಡ ಜಿಲ್ಲಾಡಳಿತ ಆಯೋಜಿಸಿರುವ ಯೋಗ ತರಬೇತಿ.

ಆಗಸ್ಟ್ 26 ರಿಂದ ಕರ್ನಾಟಕದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಸನ್ನ ದೀಕ್ಷಿತ್ ಅವರ ತಂಡ ಧಾರವಾಡ ಜಿಲ್ಲಾ ಕೋವಿಡ್-19 ರಕ್ಷಣಾ ಪರಿಹಾರಗಳ ಕಲಿಕೆ ಮತ್ತು ಅನ್ವೇಷಣಾ ಕೇಂದ್ರದ (Dharwad Districts Center of Learning & Innovation for COVID Safety Solutions) DDCLICSS ಫೇಸ್ ಬುಕ್ ಪೇಜ್ ನಲ್ಲಿ ನೇರ ಯೋಗ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. 

ಮುಂದೆ ಓದಿ ...
  • Share this:

ಹುಬ್ಬಳ್ಳಿ; ಇಡೀ ವಿಶ್ವ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗಿದೆ. ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ಕಂಡು ಹಿಡಿಯಲು ಮುಂದುವರಿದ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡಿದೆ. ಲಕ್ಷಣ ರಹಿತ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕರ್ನಾಟಕದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದೆ.


ವೈದ್ಯಕೀಯ ಚಿಕಿತ್ಸೆ ನಂತರ ಹಲವು ರೋಗಿಗಳು ಗುಣಮುಖರಾಗಿದ್ದಾರೆ. ಕೋವಿಡ್-19 ಚಿಕಿತ್ಸೆಯು ವಿಭಿನ್ನವಾಗಿದ್ದು, ರೋಗಿಯು ಗುಣಮುಖರಾಗುವರೆಗೆ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವ ನಿಟ್ಟಿನಲ್ಲಿ ಪ್ರತ್ಯೇಕ ವಾಸದಲ್ಲಿರಬೇಕಾಗುತ್ತಿದೆ. ಕೊರೋನಾ ಹರಡುವ ಭಯದಿಂದ ಕೋವಿಡ್ ರೋಗಿಗಳೊಂದಿಗೆ ಜನರು ಸಹ ಅಂತರ ಕಾಪಾಡಿಕೊಳ್ಳುವುದು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ರೋಗಿಗಳು ದೈಹಿವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿ ಪ್ರತ್ಯೇಕ ವಾಸ ಅನುಭವಿಸುವ ರೋಗಿಗಳ ಮಾನಸಿಕ ಕ್ಲೇಷವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ, ದೇಹ ಹಾಗೂ ಮನಸ್ಸಿನ ಮೇಲೆ ಬಹುದಿನದವರೆಗೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಯೋಗ, ಧಾನ್ಯದ ಮೂಲಕ ವಿನೂತನ ರೀತಿಯಲ್ಲಿ ಕೋವಿಡ್ ರೋಗಿಗಳಿವೆ ವಿಶೇಷ ಯೋಗ ಚಿಕಿತ್ಸೆ ತರಬೇತಿ ನೀಡಲಾಗುತ್ತಿದೆ.


ಧಾರವಾಡ ಜಿಲ್ಲಾ ಕೋವಿಡ್-19 ರಕ್ಷಣಾ ಪರಿಹಾರಗಳ ಕಲಿಕೆ ಮತ್ತು ಅನ್ವೇಷಣಾ ಕೇಂದ್ರ,( DDCLICS) ಎವೊಲ್ವ್ ಲೈವ್ಸ್ ಮತ್ತು ಅಕ್ಷರ ಯೋಗ ಫೌಂಡೇಶನ್ ಸಹಯೋಗದೊಂದಿಗೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾದ ಹಿಮಾಲಯ್ ಸಿದ್ಧ ಗುರುಗಳ ನೇತೃತ್ವದಲ್ಲಿ ಅಗಸ್ಟ್ 18 ರಿಂದ ಕೋವಿಡ್-19 ರೋಗಿಗಳು, ಕೋವಿಡ್ ವಾರಿಯರ್ಸ್ ಹಾಗೂ ಧಾರವಾಡ ಜಿಲ್ಲೆಯ ನಾಗರಿಕರಿಗಾಗಿ ಯೋಗ ಮತ್ತು ಉತ್ತಮ ಆರೋಗ್ಯ ಕುರಿತು ವಿಶೇಷ ತರಬೇತಿಗಳನ್ನು ಆಯೋಜನೆ ಮಾಡಿದೆ. ಜಿಲ್ಲಾಡಳಿತ ಸ್ಥಾಪಿಸಿರುವ ಕೋವಿಡ್ -19 ಕೇರ್ ಸೆಂಟರ್ ಗಳಲ್ಲಿ ಈಗಾಗಲೇ ಯೋಗ ಚಿಕಿತ್ಸೆ ತರಬೇತಿಯನ್ನು ನಡೆಸಲಾಗುತ್ತಿದೆ.


ರೋಗ ನಿರೋಧಕ ಶಕ್ತಿ ಹಾಗೂ ಚಿತ್ತ ಸ್ವಾಸ್ಥ್ಯಕ್ಕಾಗಿ ಯೋಗ


ಕೋವಿಡ್ -19 ರೋಗಿಗಳು ಇಂತಹ ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಎದುರಿಸಿ ಸಂಪೂರ್ಣವಾಗಿ ಗುಣಮುಖರಾಗಲು ಪ್ರಾಚೀನ ಹಾಗೂ ಸಾಂಪ್ರದಾಯಕ ಯೋಗವು ಉತ್ತಮ ವಿಧಾನವಾಗಿದೆ. ಶ್ಯಾಮ್ ನರಗುಂದ ಈ ಯೋಗ ಚಿಕಿತ್ಸೆಯನ್ನು ಕಲ್ಪನೆಯನ್ನು ರೂಪಿಸಿ, ಕೋವಿಡ್ ವಾರಿಯರ್ಸ್​ಗಳಾದ ಡಾಕ್ಟರ್, ನರ್ಸ್, ಪೊಲೀಸ್ ಹಾಗೂ ಇತರೆ ಅಧಿಕಾರಿಗಳನ್ನು ಇದರಲ್ಲಿ ತೊಡಗಿಸಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ್ ಕ್ಷೀರಸಾಗರ್, ಗ್ರಾಂಡ್ ಮಾಸ್ಟರ್ ಅಕ್ಷರ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಧಾರವಾಡ ಅಧ್ಯಕ್ಷ ಡಾ. ಸಂದೀಪ್ ಪ್ರಭು, ಇವಾಲ್ವ್ ಲೈವ್ ಫೌಂಡೇಶನ್ ನ ಒಟ್ಟಾಲಿ ಅನ್ಬನ್ ಕುಮಾರ್, ಶ್ರೇಯಾ ಆಸ್ಪತ್ರೆಯ ಡಾ.ಸತೀಶ್ ಇರಕಲ್, ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾ.ಉಮೇಶ್ ಹಳ್ಳಿಕೇರಿ, ಯೋಗ ಚಿಕಿತ್ಸೆ ಯೋಜನೆಯನ್ನು ಪ್ರಾರಂಭಿಸಿ, ನಿರ್ವಹಿಸುತ್ತಿದ್ದಾರೆ.


ಇದನ್ನು ಓದಿ: ಕೊರೋನಾ ಸೋಂಕಿನ ನಡುವೆ ಆಸ್ಪತ್ರೆಯಿಂದಲೇ ಪಕ್ಷದ ಶಾಸಕರೊಂದಿಗೆ ಡಿಕೆ ಶಿವಕುಮಾರ್ ವಿಡಿಯೋ ಸಂವಾದ


ಕೋವಿಡ್ ರೋಗಿಗಳು, ವೈದ್ಯರು, ಪೊಲೀಸರು ಹಾಗೂ ವಾರಿಯರ್ಸ್‍ಗಳ ಅಗತ್ಯತೆಗೆ ಅನುಸಾರ ಯೋಗ ಚಿಕಿತ್ಸಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯೋಗ ಚಿಕಿತ್ಸೆ ತರಬೇತಿಯಲ್ಲಿ ವಿವಿಧ ರೀತಿಯ ಮುದ್ರೆಗಳು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಸನಗಳು, ಶ್ವಾಸಕೋಶ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಪ್ರಾಣಾಯಾಮ ತಂತ್ರಗಳನ್ನು ಹೇಳಿಕೊಡಲಾಗುತ್ತಿದೆ.


ಫೇಸ್ ಬುಕ್ ಲೈವ್ ಮೂಲಕ ಯೋಗ ಚಿಕಿತ್ಸೆ


ಆಗಸ್ಟ್ 26 ರಿಂದ ಕರ್ನಾಟಕದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಸನ್ನ ದೀಕ್ಷಿತ್ ಅವರ ತಂಡ ಧಾರವಾಡ ಜಿಲ್ಲಾ ಕೋವಿಡ್-19 ರಕ್ಷಣಾ ಪರಿಹಾರಗಳ ಕಲಿಕೆ ಮತ್ತು ಅನ್ವೇಷಣಾ ಕೇಂದ್ರದ (Dharwad Districts Center of Learning & Innovation for COVID Safety Solutions) DDCLICSS ಫೇಸ್ ಬುಕ್ ಪೇಜ್ ನಲ್ಲಿ ನೇರ ಯೋಗ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು