ನೀರಾವರಿ ಸಚಿವರ ತವರಿನಲ್ಲೇ ಇಲಾಖೆ ಅಧಿಕಾರಿಗಳ ಹಗಲು ದರೋಡೆ; ಇವರನ್ನ ಹೇಳೊರಿಲ್ಲ..ಕೇಳೊರಿಲ್ಲ!

ಬೂದಿಹಾಳ ಗ್ರಾಮದ ಹಿಂದುಳಿದ ಜನಾಂಗದ 45 ಎಕರೆ ಪ್ರದೇಶದ ರೈತರಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ 3.2 ಕಿಲೋಮೀಟರ್ ದೂರದ ವೇದಗಂಗಾ ನದಿ ಮೂಲಕ ಸುಮಾರು 30 ಲಕ್ಷ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ.

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಬೆಳಗಾವಿ (ಜೂನ್‌ 15); ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಕಾಮಗಾರಿಯನ್ನೇ ಬದಲಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಲು ಅಧಿಕಾರಿಗಳು ಮುಂದಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ನಡೆದಿದೆ.

ನಿಪ್ಪಾಣಿ ತಾಲೂಕಿನ ಸಚಿವೆ ಶಶಿಕಲಾ ಜೋಲ್ಲೆಯವರ ಕ್ಷೇತ್ರ ಬೂದಿಹಾಳ ಗ್ರಾಮದ ಗಂಗಾ ಕಲ್ಯಾಣ ಯೋಜನೆಯ ಕಾಮಗಾರಿಯಲ್ಲಿ ಭಾರಿ ಅವ್ಯವಹಾರಕ್ಕೆ ಇಲ್ಲಿನ ಅಧಿಕಾರಿಗಳೇ ಮುಂದಾಗಿದ್ದಾರೆ. ಯೋಜನೆ ರೂಪಿಸುವ ಮೊದಲು ಒಂದು ಎಸ್ಟಿಮೇಟ್ ಮಾಡಿ ಬಳಿಕ ಬೆರೋಂದು ಎಸ್ಟಿಮೇಟ್ ಪ್ರಕಾರ ಕೆಲಸ ನಡೆಸಲು ಅಧಿಕಾರಿಗಳು ಮುಂದಾಗಿದ್ದು ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಲು ಕೈ ಹಾಕಿದ್ದಾರೆ.

ಬೂದಿಹಾಳ ಗ್ರಾಮದ ಹಿಂದುಳಿದ ಜನಾಂಗದ 45 ಎಕರೆ ಪ್ರದೇಶದ ರೈತರಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ 3.2 ಕಿಲೋಮೀಟರ್ ದೂರದ ವೇದಗಂಗಾ ನದಿ ಮೂಲಕ ಸುಮಾರು 30 ಲಕ್ಷ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಮೊದಲು ಕಾಮಗಾರಿಗೆ ಚಾಲನೆ ನೀಡಿದ ಅಧಿಕಾರಿಗಳು ಏಕಾಏಕಿ 500 ಮೀಟರ್ ಕಾಮಗಾರಿ ಮಾಡಿ ಬಳಿಕೆ ಪಕ್ಕದ 1 ಕಿಲೋಮೀಟರ್ ದೂರದ ಹಳ್ಳದ ಮೂಲಕ ಪೈಪಲೈನ ಮಾಡಿ ನೀರು ಪೂರೈಸಲು ನೀರಾವರಿ ಅಧಿಕಾರಿಗಳು ಮುಂದಾಗಿದ್ದಾರೆ.

3.2 ಕಿಲೋಮೀಟರ್ ದೂರದ ಎಸ್ಟಿಮೇಟ್ ನಲ್ಲಿ 30 ಲಕ್ಷ ತಗುಲುತ್ತೆ. ಆದರೆ, ಅದರ ಬದಲಾಗಿ 1 ಕಿಲೋಮೀಟರ್ ದೂರದಿಂದ ಪೈಪ್‌ಲೈನ್ ಮಾಡಿದ್ರೆ ಬರಿ 10 ಲಕ್ಷದಲ್ಲಿ ಕಾಮಗಾರಿ ಆಗುತ್ತದೆ ಎನ್ನುವ ಉದ್ದೇಶದಿಂದ ಹಳ್ಳದ ನೀರು ಪೂರೈಕೆಗೆ ಮುಂದಾಗಿದ್ದು ಭಾರಿ ಗೋಲ್‌ಮಾಲ್‌ಗೆ ಅಧಿಕಾರಿಗಳು ಕೈ ಹಾಕಿದ್ದಾರೆ.

ಇನ್ನು ಗ್ರಾಮದ ಪಕ್ಕದಲ್ಲಿ ಇರುವ ಚಕುತ್ರಾ ಹಳ್ಳದಿಂದ ನೀರು ಪೂರೈಸಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ ಹಳ್ಳದಲ್ಲಿ ವರ್ಷದ ಮೂರು ತಿಂಗಳು ಅದು ಮಳೆಗಾಲದಲ್ಲಿ ಮಾತ್ರ ನೀರು ಇರುತ್ತೆ ಮಳೆಗಾಲದಲ್ಲಿ ನಮಗೆ ನೀರಿನ ಅವಶ್ಯಕತೆಯೆ ಇರಲ್ಲ ಆದ್ರೆ ವೇದಗಂಗಾ ನದಿಯಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ ಹಾಗಾಗಿ ಯೋಜನೆ ಎಸ್ಟಿಮೇಟ್ ಪ್ರಕಾರವೇ ನಮಗೆ ವೇದಗಂಗಾ ನದಿಯ ಮೂಲಕವೆ ನೀರು ಹರಿಸಬೇಕು ಅದು ಅಲ್ಲದೆ ಎಂದು ಫಲಾನುಭವಿ ರೈತರು ಒತ್ತಾಯಿದ್ದಾರೆ.

ಈ ವಿಷಯ ಮಾಧ್ಯಮದವರ ಗಮನಕ್ಕೆ ಬರುತ್ತಿದ್ದಂತೆ ತಮ್ಮ ಅಕ್ರಮವನ್ನ ಮುಚ್ಚಿಕೊಳ್ಳುಲು ಮುಂದಾಗಿರುವ ನೀರಾವರಿ ಸಹಾಯಕ ಅಭಿಯಂತರ ಅಧಿಕಾರಿ ಅಶೋಕ್ ಪುಜಾರಿ ಸಬೂಬು ಹೇಳಿ ಜಾರಿಕೊಳ್ಳಲು ಮುಂದಾಗಿದ್ದಾರೆ. 3.2 ಕಿಲೋಮೀಟರ್ ದೂರದ ಯೋಜನೆಯನ್ನೆ ನಾವು ಮಾಡುತ್ತಿದ್ದೆವು ಆದ್ರೆ ಕೆಲ ಗದ್ದೆಗಳಲ್ಲಿ ಬೆಳೆ ಇದ್ದ ಕಾರಣ ನಮಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ ಹಾಗಾಗಿ ನಾವು ಪಕ್ಕದ ಹಳ್ಳ ದಿಂದ ಕಾಮಗಾರಿ ಮಾಡಲು ಮುಂದಾಗಿದ್ದೇನೆ ಬೇಡ ಅಂದ್ರೆ ವಾಪಸ್ ದೂದಗಂಗಾ ನದಿಯಿಂದ ಕಾಮಗಾರಿ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಪರಿಷತ್ ಫೈಟ್: ವಿಶ್ವನಾಥ್, ಮುನಿರತ್ನ, ಸೋಮಶೇಖರ್ ಸಭೆ; ರೋಷನ್ ಬೇಗ್ ಸಿಎಂ ಭೇಟಿ
ಒಟ್ಟಿನಲ್ಲಿ ನೀರಾವರಿ ಸಚಿವ ರಮೇಶ ಜಾರಕಿಹೋಳಿ ಜಿಲ್ಲೆ ಅಲ್ಲದೆ ಸಚಿವೆ ಶಶಿಕಲಾ ಜೋಲ್ಲೆ ಅವರ ಕ್ಷೇತ್ರದಲ್ಲಿ ಅಧಿಕಾರಿಗಳು ಹಗಲು ದರೋಡೆಗೆ ಮುಂದಾಗಿದ್ದು ಬೇರೆ ಜಿಲ್ಲೆಗಳ ಕಥೆ ಎನಾಗಬಾರದರು‌.  ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ. 
First published: