Delta plus: ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಕೋಲಾರಕ್ಕೆ ಕಾಡುತ್ತಿದೆ ಡೆಲ್ಪಾ ಪ್ಲಸ್ ಭೀತಿ

ನಿತ್ಯ ಕೋಲಾರ ಮಾರುಕಟ್ಟೆಯಿಂದ 500 ಕ್ಕು ಹೆಚ್ಚು ಲಾರಿ ಲೋಡ್‍ಗಳು ಬೇರೆ ಬೇರೆ  ರಾಜ್ಯಗಳಿಗೆ ಹೊಗುವುದು, ಬರುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ, ಇನ್ನು  ಲಾರಿಗಳ ಜೊತೆಗೆ ಚಾಲಕರು, ಕ್ಲೀನರ್‍ಗಳು , ಕಾರ್ಮಿಕರು ಬರುತ್ತಿದ್ದು, ಇವರಿಂದ ಡೆಲ್ಪಾ ಪ್ಲಸ್ ವೈರಸ್ ಆತಂಕ  ಜಿಲ್ಲೆಗೆ ಎದುರಾಗಿದೆ

ಕೋಲಾರದ ಟೊಮೇಟೊ ಮಾರುಕಟ್ಟೆ

ಕೋಲಾರದ ಟೊಮೇಟೊ ಮಾರುಕಟ್ಟೆ

  • Share this:
ಕೋಲಾರ: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂದು ಖ್ಯಾತಿ ಗಳಿಸಿರುವ, ಚಿನ್ನದ ನಾಡು ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಜಿಲ್ಲೆಗೆ ಡೆಲ್ಟಾ ಪ್ಲಸ್ ವೈರಸ್ ಹರಡುವ ಭೀತಿ ನಿಧಾನವಾಗಿ ಆವರಿಸುತ್ತಿದೆ,  ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇಕಡಾ 2 ಕ್ಕಿಂತ ಕಡಿಮೆಯಿದ್ದು, ಸಾವಿನ ಪ್ರಕರಣಗಳು ಆಗಾಗ್ಗ ದಾಖಲಾಗುತ್ತಿದೆ,  ಆದರೆ ರಾಜ್ಯಕ್ಕೆ ಈಗ ಡೆಲ್ಟಾ ಪ್ಲಸ್ ವೈರಸ್ ಭೀತಿಯು ಕಾಡುತ್ತಿರುವ ಹಾಗೆ, ಇತ್ತ ಗಡಿ ಜಿಲ್ಲೆ ಕೋಲಾರ ಕ್ಕು,  ಎಪಿಎಂಸಿ ಮಾರುಕಟ್ಟೆಯಿಂದಲೇ ಆಪತ್ತು ಕಾದಿದೆಯಾ ಎನ್ನುವ ಆತಂಕ ಆರಂಭವಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಜೂನ್  2 ನೇ ವಾರದಿಂದ ಮುಂದಿನ 3 ತಿಂಗಳ ಕಾಲ ಟೊಮೆಟೊ ಸೀಸನ್ ವಹಿವಾಟು ನಡೆಯಲಿದ್ದು, ನೆರೆಯ ಮಹಾರಾಷ್ಟ್ರ, ಕೇರಳ, ಒರಿಸ್ಸಾ, ಪುಣೆ, ಸೇರಿ ದೇಶದ 10 ಕ್ಕು ಹೆಚ್ಚು ರಾಜ್ಯಗಳಿಗೆ ಇಲ್ಲಿಂದಲೇ ಟೊಮೆಟೊ ಸರಬರಾಜು ಆಗುತ್ತಿದೆ, ಎಲ್ಲರಿಗು ತಿಳಿದಿರೊ ಹಾಗೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಪಾ ಪ್ಲಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು,  ನಿತ್ಯ ಕೋಲಾರ ಮಾರುಕಟ್ಟೆಯಿಂದ 500 ಕ್ಕು ಹೆಚ್ಚು ಲಾರಿ ಲೋಡ್‍ಗಳು ಬೇರೆ ಬೇರೆ  ರಾಜ್ಯಗಳಿಗೆ ಹೊಗುವುದು, ಬರುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ, ಇನ್ನು  ಲಾರಿಗಳ ಜೊತೆಗೆ ಚಾಲಕರು, ಕ್ಲೀನರ್‍ಗಳು , ಕಾರ್ಮಿಕರು ಬರುತ್ತಿದ್ದು, ಇವರಿಂದ ಡೆಲ್ಪಾ ಪ್ಲಸ್ ವೈರಸ್ ಆತಂಕ  ಜಿಲ್ಲೆಗೆ ಎದುರಾಗಿದ್ದು,   ಇದಕ್ಕೆ ಕಾರಣವು ಇದೆ,   ಮಹಾರಾಷ್ಟ್ರ ಒಂದೇ ರಾಜ್ಯಕ್ಕೆ ಪ್ರತಿದಿನ 150 ಕ್ಕು ಲಾರಿಗಳು ಬಂದು ಹೋಗುತ್ತಿದೆ, ಇಷ್ಟಾದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ, ಇದಕ್ಕೆ ಕಾರಣ ಸರ್ಕಾರ ಈ ಬಗ್ಗೆ ಯಾವುದೇ ಸೂಚನೆ ನೀಡದ ಕಾರಣ ಸುಮ್ಮನಾಗಿದೆ ಎನ್ನುವ ಅಸ್ಪಷ್ಟ ಉತ್ತರ ಸಿಗುತ್ತಿದೆ.

ಮಂಡಿ ಮಾಲೀಕರಿಗೆ ಮೌಖಿಕ ಸೂಚನೆ ಕೊಟ್ಟು, ಕೈ ಕಟ್ಟಿ ಕುಳಿತಿದೆ ಮಾರುಕಟ್ಟೆ ಆಡಳಿತ ಮಂಡಳಿ ಇಂತಹ ಗಂಭೀರವಾದ ವಿಚಾರ ಕುರಿತು  ಮಾರುಕಟ್ಟೆ ಆಡಳಿತ ಮಂಡಳಿಯದು ಒಂದೇ ಉತ್ತರವಾಗಿದೆ, ಹೆಚ್ಚಿಗೆ ಆರೋಗ್ಯ ತಪಾಸಣೆ ನಡೆಸಲು ಹೋದರೆ ಮಾರುಕಟ್ಟೆಗೆ  ಕಾರ್ಮಿಕರು ಹಾಗು ವ್ಯಾಪಾರಿಗಳು ಬರೊಲ್ಲ, ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಬರುವ  ಲಾರಿ ಚಾಲಕರು ಕೆಳಗಿಳಿದು ಎಲ್ಲೂ ಓಡಾಡದಂತೆ, ಆಯಾ ಮಂಡಿ ಮಾಲೀಕರಿಗೆ ಸೂಚನೆ ನೀಡಿರುವುದಾಗಿ ಅಲ್ಲಿನ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ‌. ಇನ್ನು ಆರೋಗ್ಯ ಇಲಾಖೆಯ ಕಥೆಯೂ ಇದೇ ಆಗಿದೆ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗಿದೆಯೆಂದು ಖುಷಿಯಿಂದ ನಿಟ್ಟುಸಿರು ಬಿಡುತ್ತಿರುವ ಅಧಿಕಾರಿಗಳು, ಮಾರುಕಟ್ಟೆಗೆ ಬರುವ ಚಾಲಕರ ಹಾಗು ಕಾರ್ಮಿಕರ ಬಗ್ಗೆ  ನಿಗಾ ವಹಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ, ಇನ್ನು  ಮಾರುಕಟ್ಟೆ ಮಂಡಳಿಯ ವಿರುದ್ದ ರೈತ ಮುಖಂಡರು ಕಿಡಿಕಾರಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಸ್ಟರ್ ಸೆರೆ.

ಒಟ್ಟಿನಲ್ಲಿ  ಟೊಮೆಟೊ ಬೆಳೆ ಚಿನ್ನದ ನಾಡಿನ ರೈತರ ಬೆನ್ನುಲುಬಾಗಿದೆ, ಈ ಬಾರಿ ಕೆಂಪು ಹಣ್ಣಿಗೆ ಬೇಡಿಕೆಯಿಲ್ಲದೆ ಬೆಲೆಯು ಪಾತಾಳಕ್ಕೆ ಕುಸಿದಿದ್ದು, ನಷ್ಟವಿದ್ದರು ಸಿಕ್ಕ‌ ಬೆಲೆಗೆ ರೈತರು ಮಾರಾಟ ಮಾಡಿ ಹೋಗುತ್ತಿದ್ದಾರೆ, ಆದರೆ ಮಾರುಕಟ್ಟೆಗೆ ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರು, ಹಮಾಲರು, ಚಾಲಕರು ಮತ್ತು ಕ್ಲೀನರ್ ಗಳ ಮೇಲೆ ಜಿಲ್ಲಾಡಳಿತ,  ತೀವ್ರ ನಿಗಾ ಇಡದೆ ಹೋದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಜಿಲ್ಲೆಯ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ‌.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: