HD Devegowda: ಅರುಣ್ ಸಿಂಗ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ದೇವೇಗೌಡರು

Deve Gowda defended Kumaraswamy: ಅರುಣ್​​ ಸಿಂಗ್​ ಹಣ ವಸೂಲಿಗಾಗಿ ಕರ್ನಾಟಕಕ್ಕೆ ಬರುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅರುಣ್ ಸಿಂಗ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರಲ್ಲ ಎಂದು ದೇವೇಗೌಡರು ನಕ್ಕರು.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ.

  • Share this:
ಹಾಸನ: ಜೆಡಿಎಸ್​ ಮುಳುಗುವ ಹಡಗು ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್(Arun Singh) ಹೇಳಿಕೆ​ ಸಂಬಂಧ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಜೊತೆ ನಡೆದ ವಾಕ್ಸಮರದ ಬಗ್ಗೆ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ(HD Deve Gowda )ವ್ಯಂಗ್ಯವಾಡಿದರು. ಅರುಣ್​​ ಸಿಂಗ್​ ಹಣ ವಸೂಲಿಗಾಗಿ ಕರ್ನಾಟಕಕ್ಕೆ ಬರುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅರುಣ್ ಸಿಂಗ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರಲ್ಲ ಎಂದು ದೇವೇಗೌಡರು ನಕ್ಕರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಭೆ ನಡೆದಿದೆ. ಆ ಸಭೆಯಲ್ಲಿ ಎಷ್ಟು ಜನ ಇದ್ದರು ಎಂದು ಗಮನಿಸಿದ್ರೆ ನಿಮಗೆ ತಿಳಿಯುತ್ತೆ. ಬಿಜೆಪಿ ಸಭೆಗೆ ಮಹತ್ವ ಇಲ್ಲ ಎಂದು ಪರೋಕ್ಷ ತಿರುಗೇಟು ನೀಡಿದರು.  

ತಂದೆ-ಮಗನಿಗೆ ಟಿಕೆಟ್​​

ಶಾಸಕ ಜಿ.ಟಿ.ದೇವೇಗೌಡ ಪಕ್ಷ ತೊರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಗೌಡರು, ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಜೊತೆ ಅವರು ಮಾತನಾಡಿದ್ದಾರೆ. ಅವರಿಗೆ ಅವರ ಮಗನಿಗೆ ಟಿಕೆಟ್ ನೀಡುವುದಾದ್ರೆ ಕಾಂಗ್ರೆಸ್ ಗೆ ಬರ್ತೀನಿ ಎಂದು ಹೇಳಿದ್ದಾರೆ. ಈ ವಿಚಾರವನ್ನು ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ತಿಳಿಸಿದ್ದಾರೆ. ಹೀಗಾಗಿ ಜೆಡಿಎಸ್​ ತೊರೆದು ಕಾಂಗ್ರೆಸ್​​ ಸೇರುತ್ತಿದ್ದಾರೆ ಎಂದರು.

ಗುಬ್ಬಿ ಶ್ರೀನಿವಾಸ್ ಪಕ್ಷ ಬಿಡ್ತಿಲ್ಲ

ಇನ್ನು ಗುಬ್ಬಿ ಶ್ರೀನಿವಾಸ್ ಜೆಡಿಎಸ್​ ತೊರೆಯುವ ಸುದ್ದಿಯನ್ನು ಅಲ್ಲಗಳೆದರು. ಗುಬ್ಬಿ ಶ್ರೀನಿವಾಸ್ ನನ್ನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೆಲವರು ಊಹಾಪೋಹ ಸುದ್ದಿ ಮಾಡಿದ್ದಾರೆ, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಶ್ರೀನಿವಾಸ್ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಂಸದರಿಗೆ ಹಣ ಬಂದಿಲ್ಲ 

ಸಂಸದರ ನಿಧಿ ಸಿಗದ ಬಗ್ಗೆ ಮಾತನಾಡಿದ ಅವರು, ಈ ವರ್ಷ 75 ಲಕ್ಷ ಬಿಡುಗಡೆ ಮಾಡಿದ್ದಾರೆ. ಸಂಸದರ ನಿಧಿಯನ್ನು  ಕೊರೊನಾಗೆ ಅಗತ್ಯವಿರುವೆಡೆ ಹಣ ನೀಡುವುದಕ್ಕೆ ಮೀಸಲಿಟ್ಟಿದ್ದಾರೆ. ಪ್ರತಿ ವರ್ಷ ಐದು ಕೋಟಿ ಕೊಡುತ್ತಿದ್ದರು, ಹಿಂದಿನದು 3.5 ಕೋಟಿ ಹಳೆ ಬಾಕಿಯಿದೆ. ಒಂದುವರೆ ಕೋಟಿ ಬಿಡುಗಡೆ ‌ಮಾಡಿದ್ದಾರೆ. ನಾನು ರಾಜ್ಯಸಭೆಗೆ ಹೋದ ಮೇಲೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ, ನನ್ನ ಕೈಯಲ್ಲಿ ಆಗಲಿಲ್ಲ. ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಲು ಸಂಕಲ್ಪ ಮಾಡಿದ್ದೆ, ಆದರೂ ಒಂದು ವಿಚಾರ ಚರ್ಚೆ ಮಾಡಲು ಆಗಲಿಲ್ಲ. ಜನಪರವಾದ ಯೋಜನೆಗಳ ಬಗ್ಗೆ ಪ್ರಧಾನಿಗಳಿಗೆ ಪತ್ರದ ಮೂಲಕ, ಟ್ವಿಟ್ ಮೂಲಕ ತಿಳಿಸಿದ್ದೇನೆ ಎಂದರು.

ಇದನ್ನೂ ಓದಿ: HDK V/S Arun Singh: ಜೆಡಿಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಮೋದಿನ ಕೇಳಿ ತಿಳಿದುಕೊಳ್ಳಲಿ: ಅರುಣ್ ಸಿಂಗ್​​ಗೆ ಕುಮಾರಸ್ವಾಮಿ ತಿರುಗೇಟು

ಮೂರು ಬಿಲ್ ಗಳನ್ನು ಪಾಸ್ ಮಾಡಿದ್ದಾರೆ, ಅದರ ಬಗ್ಗೆ ಸಂಸತ್ ನಲ್ಲಿ ಚರ್ಚೆ ಮಾಡಬೇಕಿತ್ತು. ಬರೀ ಗದ್ದಲದಲ್ಲಿ ಸಂಸತ್ ಅಧಿವೇಶನ ಮುಗಿಯುತ್ತಿದೆ. ಇದು ಉತ್ತಮವಾದಂತಹ ನಿರ್ಣಯವಲ್ಲ. ಈ ವ್ಯವಸ್ಥೆ ಮುಂದುವರಿದರೆ ಯುವ ಸಂಸದರಿಗೆ ಏನು ಸಂದೇಶ ಹೋಗುತ್ತದೆ. ಒಂದು ಚುನಾಯಿತ ಸಂಸ್ಥೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಯುವಕರಿಗೆ ತಿಳಿಸಬೇಕಿದೆ. ಬೇಕಾದಷ್ಟು ಸಮಸ್ಯೆಗಳಿವೆ, ಅವುಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಟೀಕಿಸಿದರು.

ಪೆಟ್ರೋಲ್​​, ಡಿಸೇಲ್​ ಟ್ಯಾಕ್ಸ್​ ಇಳಿಸಬೇಕು 

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೈಲ‌ ಬೆಲೆ ಟ್ಯಾಕ್ಸ್ ಇಳಿಸುವಂತೆ ಸಚಿವರ ಒತ್ತಾಯಕ್ಕೆ ದೇವೇಗೌಡರು ಸಹಮತ ವ್ಯಕ್ತಪಡಿಸಿದರು. ಸರ್ಕಾರ ಸ್ಟೇಟ್ ಟ್ಯಾಕ್ಸ್ ನ ರದ್ದು ಮಾಡಬೇಕು. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಯಿದ್ದರೆ, ಕೇಂದ್ರ ಸರ್ಕಾರ ರಿಯಾಯಿತಿ ಕೊಡದಿದ್ದರು ಕಡಿಮೆ ಮಾಡಬಹುದು. ಸಮಸ್ಯೆಗಳು ಬಹಳಯಿದೆ, ಎಲ್ಲಾ ಇಲಾಖೆಯೊಳಗೆ ಹಣ ಬಿಡುಗಡೆ ಪೆಂಡಿಂಗ್ ಇದೆ. ಕೇಂದ್ರ ಸರ್ಕಾರದ್ದು ಅಷ್ಟೇನೇ ಪೆಂಡಿಂಗ್ ಇದೆ ಎಂದರು.

ಪಕ್ಷದ ಸದಸ್ಯತ್ವ ಇಲ್ಲದವರಿಗೆ ಬಿ ಫಾರಂ‌ ಕೊಡುವುದಿಲ್ಲ

ಇನ್ನು ತಾ.ಪಂ., ಜಿ.ಪಂ.‌ ಚುನಾವಣೆ  ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಿಂದ‌ ಆರಂಭಿಸಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು. ಪಕ್ಷದ ಸದಸ್ಯತ್ವ ಇಲ್ಲದವರಿಗೆ ಬಿ ಫಾರಂ‌ ಕೊಡುವುದಿಲ್ಲ ಎಂದು ಕಂಡಾತುಂಡವಾಗಿ ಹೇಳಿದ್ದೇನೆ. ಜಿಲ್ಲಾ, ತಾಲ್ಲೂಕು ಮುಖಂಡರು, ಪಕ್ಷದ ಬಗ್ಗೆ ಬದ್ದತೆ ಇರುವವರ ಜೊತೆ ಚರ್ಚೆ ಮಾಡುತ್ತೇನೆ. ಕುಮಾರಸ್ವಾಮಿ ಅವರು ಪ್ರವಾಸ ಮಾಡುತ್ತಿದ್ದಾರೆ, ನಾನು ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ನಮ್ಮ ಎದುರಾಳಿಗಳು ದಾಳಿ ಮಾಡುತ್ತಾರೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತೇನೆ. ನನಗೆ ವಯಸ್ಸಾಗಿದೆ ಎಂದು ಅಸಡ್ಡೆಯಿಂದ ಕೂರುವ ವ್ಯಕ್ತಿಯಲ್ಲ ಎಂದು ಉತ್ಸಾಹದ ಮಾತುಗಳನ್ನಾಡಿದರು.
Published by:Kavya V
First published: