• Home
 • »
 • News
 • »
 • district
 • »
 • Gold Pot; ಮಂತ್ರಾಲಯದ ರಾಯರ ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯವೆಷ್ಟು ಗೊತ್ತಾ?

Gold Pot; ಮಂತ್ರಾಲಯದ ರಾಯರ ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯವೆಷ್ಟು ಗೊತ್ತಾ?

ಚಿನ್ನದ ಪಾತ್ರೆಗಳು

ಚಿನ್ನದ ಪಾತ್ರೆಗಳು

Mantralaya ಆಗಸ್ಟ್‌ 21 ರಿಂದ ಪ್ರಾರಂಭವಾದ 350ನೇ ಆರಾಧನಾ ಮಹೋತ್ಸವ ಆಗಸ್ಟ್‌ 27ರವರೆಗೆ ನಡೆಯಲಿದೆ. ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇನ್ನು ಎರಡು ದಿನಗಳ ಕಾಲ ರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

 • Share this:

  ರಾಯಚೂರು: (Raichuru) ದೇವರಿಗೆ ಭಕ್ತರು ಕಾಣಿಕೆ ಕೊಡುವುದು ಸಾಮಾನ್ಯ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಭಕ್ತರು ಚಿನ್ನ, ಬೆಳ್ಳಿ ರೂಪದಲ್ಲಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. ಅತಿ ಶ್ರೀಮಂತರು ಭಾರೀ ದೊಡ್ಡ ಮಟ್ಟದಲ್ಲಿ ಕಾಣಿಕೆಗಳನ್ನು ಅರ್ಪಿಸುವುದನ್ನು ನಾವು ಕಂಡಿದ್ದೇವೆ. ಈ ಹಿಂದೆ ಗಾಲಿ ಜನಾರ್ದನ ರೆಡ್ಡಿ ಅವರು ತಿರುಪತಿಯ ವೆಂಕಟೇಶ್ವರನಿಗೆ ಸುಮಾರು 43 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ನೀಡಿದ್ದರು. ಅದರಂತೆ ಇದೀಗ ರಾಯಚೂರು ಜಿಲ್ಲೆಯಲ್ಲಿ ಇರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ (Mantralaya Raghavendra Swamy) ಭಕ್ತರು ನೀಡಿರುವ ಚಿನ್ನದಲ್ಲಿ ಎರಡು ಚಿನ್ನದ ಪಾತ್ರೆಗಳನ್ನು ಮಾಡಿಸಲಾಗಿದೆ.


  ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಮಹಾರಥೋತ್ಸವ ಸಂಭ್ರಮದಿಂದ ಜರುಗಿದೆ. ಮಂಗಳವಾರ ನಡೆದ ಮಧ್ಯಾರಾಧನೆ ವೇಳೆ ರಾಯರ ಬೃಂದಾವನಕ್ಕೆ ಎರಡು ಚಿನ್ನದ ಪಾತ್ರೆಗಳನ್ನು (Gold Pot) ಸಮರ್ಪಣೆ ಮಾಡಲಾಗಿದೆ. ಈ ಎರಡು ಚಿನ್ನದ ಪಾತ್ರೆಗಳ ಮೌಲ್ಯ ಬರೋಬ್ಬರಿ 20 ಕೋಟಿ ರೂಪಾಯಿ.


  ರಾಘವೇಂದ್ರ ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾಗಿರುವ ಚಿನ್ನದ ಪಾತ್ರೆಗಳನ್ನು ಶ್ರೀ ಸುಬುಧೇಂದ್ರ ತೀರ್ಥರು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. ಅಂದಾಜು 20 ಕೋಟಿ ರೂ. ಮೌಲ್ಯದ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಸಲು ಶ್ರೀಗಳು ತೀರ್ಮಾನಿಸಿದ್ದಾರೆ. ಇದರ ಬಗ್ಗೆ ಬುಧವಾರದ ಅನುಗ್ರಹ ಸಂದೇಶದಲ್ಲಿಯೂ ಶ್ರೀಗಳು ಮಾಹಿತಿ ನೀಡಿದ್ದಾರೆ.


  ಆಗಸ್ಟ್ 21ರಿಂದ ಆ. 27ರವರೆಗೆ ನಡೆಯಲಿರುವ ಆರಾಧನಾ ಮಹೋತ್ಸವ


  ತುಂಗಾಭದ್ರಾ ತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆ ರಾಯರ ಮಠದಲ್ಲಿ ದಿನಕ್ಕೊಂದು ವಿಶೇಷ ಪೂಜೆ ನಡೆಯುತ್ತಿವೆ. ಬುಧವಾರ ಮಹಾರಥೋತ್ಸವ ನೆರವೇರಿತು. ಆಗಸ್ಟ್‌ 21 ರಿಂದ ಪ್ರಾರಂಭವಾದ 350ನೇ ಆರಾಧನಾ ಮಹೋತ್ಸವ ಆಗಸ್ಟ್‌ 27ರವರೆಗೆ ನಡೆಯಲಿದೆ. ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇನ್ನು ಎರಡು ದಿನಗಳ ಕಾಲ ರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.


  ಇದನ್ನು ಓದಿ: Mysore Mayor- ಕಾಂಗ್ರೆಸ್​ಗೆ ಶಾಕ್; ಬಿಜೆಪಿಯ ಸುನಂದಾ ಪಾಲನೇತ್ರಾ ಮೈಸೂರ್ ಮೇಯರ್


  ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಬುಧವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆಯು ಗುರುಕುಲದಿಂದ ಶ್ರೀ ಮಠಕ್ಕೆ ಆಗಮಿಸಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ರಥೋತ್ಸವ ನಡೆಯಿತು. ರಥೋತ್ಸವ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಸುರಿಸಿದ್ದು ವಿಶೇಷವಾಗಿತ್ತು.


  ಪರಿಮಳಯುಕ್ತ ಪ್ರಸಾದಕ್ಕೆ ಭರ್ಜರಿ ಬೇಡಿಕೆ


  ಮಂತ್ರಾಲಯಕ್ಕೆ ಭೇಟಿ ನೀಡುವ ಎಲ್ಲರೂ ತಮ್ಮೂರಿಗೆ ವಾಪಸ್ಸಾಗುವಾಗ ಪರಿಮಳ ಪ್ರಸಾದ ಕೊಂಡೊಯ್ಯುವುದು ರೂಢಿ. ಪ್ರಸಕ್ತ ಆರಾಧನೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಭಕ್ತರು ಮಧ್ಯಾರಾಧನೆಗೆ ಆಗಮಿಸಿದ್ದು, ಪರಿಮಳ ಪ್ರಸಾದಕ್ಕೆ ಭರ್ಜರಿ ಬೇಡಿಕೆ ಕಂಡುಬಂತು. ಪರಿಮಳ ಪ್ರಸಾದದ ತಯಾರಿಯ ವೇಗ ಹೆಚ್ಚಿಸುವಂತಾಯಿತು. ಸಾಮಾನ್ಯ ದಿನಗಳಲ್ಲಿ 2 ರಿಂದ 3 ಸಾವಿರ ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದವು. ಮಂಗಳವಾರದ ಮಧ್ಯಾರಾಧನೆಯ ಸಂದರ್ಭದಲ್ಲಿ ಬೆಳಗ್ಗೆಯಿಂದ 7 ರಿಂದ 8 ಸಾವಿರ ಪ್ಯಾಕೇಟ್‌ಗಳು ಮಾರಾಟವಾದವು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಮನೆಯಿಂದ ಯಾರೂ ಹೊರಗೆ ಬಾರದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ಕಡಿಮೆ ಮಾಡಬೇಕಿದೆ. ಸರ್ಕಾರ ರೂಪಿಸಿರುವ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕಿದೆ.

  Published by:HR Ramesh
  First published: