ಮಳೆ - ಚಳಿ ತಾಳಲಾರದೆ ಹಾಡಹಗಲೇ ಬಾರ್ಗೆ ನುಗ್ಗಿದ ಜಿಂಕೆ, ಅದನ್ನು ಹಿಡಿಯುವಷ್ಟರಲ್ಲಿ ಜನ ಸುಸ್ತು !
ಸುಮಾರು 20 ಜನ ಸೇರಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಹಿಡಿದಿದ್ದಾರೆ. ಇಷ್ಟರಲ್ಲಿ ಅದು ಕೂಡಾ ಗಾಬರಿಯಾಗಿತ್ತು. ಆದರೆ ಗಟ್ಟಿಯಾಗಿ ಹಿಡಿದು ಜಿಂಕೆಯ ಕಾಲನ್ನು ಹಗ್ಗದಿಂದ ಕಟ್ಟಿದ್ದಾರೆ. ನಂತರ ಕಾಡಿನೊಳಗೆ ಬಿಟ್ಟಿದ್ದಾರೆ. ಹಗ್ಗ ಬಿಚ್ಚಿದ ಕ್ಷಣಾರ್ಧದಲ್ಲಿ ಜಿಂಕೆ ಕಾಡಿನೊಳಗೆ ಮರೆಯಾಗಿದೆ.
ಚಿಕ್ಕಮಗಳೂರು: ಚಿಕ್ಕಮಗಳೂರು ಕಳಸ ಪಟ್ಟಣದ ಆಶೀರ್ವಾದ್ ಬಾರ್ & ರೆಸ್ಟೊರೆಂಟ್ನಲ್ಲಿ ಇಂದು ಬೆಳಗ್ಗೆ ಭಾರೀ ಸಾಹಸವೇ ನಡೆದುಹೋಯಿತು. ಅದೆಲ್ಲಿಂದಲೋ ಬಂದ ಜಿಂಕೆಯೊಂದು ಬಾರ್ ಒಳಗಿನ ಗಾಜಿನ ಕ್ಯಾಬಿನೆಟ್ ಒಳಗೆ ಸೇರಿಕೊಂಡುಬಿಟ್ಟಿತ್ತು. ಬಾರ್ ಮುಚ್ಚಿದ್ದರೂ ಪಕ್ಕದಲ್ಲೇ ಇದ್ದ ರೆಸ್ಟೊರೆಂಟ್ ತೆರೆಯಲು ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಸಿಬ್ಬಂದಿ ಒಂದು ಕ್ಷಣ ಗಾಬರಿಯಾದ್ರು. ಮಲೆನಾಡಿನ ಈ ಊರಲ್ಲಿ ಕಾಡುಪ್ರಾಣಿಗಳು ಅಪರೂಪವಲ್ಲ. ಆದರೆ ಹೀಗೆ ಹಾಡಹಗಲೇ ಜಿಂಕೆಯೊಂದು ಒಳನುಗ್ಗಿದ್ದು ಸ್ವಲ್ಪ ಸೋಜಿಗವೇ. ಮುಂಜಾನೆ 6.30ರ ವೇಳೆಗೆ ತೆರೆದ ಬಾಗಿಲಿನೊಳಗೆ ಛಂಗನೆ ಜಿಗಿದು ಒಳಬಂದ ಜಿಂಕೆ ನೇರವಾಗಿ ಗಾಜಿನ ಕಪಾಟಿನ ಪಕ್ಕದಲ್ಲಿ ಸೇರಿಕೊಂಡುಬಿಟ್ಟಿತು.
A confused deer rushed inside a Bar and Restaurant in the early hours of this morning in Kalasa, Chikkamagalur Dist, Karnataka. The animal hid inside the bar cabinet and was later pulled out by the Forest Department Staff with help from localites. #DeerforBeerpic.twitter.com/EUaZFlFfhR
"ಒಂದು ಕ್ಷಣ ನಮಗೆಲ್ಲಾ ಗಾಬರಿಯಾಗಿಬಿಟ್ಟಿತ್ತು. ಗಾಜಿಗೆ ಹೊಡೆದು ಅದು ಪುಡಿಯಾಗಿ ಜಿಂಕೆಗೆ ಏನಾದ್ರೂ ಆದರೆ ಎಂದು ಹೆದರಿದ್ದೆವು. ಗಾಜು ಗಟ್ಟಿ ಇದ್ದಿದ್ರಿಂದ ಒಂದೆರಡು ಸಲ ಜಿಂಕೆ ಗುದ್ದಿದರೂ ಒಡೆಯಲಿಲ್ಲ" ಎನ್ನುತ್ತಾರೆ ಆಶೀರ್ವಾದ್ ಬಾರ್ & ರೆಸ್ಟೊರೆಂಟ್ ಮಾಲೀಕ ರವಿ ರೈ. ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. 20 ನಿಮಿಷದೊಳಗೆ ಬಂದ ಅರಣ್ಯ ಸಿಬ್ಬಂದಿ ಜಿಂಕೆಯನ್ನು ಮೊದಲು ಬಾರ್ ಕ್ಯಾಬಿನೆಟ್ ಪಕ್ಕದಿಂದ ಹೊರತಂದಿದ್ದಾರೆ. ನಂತರ ಅಲ್ಲಿದ್ದ ಜನರೆಲ್ಲಾ ಸೇರಿ ಹರಸಾಹಸ ಪಟ್ಟು ಅದನ್ನು ಹಿಡಿದಿದ್ದಾರೆ.
ಸುಮಾರು 20 ಜನ ಸೇರಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಹಿಡಿದಿದ್ದಾರೆ. ಇಷ್ಟರಲ್ಲಿ ಅದು ಕೂಡಾ ಗಾಬರಿಯಾಗಿತ್ತು. ಆದರೆ ಗಟ್ಟಿಯಾಗಿ ಹಿಡಿದು ಜಿಂಕೆಯ ಕಾಲನ್ನು ಹಗ್ಗದಿಂದ ಕಟ್ಟಿದ್ದಾರೆ. ನಂತರ ಕಾಡಿನೊಳಗೆ ಬಿಟ್ಟಿದ್ದಾರೆ. ಹಗ್ಗ ಬಿಚ್ಚಿದ ಕ್ಷಣಾರ್ಧದಲ್ಲಿ ಜಿಂಕೆ ಕಾಡಿನೊಳಗೆ ಮರೆಯಾಗಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಮುಂಚೆಯೇ ಬಾರ್ಗೆ ಬಂದ ಜಿಂಕೆ (Deer) ನೋಡಿ ಜನ ಆಶ್ಚರ್ಯಪಟ್ಟಿದ್ದಾರೆ. ಯಾವುದೇ ಹಾನಿಯಾಗದೇ ಜಿಂಕೆ ಕಾಡಿಗೆ ಮರಳಿದ್ದು ಎಲ್ಲರಿಗೂ ಸಮಾಧಾನ ತಂದಿದೆ.