ಲಾಕ್ಡೌನ್ ಎಫೆಕ್ಟ್; ವಲಸೆ ಕಾರ್ಮಿಕರ ನಿರ್ಗಮನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಮಗಾರಿ ಕುಂಠಿತ
ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಹೊರ ರಾಜ್ಯದ ಕಾರ್ಮಿಕರನ್ನೆ ನಂಬಿದ ಗುತ್ತಿಗೆದಾರರು ಮತ್ತು ವಿವಿಧ ಗುತ್ತಿಗೆ ಕಂಪನಿಗಳು ಪರ್ಯಾಯ ವ್ಯವಸ್ಥೆಗಾಗಿ ದಾರಿ ಹುಡುಕುತ್ತಿದ್ದಾರೆ
news18-kannada Updated:June 2, 2020, 3:57 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: June 2, 2020, 3:57 PM IST
ಕಾರವಾರ(ಜೂ. 02): ಕಳೆದ ನಾಲ್ಕು ವರ್ಷದಿಂದ ಪ್ರಗತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪತ ಯೋಜನೆಗೆ ಈಗ ಕಾರ್ಮಿಕರ ಕೊರತೆ ಎದುರಾಗಿದೆ. ಕಳೆದ ಒಂದು ವರ್ಷದಿಂದ ಕೆಲವೊಂದು ಕಾರಣಗಳಿಂದ ಆಮೆ ವೇಗದಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ ಯೋಜನೆ ಕೆಲಸ ವೇಗ ಪಡೆಯುತ್ತಿರುವ ಸಂದರ್ಭದಲ್ಲಿಯೇ ಕೊರೋನಾ ಮಹಾಮಾರಿಗೆ ದೇಶ ಲಾಕ್ ಡೌನ್ ಆಗಿ ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಟ್ಟಿದ್ದಾರೆ.
ಈಗಾಗಲೆ ಸರಿ ಸುಮಾರು 100ಕಿಮೀ ನಷ್ಟು ರಸ್ತೆ ಕಾಮಗಾರಿ ಕೆಲಸ ಬಾಕಿ ಇದೆ, ಕಾಮಗಾರಿ ಕೂಡಾ ಪ್ರಗತಿಯಲ್ಲಿತ್ತು. ಆದರೆ, ಲಾಕ್ ಡೌನ್ ಆಗಿರುವದರಿಂದ ಕೆಲಸ ಸ್ಥಗಿತವಾಗಿತ್ತು. ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಮತ್ತೆ ರಸ್ತೆ ಕಾಮಗಾರಿ ಕೆಲಸ ಚುರುಕು ಪಡೆಯಿತ್ತಾದರೂ ನಿರೀಕ್ಷೆಗೆ ತಕ್ಕಂತೆ ಕೆಲಸ ಪುನರಾರಂಭವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಮಿಕರ ಕೊರತೆ. ಆಗಲೆ ವಲಸೆ ಕಾರ್ಮಿಕರು ತಮ್ಮ ತವರೂರಿನತ್ತ ಪ್ರಯಾಣ ಬೆಳೆಸಿದರು. ಇಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ, ಉತ್ತಪ್ರದೇಶ, ಬಿಹಾರ, ಹೀಗೆ ಹೊರ ರಾಜ್ಯದವರಾಗಿದ್ದಾರೆ. ಇವರೆಲ್ಲ ಈಗ ಸಮಸ್ಯೆಯಿಂದ ಪಾರಾಗಲು ತಮ್ಮ ತವರು ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ, ಜಿಲ್ಲೆಯಲ್ಲಿ ಆಗುವ ಅಭಿವೃದ್ದಿ ಕಾಮಗಾರಿಗಳು ಬೆಟ್ಟದಷ್ಟಿದೆ ಈ ಎಲ್ಲ ಅಭಿವೃದ್ಧಿ ಕಾಮಗಾರಿ ಕೆಲಸಕ್ಕೆ ಹೊರ ರಾಜ್ಯದ ಕಾರ್ಮಿಕರನ್ನೆ ನಂಬಿದ ಗುತ್ತಿಗೆದಾರರು ಮತ್ತು ವಿವಿಧ ಗುತ್ತಿಗೆ ಕಂಪನಿಗಳು ಪರ್ಯಾಯ ವ್ಯವಸ್ಥೆಗಾಗಿ ದಾರಿ ಹುಡುಕುತ್ತಿದ್ದಾರೆ. ಜತಗೆ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಬಾಗವಾಗಿ ಕಾರವಾರದಲ್ಲಿ ಬೃಹತ್ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಇದರ ಕಾಮಗಾರಿ ಕೆಲಸ ಅರ್ಧ ಭಾಗ ಕೂಡಾ ಮುಗಿದಿಲ್ಲ. ಈ ಹೊತ್ತಲ್ಲೆ ಇದಕ್ಕಾಗಿ ದುಡಿಯುತ್ತಿದ್ದ ಬಹುತೇಕ ವಲಸೆ ಕಾರ್ಮಿಕರು ತವರಿನತ್ತ ಪ್ರಯಾಣ ಬೆಳೆಸಿದರು. ಇದು ಯೋಜನೆಯ ಗುತ್ತಿಗೆ ಪಡೆದ ಐಆರ್ಬಿ ಕಂಪನಿಗೆ ತಲೆ ಬಿಸಿ ಆಗಿದೆ.
ಇದನ್ನೂ ಓದಿ : ರಾಜ್ಯಸಭಾ ಸ್ಥಾನಕ್ಕೆ ಪೈಪೋಟಿ - ಡಿಸಿಎಂ ಸವದಿ ಬೆನ್ನಹಿಂದೆಯೇ ಕೋರೆ ಪರ ಮಹಾಂತೇಶ್ ಕವಟಗಿಮಠರಿಂದ ಬ್ಯಾಟಿಂಗ್
2020ರಲ್ಲಿ ಎಲ್ಲ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕಾಗಿತ್ತು ಆದರೆ, ಕಾಮಗಾರಿ ವಿಳಂಬವಾಗಿದ್ದು ಇನ್ನು ಕಾರ್ಮಿಕರಿಲ್ಲದೆ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಬಾಗವಾಗಿ ಕೆಲವೊಂದು ಸೇತುವೆ ಕಾಮಗಾರಿ ಕೆಲಸ ಕೂಡಾ ಅರ್ಧವಾಗಿದ್ದು, ಕಾರ್ಮಿಕರಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಒಟ್ಟಾರೆ ವಲಸೆ ಕಾರ್ಮಿಕರು ತವರಿಗೆ ಮರಳಿದ್ದು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ದಿ ಕಾಮಗಾರಿ ಕುಂಠಿತವಾಗಿದೆ.
ಈಗಾಗಲೆ ಸರಿ ಸುಮಾರು 100ಕಿಮೀ ನಷ್ಟು ರಸ್ತೆ ಕಾಮಗಾರಿ ಕೆಲಸ ಬಾಕಿ ಇದೆ, ಕಾಮಗಾರಿ ಕೂಡಾ ಪ್ರಗತಿಯಲ್ಲಿತ್ತು. ಆದರೆ, ಲಾಕ್ ಡೌನ್ ಆಗಿರುವದರಿಂದ ಕೆಲಸ ಸ್ಥಗಿತವಾಗಿತ್ತು. ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಮತ್ತೆ ರಸ್ತೆ ಕಾಮಗಾರಿ ಕೆಲಸ ಚುರುಕು ಪಡೆಯಿತ್ತಾದರೂ ನಿರೀಕ್ಷೆಗೆ ತಕ್ಕಂತೆ ಕೆಲಸ ಪುನರಾರಂಭವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಮಿಕರ ಕೊರತೆ. ಆಗಲೆ ವಲಸೆ ಕಾರ್ಮಿಕರು ತಮ್ಮ ತವರೂರಿನತ್ತ ಪ್ರಯಾಣ ಬೆಳೆಸಿದರು. ಇಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ, ಉತ್ತಪ್ರದೇಶ, ಬಿಹಾರ, ಹೀಗೆ ಹೊರ ರಾಜ್ಯದವರಾಗಿದ್ದಾರೆ. ಇವರೆಲ್ಲ ಈಗ ಸಮಸ್ಯೆಯಿಂದ ಪಾರಾಗಲು ತಮ್ಮ ತವರು ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ,
ಇದನ್ನೂ ಓದಿ : ರಾಜ್ಯಸಭಾ ಸ್ಥಾನಕ್ಕೆ ಪೈಪೋಟಿ - ಡಿಸಿಎಂ ಸವದಿ ಬೆನ್ನಹಿಂದೆಯೇ ಕೋರೆ ಪರ ಮಹಾಂತೇಶ್ ಕವಟಗಿಮಠರಿಂದ ಬ್ಯಾಟಿಂಗ್
2020ರಲ್ಲಿ ಎಲ್ಲ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕಾಗಿತ್ತು ಆದರೆ, ಕಾಮಗಾರಿ ವಿಳಂಬವಾಗಿದ್ದು ಇನ್ನು ಕಾರ್ಮಿಕರಿಲ್ಲದೆ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಬಾಗವಾಗಿ ಕೆಲವೊಂದು ಸೇತುವೆ ಕಾಮಗಾರಿ ಕೆಲಸ ಕೂಡಾ ಅರ್ಧವಾಗಿದ್ದು, ಕಾರ್ಮಿಕರಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಒಟ್ಟಾರೆ ವಲಸೆ ಕಾರ್ಮಿಕರು ತವರಿಗೆ ಮರಳಿದ್ದು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ದಿ ಕಾಮಗಾರಿ ಕುಂಠಿತವಾಗಿದೆ.