• Home
  • »
  • News
  • »
  • district
  • »
  • ಕೊಲೆಯಲ್ಲಿ ಅಂತ್ಯವಾದ ಗ್ರಾ. ಪಂ. ವಿಜಯೋತ್ಸವ ; ಸೋತವರಿಂದ ಗೆದ್ದ ಅಭ್ಯರ್ಥಿ ಅಣ್ಣನ ಕೊಲೆ 

ಕೊಲೆಯಲ್ಲಿ ಅಂತ್ಯವಾದ ಗ್ರಾ. ಪಂ. ವಿಜಯೋತ್ಸವ ; ಸೋತವರಿಂದ ಗೆದ್ದ ಅಭ್ಯರ್ಥಿ ಅಣ್ಣನ ಕೊಲೆ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಲೆಗೆ ಸಂಬಂಧಿಸಿದಂತೆ ಜಹಾಂಗೀರ್ ಮುಲ್ಲಾ, ಸುಲ್ತಾನ್ ಸಾಬ ಮುಲ್ಲಾ, ಹಸನಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸಿಪ್ ಮುಲ್ಲಾ, ಮೋಸಿನ್ ಖಾಜಿ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

  • Share this:

ಚಿಕ್ಕೋಡಿ(ಡಿಸೆಂಬರ್​. 31): ಗ್ರಾಮ ಪಂಚಾಯಿತಿ ಚುನಾವಣೆ ಅಂದ್ರೆನೇ ಹಾಗೆ ಒಂದೇ ಊರಿನಲ್ಲಿ ಆಟ ಆಡಿ ಬೆಳೆದ ಸಹೋದರರು ಎದುರಾಳಿಗಳಾಗುತ್ತಾರೆ. ಹೆಣ್ಣು ಕೊಟ್ಟು ಪಡೆದ ಮಾವ ಅಳಿದಂದಿರೇ ಪರಸ್ಪರ ಕೈ ತೊಡೆ ತಟ್ಟುತ್ತಾರೆ. ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಅದೇ ರೀತಿಯದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಚುನಾವಣಾ ಕಾವು ಜೋರಾಗೆ ಇತ್ತು. ಗ್ರಾಮದಲ್ಲಿ ಬಶೀರ್ ಮುಲ್ಲಾ ಪೆನಲ್ 10 ಸ್ಥಾನ ಗೆದ್ದು ಈ ಹಿಂದೆ ಗೆಲ್ಲುತ್ತ ಬಂದಿದ್ದ ಶಬ್ಬೀರ್ ಮುಲ್ಲಾ ಪೆನಲ್ ಠೇವಣಿ ಕಳೆದುಕೊಂಡಿತ್ತು. ಹೀಗಾಗಿ ವಿಜಯೋತ್ಸವ ನಡೆಸುತ್ತಿದ್ದ ಬಶೀರ್ ಮನೆಯವರ ಮೇಲೆ ಶಬ್ಬೀರ್ ಮುಲ್ಲಾ ಕುಟುಂಬದವರು ಕಾಲ್ಕೆರೆದು ಜಗಳ ಮಾಡುವುದಕ್ಕೆ ಬಂದಿದ್ದಾರೆ. ಜಗಳ ಮಾತಿಗಷ್ಟೆ ಸೀಮಿತವಾಗದೆ ಕೈಲಿ ಕೋಲು, ರಾಡ್, ಹರಿತವಾದ ಕತ್ತಿ ಹಿಡಿಯುವರೆಗೆ ಬಂದು ಬಿಟ್ಟಿದೆ. ಈ ಘಟನೆಯಲ್ಲಿ ಗೆದ್ದ ಅಭ್ಯರ್ಥಿ ಬಶೀರ್ ಮುಲ್ಲಾ ಸಹೋದರ ಶಾನೂರ ಮುಲ್ಲಾ ಅವರ ಕೊಲೆಯಾಗಿ ಹೋಗಿದೆ.


ಸುಲ್ತಾನಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಕೇವಲ ಶಬ್ಬೀರ್ ಅವರ ಪೆನಲ್ ವಿನ್ ಆಗ್ತಾ ಬರ್ತಿತ್ತು‌. ಗೆದ್ದು ಬಂದ ಮೇಲೆ ಗ್ರಾಮದಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಹೀಗಾಗಿ ಈ ಬಾರಿ ಬಶೀರ್ ಅವರ ಪೆನಲ್ ಎಲೆಕ್ಷನ್ ಗೆ ನಿಂತು ಬರೊಬ್ಬರಿ 10 ಸ್ಥಾನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು. ಅಲ್ಲೆ ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಬೆಟ್ಟಿಂಗ್ ಸಹ ಊರೊಳಗೆ ಶುರುವಾಗಿದ್ದವು.


ನಿನ್ನೆ ಗೆದ್ದ ನಂತರ ಬಶೀರ್ ಟೀಂನವರು ಪಕ್ಕದ ಗ್ರಾಮ ಬಸಾಪುರಕ್ಕೆ ಹೋಗಿ ಸಂಬಂಧಿಕರಿಗೆ  ಸ್ವೀಟ್ ನೀಡಿ ಬಂದಿದ್ದಾರೆ. ಇವರು ಸ್ವೀಟ್ ನೀಡಿ ಬಂದ ವಿಷಯ ಸೋತ ಶಬ್ಬೀರ್ ಮನೆಯವರಿಗೆ ತಿಳಿದಿದ್ದೆ ತಡ ಏಕಾಏಕಿ ಬಶೀರ್ ಮನೆ ಮುಂದೆ ಬಂದು ಶಬ್ಬೀರ್ ಬೆಂಬಲಿಗರು ದಾಂಧಲೇ ಶುರುಮಾಡಿದ್ದಾರೆ.


ಇದನ್ನೂ ಓದಿ : ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್


ಇವರಿಗೆ ಬುದ್ದಿ ಹೇಳಿ ಕಳಿಸುವುದಕ್ಕೆ ಮನೆಯಿಂದ ಹೊರಬಂದ ಶಾನೂರ ಅವರನ್ನ ಎಳೆದ ಶಬ್ಬೀರ್ ಮನೆಯರು ಏಕಾಏಕಿ ಶಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವುದಕ್ಕೆ ಶುರು ಮಾಡಿದ್ದಾರೆ.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಕ್ಕೇರಿ ಪೊಲೀಸರು 6 ಜನರನ್ನು ಬಂಧಿಸಿದ್ದು ಜಹಾಂಗೀರ್ ಮುಲ್ಲಾ, ಸುಲ್ತಾನ್ ಸಾಬ ಮುಲ್ಲಾ, ಹಸನಸಾಬ್ ಮುಲ್ಲಾ, ದಸ್ತಗೀರ ಮುಲ್ಲಾ, ತೌಸಿಪ್ ಮುಲ್ಲಾ, ಮೋಸಿನ್ ಖಾಜಿ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಇರಲಿ ಗ್ರಾಂ ಪಂ ಚುನಾವಣೆಯಲ್ಲಿ ಸಹೋದರ ಸಂಬಂಧಿಗಳೇ ಬಡಿದಾಡಿಕೊಂಡು ಒಂದು ಪ್ರಾಣಕ್ಕೆ ಸಂಚಕಾರ ತಂದಿರುವದಂತು ವಿಪರ್ಯಾಸ.

Published by:G Hareeshkumar
First published: