ಬೀದರ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ವ್ಯಕ್ತಿಯ ಬಂಧನ

ಧಾರ್ಮಿಕ ‌ಭಾವನೆ ಕೆರಳಿಸುವಿಕೆ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಕೆರಳಿಸುವ ಪ್ರಚೋದನಾಕಾರಿ ಸಂದೇಶಗಳ ಪೋಸ್ಟ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈತನ ಮೇಲೆ ಐಪಿಸಿ ಸೆಕ್ಷನ್ 1860 (uis-153A, 505(2)  ಅಡಿ ಕೇಸ್ ದಾಖಲಾಗಿದೆ‌. ಆರೋಪಿ NRC, NPR ವಿರೋಧಿಸಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆ ವೇಳೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯನಾಗಿದ್ದ ಎನ್ನಲಾಗಿದೆ.

news18india
Updated:June 26, 2020, 8:40 PM IST
ಬೀದರ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ.
  • Share this:
ಬೀದರ್‌ (ಜೂನ್ 26); ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇತರೆ ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಟ್ವಿಟ್ಟರ್ ನಲ್ಲಿ ನಕಲಿ ಖಾತೆ ತೆರೆದು ನಿರಂತರವಾಗಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ಬೀದರ್ ನಗರದ ಗಾಂಧಿಗಂಜ್ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.

ಬೀದರ್ ನಗರದ ಬದ್ರುದ್ದೀನ್ ಕಾಲೋನಿಯ ನಿವಾಸಿಯಾದ 40 ವರ್ಷದ ಮುಲ್ತಾನಿಮಿಯಾ ಎಂಬಾತನೇ ಬಂಧನಕ್ಕೊಳಗಾದ ವ್ಯಕ್ತಿ.

ಈತ ನಕಲಿ ಟ್ವಿಟ್ಟರ್ ಅಕೌಂಟ್ ತೆರೆದು ಪ್ರಧಾನಿ ‌ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ವಿರುದ್ಧ ನಿರಂತರವಾಗಿ ಅವಹೇಳನಕಾರಿಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳ ನಿಖರ ಮಾಹಿತಿ ಮೇರೆಗೆ ನಗರದ ಗಾಂಧಿಗಂಜ್ ಠಾಣೆ ಪೊಲೀಸರು ನಿನ್ನೆಯೇ ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಧಾರ್ಮಿಕ ‌ಭಾವನೆ ಕೆರಳಿಸುವಿಕೆ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಕೆರಳಿಸುವ ಪ್ರಚೋದನಾಕಾರಿ ಸಂದೇಶಗಳ ಪೋಸ್ಟ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈತನ ಮೇಲೆ ಐಪಿಸಿ ಸೆಕ್ಷನ್ 1860 (uis-153A, 505(2)  ಅಡಿ ಕೇಸ್ ದಾಖಲಾಗಿದೆ‌. ಆರೋಪಿ NRC, NPR ವಿರೋಧಿಸಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆ ವೇಳೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯನಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ; CoronaVirus: ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಗ್ವಿ- ಅವರ ಪತ್ನಿಗೆ ಕೊರೋನಾ ಪಾಸಿಟಿವ್; ಮನೆಯಲ್ಲೇ ಚಿಕಿತ್ಸೆ

ಈ ವೇಳೆಯೇ ಗುಪ್ತಚರ ಇಲಾಖೆ ಅಧಿಕಾರಿಗಳು ಈತನ ಮೇಲೆ ನಿಗಾವಹಿಸಿದ್ದರೂ ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ಬೇರೆಯವರ ಹೆಸರಲ್ಲಿ ಖಾತೆ ತೆರೆದು ಸಾಮಾಜಿಕ ಸಾಮರಸ್ಯ ಕದಡುವಂತಹ ಪೋಸ್ಟ್ ಮಾಡುತ್ತಿರುವ ವ್ಯಕ್ತಿ ಇವನೇ ಎಂಬ ಖಚಿತ ಮಾಹಿತಿ ‌ಮೇರೆಗೆ ಗಾಂಧಿಗಂಜ್ ಠಾಣೆ ಪೊಲೀಸರು ನಿನ್ನೆಯೇ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು‌.
First published: June 26, 2020, 8:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading