news18-kannada Updated:July 30, 2020, 7:16 AM IST
ಇಕೋ ಬೀಚ್
ಕಾರವಾರ(ಜು.30): ಮಹಾಮಾರಿ ಕೊರೋನಾದಿಂದ ಉಂಟಾದ ಸಮಸ್ಯೆ ಒಂದೆರಡಲ್ಲ. ಸಾವಿರಾರು ಸಮಸ್ಯೆ ಎದುರಾಗಿ ಬದುಕು ಮೂರಾಬಟ್ಟೆ ಆಗಿದೆ. ಹಾಗೆ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸೋದ್ಯಮದಲ್ಲಿ ದೊಡ್ಡ ನಷ್ಟವೇ ಆಗಿದೆ. ಇನ್ನೇನು ಎರಡೇ ದಿನದಲ್ಲಿ ಬ್ಲೂ ಪ್ಲ್ಯಾಗ್ ಮಾನ್ಯತೆ ಪಡೆಯಲು ಲೋಕಾರ್ಪಣೆ ಆಗಬೇಕಿದ್ದ ಸಮಯದಲ್ಲೇ ಲಾಕ್ ಡೌನ್ ಹೇರಿ ಇಲ್ಲಿನ ಇಕೋ ಬೀಚ್ ಲಾಕ್ಡೌನ್ಗೆ ಲಾಕ್ ಆಯಿತು. ಈಗ ಪ್ರಕ್ರತಿಯ ವಿಕೋಪಕ್ಕೆ ಸಿಕ್ಕಿ ಕಡಲಕೊರೆತದ ಸಮಸ್ಯೆ ಎದುರಿಸುತ್ತಿದೆ. ಇದು ಹೊನ್ನಾವರ ತಾಲ್ಲೂಕಿನ ಇಕೋ ಬೀಚ್ ಕತೆ ವ್ಯಥೆ.
ಇನ್ನೇನು ಕೆಲವೇ ದಿನದಲ್ಲಿ ಬ್ಲೂ ಪ್ಲಾಗ್ ಸರ್ಟಿಫಿಕೇಟ್ ದೊರೆತು ಅಂತರಾಷ್ಟ್ರೀಯ ಗುಣಮಟ್ಟವನ್ನ ಹೊಂದಿದ ಕಡಲತೀರ ಎನ್ನುವ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಈಗ ಪ್ರಕೃತಿಯ ಮುನಿಸಿಗೆ ಮೈ ಒಡ್ಡಿದೆ, ಕಡಲತೀರದಲ್ಲಿ ನಿರ್ಮಿಸಲಾದ ಪ್ರವಾಸಿಗರ ಆಕರ್ಷಿತ ಕಾಮಗಾರಿಗಳು ಕಡಲಕೊರೆತಕ್ಕೆ ಸಿಕ್ಕಿ ಅಸ್ತವ್ಯಸ್ಥವಾಗಿದೆ.
ಸಿಇಟಿ ಪರೀಕ್ಷೆ ಬಗ್ಗೆ ಗೊಂದಲಗಳಿದ್ದರೆ ಈ ನಂಬರ್ಗೆ ಕರೆ ಮಾಡಿ: 080 23460460, 080 23564583
ಕಳೆದ ಮಾರ್ಚ್ ತಿಂಗಳಲ್ಲೆ ಕಡಲತೀರ ಲೋಕಾರ್ಪಣೆ ಆಗಬೇಕಿತ್ತು. ಆದರೆ ಲಾಕ್ ಡೌನ್ ನಿಂದ ಉದ್ಘಾಟನೆ ಕಾರ್ಯಕ್ರಮವನ್ನ ಮುಂದಕ್ಕೆ ಹಾಕಲಾಯಿತು. ಉದ್ಘಾಟನೆ ಮುಂಚಿತವಾಗಿಯೇ ನಿರ್ಮಿತವಾದ ಆಕರ್ಷಕ ಕಾಮಗಾರಿಗಳು ಕಡಲಕೊರೆತಕ್ಕೆ ನೆಲ ಕಚ್ಚಿವೆ. ಆಕರ್ಷಕವಾಗಿ ನಿರ್ಮಾಣವಾದ ವೀಕ್ಷಣ ಗೋಪುರ, ರಸ್ತೆ, ಮೆಟ್ಟಿಲು, ವಾಕಿಂಗ್ ಪಾಥ್, ಹೀಗೆ ಹತ್ತು ಹಲವು ಕಾಮಗಾರಿಗಳು ಸಮುದ್ರದ ಅಲೆಗೆ ಕೊಚ್ಚಿ ಹೋಗಿವೆ. ಈ ಹಿನ್ನಲೆಯಲ್ಲಿ ಬ್ಲೂ ಪ್ಲಾಗ್ ಸರ್ಟಿಫಿಕೇಟ್ ಸಿಗತ್ತೊ ಇಲ್ಲವೋ ಎನ್ನುವ ಆತಂಕ ಸ್ಥಳೀಯರದ್ದು ಹಾಗು ಗುತ್ತಿಗೆದಾರರದ್ದಾಗಿದೆ.
ಇನ್ನೂ ಬ್ಲೂ ಪ್ಲ್ಯಾಗ್ ಯೋಜನೆ ಕೇಂದ್ರ ಸರಕಾರದ್ದಾಗಿದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಈ ಇಕೋ ಬೀಚ್ ಸೌದರ್ಯವನ್ನ ತುಂಬಿಕೊಂಡು ಸಾವಿರಾರು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿತ್ತು. ಈ ಹಿನ್ನಲೆಯಲ್ಲಿ ಇಕೋ ಕಡಲತೀರಕ್ಕೆ ಅಂತರಾಷ್ಟ್ರೀಯ ಮಾನ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕಾಮಗಾರಿಗಳನ್ನ ನಿರ್ಮಿಸಿತ್ತು. ಆದರೆ ಉದ್ಘಾಟನೆ ಮುಂಚಿತವಾಗಿಯೇ ಇಂತ ಅವಘಡಗಳು ನಡೆದು ಹೋಗಿದೆ ಹಾಕಿದ ಹಣ ನೀರಿನಲ್ಲಿ ಹೋಮವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದರೆ ಪ್ರಕೃತಿಯ ಮುನಿಸು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಮುದ್ರದ ಕೊರೆತಕ್ಕೆ ಕಡಲತೀರ ಹಾನಿ ಆಗಿದೆ. ಅದನ್ನ ಮತ್ತೆ ಮರು ನಿರ್ಮಾಣದ ಕೆಲಸ ಮಾಡಲಾಗುವುದು ಜತೆಗೆ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ಸಿಕ್ಕೇ ಸಿಗುತ್ತೆ, ಯಾವುದೇ ಸಂಶಯ ಬೇಡ ಎನ್ನುತ್ತಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಕೇವಲ ಜನರ ಬದುಕನ್ನ ಕಸಿದುಕೊಂಡಿಲ್ಲ ಬದಲಾಗಿ ಇಂತ ಹತ್ತು ಹಲವು ಕಾರ್ಯಕ್ರಮಕ್ಕೆ ಅಡ್ಡಿ ಮಾಡಿ ಸಾಕಷ್ಟು ತೊಂದರೆ ತಂದೊಡ್ಡಿದೆ. ಆದರೆ ಇದರ ಜತೆಗೆ ಪ್ರಕ್ರತಿಯೂ ಕೂಡಾ ಕಣ್ಣಮುಚ್ಚಾಲೆ ಆಟ ಆಡಿ ಸಮಸ್ಯೆ ತಂದೊಡ್ಡಿದೆ.
Published by:
Latha CG
First published:
July 30, 2020, 7:16 AM IST