HOME » NEWS » District » DEVELOPMENT OF THE NRUPATUNGA HILL AS A TOURIST SPOT IN HUBLI SAYS MINISTER JAGADISH SHETTAR HK

ಪ್ರೇಕ್ಷಣೀಯ ಸ್ಥಳವಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಅಭಿವೃದ್ದಿ ; ಸಚಿವ ಜಗದೀಶ್ ಶೆಟ್ಟರ್

ಮಹಾನಗರ ಪಾಲಿಕೆ ಆಯುಕ್ತರು ನೃಪತುಂಗ ಬೆಟ್ಟದಿಂದ ಸಾಯಿ ಮಂದಿರದ ವರೆಗೆ ರೋಪ್ ವೇ ನಿರ್ಮಾಣದ ಸಾಧ್ಯತೆ ಬಗ್ಗೆ ತಜ್ಞರ ನೇತೃತ್ವದಲ್ಲಿ ಯೋಜನೆ ತಯಾರಿಸಿದರೆ, ಸಿ.ಎಸ್.ಆರ್. ನಿಧಿಯಡಿ ಹಣ ಒದಗಿಸಲಾಗುವುದು

news18-kannada
Updated:August 16, 2020, 11:00 PM IST
ಪ್ರೇಕ್ಷಣೀಯ ಸ್ಥಳವಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಅಭಿವೃದ್ದಿ ; ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ(ಆಗಸ್ಟ್​.16): ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಮುಂದಿನ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಕೈಗಾರಿಕೆಯಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ. ನೃಪತುಂಗ ಬೆಟ್ಟ ಹುಬ್ಬಳ್ಳಿ ನಗರಕ್ಕೆ ವರದಾನವಾಗಿದೆ. ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

1994 ರಲ್ಲಿ ನೃಪತುಂಗ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದಾಗ ಹಲವು ಜನರು ಕುಹಕವಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಬೆಟ್ಟದ ಅಭಿವೃದ್ಧಿ ಮಾಡಲಾಗಿದೆ. ಕಲ್ಲು ಮಣ್ಣಿನ ಜಾಗದಲ್ಲಿ ಸಿಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳಸಲಾಗಿದೆ. ವಿಶೇಷ ಅನುದಾನದಡಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ ಎಂದರು.

ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆಯವರೆಗೆ ರೋಪ್ ವೇ ನಿರ್ಮಿಸಲು ಯೋಚಿಸಿ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು, ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಕಾರಣಗಳು ಎದುರಾಗಿದ್ದರಿಂದ ಯೋಜನೆಯನ್ನು ರದ್ದುಗೊಳಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತರು ನೃಪತುಂಗ ಬೆಟ್ಟದಿಂದ ಸಾಯಿ ಮಂದಿರದ ವರೆಗೆ ರೋಪ್ ವೇ ನಿರ್ಮಾಣದ ಸಾಧ್ಯತೆ ಬಗ್ಗೆ ತಜ್ಞರ ನೇತೃತ್ವದಲ್ಲಿ ಯೋಜನೆ ತಯಾರಿಸಿದರೆ, ಸಿ.ಎಸ್.ಆರ್. ನಿಧಿಯಡಿ ಹಣ ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೃಪತುಂಗ ಬೆಟ್ಟದಲ್ಲಿ ನೃಪತುಂಗೋತ್ಸವ ಆಯೋಜನೆ, ಪ್ರವಾಸಿಗರಿಗೆ ವಾಹನ ವ್ಯವಸ್ಥೆ, ಸುಸಜ್ಜಿತ ಮಲ್ಟಿಜಿಮ್, ಕ್ಯಾಂಟೀನ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ವಾಯು ವಿಹಾರಿಗಳ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

3 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಒಳಚರಂಡಿ ನಿರ್ಮಾಣ

ನೃಪತುಂಗ ಬೆಟ್ಟ, ಫಾರೆಸ್ಟ್ ಕಾಲೋನಿಗೆ ಹೊಂದಿಕೊಂಡಿರುವ ಬಾಪೂಜಿ ನಗರದಲ್ಲಿ ಮಳೆಯಿಂಗಾಗಿ ಚರಂಡಿಗಳಲ್ಲಿ ಹೆಚ್ಚಿನ ನೀರು ಹರಿದು ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಒಳ ಚರಂಡಿಯನ್ನು ನಿರ್ಮಿಸಲಾಗುವುದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಇದನ್ನೂ ಓದಿ : ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯ ; ಎಜ್ಯುಕೇಷನ್ ತುಳು ಹ್ಯಾಷ್ ಟ್ಯಾಗ್ ಅಭಿಯಾನಕ್ಕೆ ನಟ ಜಗ್ಗೇಶ್ ಬೆಂಬಲಹೆಚ್ಚಿನ ಮಳೆಯಾದಾಗ ನೀರು ಸರಾಗವಾಗಿ ಹರಿದು ಹೊಗಲು ತೊಂದರೆಯಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಸೂಚನೆ ನೀಡಿದ್ದೇನೆ. ಭಾರತೀಯ ಸೇನೆಗೆ ಸೇರಿದ ಜಾಗದಲ್ಲಿ ಒಳಚರಂಡಿ ಹಾದು ಹೋಗುವುದರಿಂದ, ಅವರ ಒಪ್ಪಿಗೆ ಪಡೆದು ಯೋಜನೆ ರೂಪಿಸಲಾಗುವುದು ಎಂದರು.

ಬಾಪೂಜಿ ನಗರದ ಸಮುದಾಯ ಭವನದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಅಕ್ರಮ ಸಕ್ರಮದ ಅರ್ಜಿಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳೂವಂತೆ ನಾಗರಿಕರು ಸಚಿವರಿಗೆ ಮನವಿ ಸಲ್ಲಿಸಿದರು.
Published by: G Hareeshkumar
First published: August 16, 2020, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories