ಭಕ್ತನಿಂದ ದೇವರಿಗೆ 9 ಅಡಿ ಎತ್ತರದ ಚಿನ್ನದ ತೇರು ಸಮರ್ಪಣೆ: ಕೊರೋನಾ ಸಮಯದಲ್ಲೂ ದೈವಸ್ಮರಣೆ

ಭಗವಂತನಲ್ಲಿ ನಾನು ಬೇಡಿದ್ದ ಎಲ್ಲವನ್ನು ಸಿದ್ಧಲಿಂಗೇಶ್ವರರು ನನಗೆ ನೀಡಿದ್ದಾರೆ ಅಂತಹ ಸಂದರ್ಭದಲ್ಲಿ ಅವರ ಭಾಗವನ್ನು ಸಿದ್ದಲಿಂಗೇಶ್ವರನಿಗೆ ಅರ್ಪಿಸುತ್ತಿದ್ದೇನೆ ಎನ್ನುತ್ತಾರೆ ಭಕ್ತರಾದ ಶಿವಣ್ಣ.

news18-kannada
Updated:May 29, 2020, 7:14 AM IST
ಭಕ್ತನಿಂದ ದೇವರಿಗೆ 9 ಅಡಿ ಎತ್ತರದ ಚಿನ್ನದ ತೇರು ಸಮರ್ಪಣೆ: ಕೊರೋನಾ ಸಮಯದಲ್ಲೂ ದೈವಸ್ಮರಣೆ
9 ಅಡಿ ಚಿನ್ನದ ತೇರು ಮತ್ತು ಶಿವಲಿಂಗ
  • Share this:
ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರಿನ ಶ್ರೀಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು ಹರಕೆ ತೀರಿಸುವ ಸಲುವಾಗಿ 9 ಅಡಿ ಎತ್ತರದ ಚಿನ್ನದ ರಥವನ್ನ ಧಾನವಾಗಿ ಅರ್ಪಿಸುವ ಮೂಲಕ ಭಕ್ತಿಯನ್ನ ಸಮರ್ಪಿಸಿದ್ದಾರೆ.

ಬೆಂಗಳೂರು ಮೂಲದ ಶಿವಣ್ಣ ಎಂಬುವರು ತನ್ನ ಎರಡು ನಿವೇಶನಗಳನ್ನು ಮಾರಿ ಅದರಲ್ಲಿ ಬಂದ ಹಣದಲ್ಲಿ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಚಿನ್ನದ ತೇರನ್ನು ಧಾನವಾಗಿ ನೀಡಿದ್ದಾರೆ.

19ಕೆಜಿ ಚಿನ್ನದಲ್ಲಿ 9 ಅಡಿ ಎತ್ತರ, 4.5 ಅಡಿ ಸುತ್ತಳತೆಯಲ್ಲಿ ಚಿನ್ನದ ರಥವನ್ನ ತಯಾರಿಸಲಾಗುತ್ತಿದೆ . ಚಿನ್ನದ ರಥವನ್ನು ಬೆಂಗಳೂರಿನ ಕೃಷ್ಣಯ್ಯ ಶೆಟ್ಟಿ ಎಂಬ ಚಿನ್ನದ ವ್ಯಾಪಾರಿಗಳು ತಯಾರಿಸಿದ್ದಾರೆ.

ಚಿನ್ನದ ರಥ ನಿರ್ಮಾಣ ಕೆಲಸವು ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ಸೋಮವಾರ ಅದನ್ನು ಜೋಡಿಸುವ ಕಾರ್ಯ ಅಂತ್ಯಗೊಳ್ಳಲಿದೆ . ಚಿನ್ನದ ರಥ ನಿರ್ಮಾಣಕ್ಕೆ ಶಿವಣ್ಣ ಕುಟುಂಬದವರು ಕೂಡಿಟ್ಟ ಚಿನ್ನದ ಜೊತೆಗೆ 5 ಕೋಟಿ ಹಣ ನೀಡಿದ್ದು 20 ಕೆಜಿ ಚಿನ್ನ ಬಳಸಿ ತಯಾರಿಸಿರುವ ಈ ತೇರಿಗೆ ಇಂದಿನ ಮಾರುಕಟ್ಟೆ ಬೆಲೆ ಅಂದಾಜು 10 ಕೋಟಿ ಎನ್ನಲಾಗಿದೆ.

ಎಡೆಯೂರು ಹೋಬಳಿ ತೆವಡನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಶಿವಣ್ಣ ಎಡೆಯೂರು ಸಿದ್ಧಲಿಂಗೇಶ್ವರರ ಪರಮ ಭಕ್ತ . ಕಿತ್ತು ತಿನ್ನುವ ಬಡತನ ಇದರಿಂದ ಬೇಸತ್ತು ಸಿದ್ಧಲಿಂಗೇಶ್ವರರ ಸೂಚನೆಯಂತೆ ಕಾಲ್ನಡಿಗೆಯಲ್ಲಿ ಬೆಂಗಳೂರು ಮಹಾನಗರವನ್ನು ತಲುಪಿ ಕೂಲಿ ಮಾಡಿ ನಂತರ ಬಸ್ ಕಂಡಕ್ಟರ್ ಕೆಲಸ ನಿರ್ವಹಿಸಿ ಗುತ್ತಿಗೆ ಆರಂಭಿಸಿದರು.

ಈ ರೀತಿ ಹಲವಾರು ಕೆಲಸಗಳನ್ನು ಮಾಡಿ ನಂತರ ರುದ್ರಾಂಬ ಎಂಬ ಯುವತಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ . ಅವರಿಗೆ ಜನಿಸಿದ್ದ ಮೊದಲನೆಯ ಮಗ ಉಮಾಮಹೇಶ್ , ನಾಗರಾಜು , ಮಹಾಂತೇಶ , ಪ್ರೇಮಲತಾ ಗುರುದೇವ ಟಿ ಆನಂದ್ , ಹಾಗೂ ವೈದ್ಯ ಶಿವಕುಮಾರ್ ಸೇರಿದಂತೆ ಹಲವಾರು ಮಕ್ಕಳು ಮೊಮ್ಮಕ್ಕಳ ಜೊತೆಯಲ್ಲಿ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದು ಎಲ್ಲ ಕೊಟ್ಟ ಭಗವಂತನಿಗೆ ನಾನು ಏನಾದರೂ ಕೊಡಬೇಕು ಎಂಬ ಸದುದ್ದೇಶದಿಂದ ಹಿಂದಿನಿಂದಲೂ ಮನೆಯಲ್ಲಿ ಕುಟುಂಬದವರೆಲ್ಲರೂ ಸೇರಿ ಚಿನ್ನವನ್ನ ಶೇಖರಿಸುತ್ತಾ ಬಂದಿದ್ದಾರೆ . ಸಾಲದ್ದಕ್ಕೆ ಬೆಂಗಳೂರಿನಲ್ಲಿದ್ದ ಎರಡು ನಿವೇಶನಗಳನ್ನು ಮಾರಿ ಬಂದ ಹಣದಿಂದ ಚಿನ್ನದ ತೇರನ್ನು ಮಾಡಿಸಿ ಸಿದ್ದಲಿಂಗೇಶ್ವರನಿಗೆ ಕಾಣಿಕೆಯಾಗಿ ನೀಡಿದ್ದಾರೆ

ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?ಭಗವಂತನಲ್ಲಿ ನಾನು ಬೇಡಿದ್ದ ಎಲ್ಲವನ್ನು ಸಿದ್ಧಲಿಂಗೇಶ್ವರರು ನನಗೆ ನೀಡಿದ್ದಾರೆ ಅಂತಹ ಸಂದರ್ಭದಲ್ಲಿ ಅವರ ಭಾಗವನ್ನು ಸಿದ್ದಲಿಂಗೇಶ್ವರನಿಗೆ ಅರ್ಪಿಸುತ್ತಿದ್ದೇನೆ ಎನ್ನುತ್ತಾರೆ ಭಕ್ತರಾದ ಶಿವಣ್ಣ.

ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಭಕ್ತರಾದ ಶಿವಣ್ಣ ಅವರು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಧಾನವಾಗಿ ನೀಡುತ್ತಿರುವ ಚಿನ್ನದ ರಥವನ್ನು ಪಡೆಯಲು ಕಾರ್ಯನಿರ್ವಹಣಾಧಿಕಾರಿ ಶ್ರೀಲಕ್ಷ್ಮೀ ಅವರು ಸಕಲ ಸಿದ್ಧತೆಯನ್ನು ದೇವಾಲಯದಲ್ಲಿ ಮಾಡಿಕೊಂಡಿದ್ದಾರೆ ಅದಕ್ಕೆ ಅವಶ್ಯಕತೆ ಇರುವ ಜಾಗ ಮತ್ತು ಭದ್ರತೆಯ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿದ್ದಾರೆ . ದಾನಿಗಳು ನೀಡುತ್ತಿರುವ ಚಿನ್ನದ ತೇರನ್ನು ಪಡೆಯುವಲ್ಲಿ ಸರ್ಕಾರದ ವತಿಯಿಂದ ಬೇಕಾದ ಎಲ್ಲಾ ನಿಯಮಗಳನ್ನು ಪಾಲಿಸಿ ಪಡೆಯುತ್ತಿದ್ದೇವೆ ಜೂನ್ 3 ರ ನಂತರ ಸಾಮಾಜಿಕ ಅಂತರ ಪಾಲಿಸಿ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮಿ ತಿಳಿಸಿದ್ದಾರೆ.
First published: May 29, 2020, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading