ಭೀಮಾ ತೀರದ ಹೆಸರಲ್ಲಿ ವಸೂಲಿಗೆ ಇಳಿದ ಗ್ಯಾಂಗ್: 11 ಜನರ ವಿರುದ್ಧ ಪ್ರಕರಣ ದಾಖಲು

ಪ್ರಮುಖ ಆರೋಪಿಗಳಾದ ಗೋದಾವರಿ, ಆಕೆಯ ತಂದೆ ರಾಚಪ್ಪಾ ಚೌಗಲಾ,  ತಾಯಿ ದಾನವ್ವಾ ಹಾಗೂ ಆಕೆಯ ಸಹಚರರಾದ ಪ್ರಶಾಂತ ರಜಪೂತ ಸೇರಿದಂತೆ ಒಟ್ಟು 11 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಳಗಾವಿ; ಅದು 11 ಜನರ ಖತರನಾಖ ಗ್ಯಾಂಗ್ ಅಣ್ಣನ ಹೆಂಡತಿ ಮೂಲಕ ಸಂಚು ರೂಪಿಸಿದ್ದ ಗ್ಯಾಂಗ್ ತಮ್ಮನನ್ನ ಕಿಡ್ನಾಪ ಮಾಡಿದ್ದು ಅಲ್ಲದೆ ನಿನ್ನ ಮೇಲೆ ರೆಪ್ ಕೇಸ್ ದಾಖಲಿಸಿ ನಿನ್ನನ್ನ ಜೈಲಿಗೆ ಕಳಿಸ್ತಿವಿ ಇಲ್ಲಾ ನಾವು ಹೇಳಿದ ಹಾಗೆ ನೀನು ಕೇಳಬೇಕು ಇಲ್ಲವಾದಲ್ಲಿ ಭೀಮಾ ತೀರದ ಹಂತಕರ ರೀತಿಯಲ್ಲೆ ನಿನ್ನನ್ನು ಮುಗಿಸ್ತಿವಿ ಅಂತ ಧಮ್ಕಿ ಹಾಕಿ ಈಗ  ಆ 11 ಜನರ ಗ್ಯಾಂಗ್ ಪೊಲೀಸರ ಅಥಿತಿಯಾಗಿ ದ್ದಾರೆ. ಹೌದು ಇಂತಹದೊಂದು ಪ್ರಕರಣ ನಡೆದಿರೋದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ. ಅಥಣಿ  ಪಟ್ಟಣದ ಬಸವರಾಜ ತಂಗಡಿ ಎಂಬುವವರು ಕಳೆದ 2 ವರ್ಷಗಳ ಹಿಂದೆ ಅದೆ ತಾಲೂಕಿನ ನಂದುರು ಗ್ರಾಮದ ಗೋದಾವರಿ ಎಂಬುವವರ ಜೊತೆ ವಿವಾಹವಾಗಿದ್ದರು.

ಆದರೆ, ಮನೆಯಲ್ಲಿ ಸರಿಯಾಗಿ ಜೀವನ ನಡೆಸದ ಗೋದಾವರಿ ಕಳೆದ ಎಂಟು ತಿಂಗಳ ಹಿಂದೆ ಬಸವರಾಜ ಜೋತೆ ಜಗಳವಾಡಿ ತವರೂರಿಗೆ ತೆರಳಿದ್ದಳು. ಇನ್ನು ಗಂಡನ ಮನೆಗೆ ವಾಪಸ ಆಗದೆ ಸತಾಯಿಸಿದ್ದ ಗೋದಾವರಿ ಅಚಾನಕ್ಕಾಗಿ ತನ್ನ ತಂದೆ ತಾಯಿ ಹಾಗೂ 11 ಜನರ ಜೋತೆ ಗಂಡನ ಮನೆಗೆ ಬಂದು ಬಸವರಾಜ ತಮ್ಮ ಸಂತೋಷ ಜೊತೆಗೆ ಜಗಳವಾಡಿ ದ್ದಾಳೆ. ನೀ‌ನು ನನ್ನನ್ನ ರೇಪ್ ಮಾಡಿದ್ದಿಯಾ ನೀನು ನಿನ್ನ ಪಾಲಿನ ಆಸ್ತಿಯನ್ನ ನನ್ನ ಹೆಸರಿಗೆ ಮಾಡಬೇಕು ಅಲ್ಲದೆ ನನ್ನ ಜೊತೆಗೆ ಬಂದಿರುವವರಿಗೆ 4 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು.

ಇನ್ನು ಮನೆಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಮನಗಂಡ ಗೋದಾವರಿ ಜೊತೆಗೆ ಆಗಮಿಸಿದ್ದ ಆಕೆಯ ಸಹಚರರು ಸಂತೋಷ ನನ್ನ ತಮ್ಮ ಕಾರಿನಲ್ಲಿ ಒತ್ತಾಯಪೂರ್ವಕವಾಗಿ ಕಿಡ್ನಾಪ್ ಮಾಡಿಕೊಂಡು ಗ್ರಾಮದ ಆಚೆ ಇರುವ ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಸಂತೋಷ ಜೋತೆಗೆ ಮತ್ತೆ ಜಗಳವಾಡಿದ್ದಾರೆ. ಪತಿ ಬಸವರಾಜ ಹೆಸರಿನಲ್ಲಿ ಇರುವ ಜಮೀನು ಹಾಗೂ ಹಾಗೂ ನಿನ್ನ ಹೆಸರಿನಲ್ಲಿ ಇರುವ ಜಮೀನು ಗೋದಾವರಿ ಹೆಸರಿಗೆ ಬರೆದುಕಿಡುತ್ತೇನೆ ಎಂದು ಬಾಂಡ್ ಮೇಲೆ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಒಪ್ಪದ ಸಂತೋಷ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿರುವ ಗೋದಾವರಿ ಆಂಡ್ ಟೀಮ್ ಯಾವಾಗ ಸಂತೋಷ ಪ್ರಜ್ಞೆ ತಪ್ಪಿ ಬಿದ್ದಾಕ್ಷನ ಎಲ್ಲಿ ಸಂತೋಷ ಸತ್ತು ಹೊಗುತ್ತಾನೆ ಎಂಬ ಭಯದಿಂದಾಗಾ ಅಲ್ಲಿಂದ ಕಲ್ಕಿತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಚುನಾವಣೆ; ಬಿಜೆಪಿ, ಜೆಡಿಎಸ್, ಎಎಪಿ, ಎಂಐಎಂ ಸ್ಪರ್ಧೆ ಬಗ್ಗೆ ಘೋಷಣೆ, ಗೊಂದಲದಲ್ಲಿ ಕಾಂಗ್ರೆಸ್!

ಸ್ಥಳೀಯ ಪತ್ರಕರ್ತ ಬಾಗಿ;

ಇನ್ನು ಗೋದಾವರಿ ಜೋತೆಗೆ ಸ್ಥಳ ವಾರ ಪತ್ರಿಕೆಯ ಪತ್ರಕರ್ತ ಪ್ರಶಾಂತ ರಜಪೂತ ಎಂಬಾತ ಕೂಡ ಭಾಗಿಯಾಗಿದ್ದ. ಪ್ರಶಾಂತ ಸಂತೋಷ ನನ್ನ ಹೆದರಿಸಿ ನೀನು ನಿನ್ನ ಆಸ್ತಿಯನ್ನು ಗೋದಾವರಿ ಹೆಸರಿಗೆ ಬರೆಯಬೇಕು ಇಲ್ಲವಾದಲ್ಲಿ ನಿನ್ನ ಫೋಟೋ ವಿಡಿಯೋಗಳನ್ನ ಮೀಡಿಯಾದಲ್ಲಿ ಹಾಕಿ ನಿನ್ನ ಮಾನ ಹರಾಜು ಹಾಕುತ್ತೇನೆ ಅಲ್ಲದೆ ಈಡಿ ಪ್ರಕರಣದವನ್ನ ಮುಚ್ಚಿ ಹಾಕಲು ನನಗೆ ನೀನು ನಾಲ್ಕು ಲಕ್ಷ ಹಣ ನೀಡಬೇಕು. ಹಣ ನೀಡದೆ ಇದ್ರೆ ನನಗೆ ಭೀಮಾ ತೀರದ ಹಂತಕರು ಗೋತ್ತು ಅಲ್ಲಗೆ ನಿನ್ನ ಕರೆದುಕೊಂಡು ಹೋಗಿ ನಿನ್ನ ಮುಗಿಸಿ ಬಿಡ್ತಿವಿ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: Agriculture Bill| ವಿವಾದಿತ ಕೃಷಿ ಕಾನೂನಿನ ಬಗ್ಗೆ ಯಾರಿಗೇ ಗೊಂದಲ ಇದ್ದರೂ ಬಗೆಹರಿಸಲಾಗುವುದು; ರಾಜನಾಥ್​ ಸಿಂಗ್

ಇನ್ನು ಸಂತೋಷಗೆ ಪ್ರಜ್ಞೆ ಬಂದಾಕ್ಷಣ ತನ್ನ ಮನೆಯವರಿಗೆ ಫೊನ ಮಾಡಿ ತಾನು ಇರುವ ಜಾಗ ತಳಿಸಿದ್ದ ಕೂಡಲೆ ಸಹೋದರ ಬಸವರಾಜ ಹಾಗೂ ತಾಯಿ ಸ್ಥಳಕ್ಕೆ ತೆರಳಿ ಸಂತೋಷ ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಕುರಿತು ಸಂತೋಷ ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಿದ್ದಾರೆ.

ಸದ್ಯ ಸಂತೋಷ ಮೇಲೆ ಹಲ್ಲೆ ನಡೆಸಿದ್ದ. ಪ್ರಮುಖ ಆರೋಪಿಗಳಾದ ಗೋದಾವರಿ, ಆಕೆಯ ತಂದೆ ರಾಚಪ್ಪಾ ಚೌಗಲಾ,  ತಾಯಿ ದಾನವ್ವಾ ಹಾಗೂ ಆಕೆಯ ಸಹಚರರಾದ ಪ್ರಶಾಂತ ರಜಪೂತ, ಮಲ್ಲಿಕಜಾನ ನದಾಫ, ಮೊದಮ್ಮದ ಶಪೀಕ ಪಟೇಲ್, ಅಯೂಬ ಮುಲ್ಲಾ, ಏಕನಾಥ ಕಳೆಲಿ, ಈರಪ್ಪಾ ಕಡಕಿ, ಸೇರಿದಂತೆ ಒಟ್ಟು 11 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು ಎಲ್ಲರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Published by:MAshok Kumar
First published: