HOME » NEWS » District » DEEPAK RAO MURDER ACCUSED LIFE IS THREAT MAK

Crime News: ದೀಪಕ್ ರಾವ್ ಹತ್ಯೆ ಆರೋಪಿಯ ಕೊಲೆ ಯತ್ನ; ಅನೈತಿಕ ಸಂಬಂಧ ಕಾರಣ?

ಈಗ ಪಿಂಕಿ ನವಾಜ್ ಕೊಲೆ ಯತ್ನ ನಡೆದಿದೆ. ಸುರತ್ಕಲ್ ಬಳಿಯ ಕಾಟಿಪಳ್ಳ ಎರಡನೇ ಬ್ಲಾಕ್ ಬಳಿ ಪಿಂಕಿ ನವಾಜ್ ಮೇಲೆ ತಲ್ವಾರ್ ಅಟ್ಯಾಕ್ ಮಾಡಲಾಗಿದೆ‌. ಸ್ವಿಫ್ಟ್ ಕಾರಿನಲ್ಲಿ ಬಂದ 6 ಜನರ ತಂಡ ಪಿಂಕಿ ನವಾಜ್ ಮೇಲೆ ಹಲ್ಲೆ ಮಾಡಿದ್ದಾರೆ.

news18-kannada
Updated:February 12, 2021, 7:29 AM IST
Crime News: ದೀಪಕ್ ರಾವ್ ಹತ್ಯೆ ಆರೋಪಿಯ ಕೊಲೆ ಯತ್ನ; ಅನೈತಿಕ ಸಂಬಂಧ ಕಾರಣ?
ಸಾಂದರ್ಭಿಕ ಚಿತ್ರ.
  • Share this:
ಮಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಕೇಸ್, ಇದು ಇಡೀ ಕರಾವಳಿಯನ್ನೇ ಕೋಮು ದಳ್ಳುರಿಗೆ ತಳ್ಳಿತ್ತು. ಆರ್.ಎಸ್.ಎಸ್ ಕಾರ್ಯಕರ್ತನ ಕೊಲೆ ಅದಕ್ಕೆ ಪ್ರತಿಕಾರವಾಗಿ ಅಂದೆ ಮತ್ತೊಂದು ಸಮುದಾಯದ ವ್ಯಕ್ತಿಯ ಕೊಲೆ ನಡೆದಿತ್ತು. ಅಂದು ಮಂಗಳೂರು ಹೊತ್ತಿ ಉರಿದಿತ್ತು‌‌. ಈಗ ಅದರ ಕೊಲೆಯ ಪ್ರಮುಖ ಆರೋಪಿ ಮೇಲೆ ಅಟ್ಯಾಕ್ ಮಾಡಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಅದು 2018 ರ ಜನವರಿ 3. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಆರ್.ಎಸ್‌.ಎಸ್ ಕಾರ್ಯಕರ್ತ ದೀಪಕ್ ರಾವ್ ಕೊಲೆ ನಡೆದಿತ್ತು. ಆ ಕೊಲೆ ನಡೆದಿದ್ದೇ ತಡ ಪ್ರತಿಕಾರವಾಗಿ ಆಕಾಶಭವನ ನಿವಾಸಿ ಬಷೀರ್ ಕೊಲೆ ಮಾಡಲಾಗಿತ್ತು. ಅಂದು ಆಗಿದ್ದ ಕೋಮುದಳ್ಳುರಿಗೆ ಇಡೀ ಮಂಗಳೂರಿಗೆ ಮಂಗಳೂರೇ ಕೆಂಡವಾಗಿತ್ತು.

ಇಡೀ ಜಿಲ್ಲೆಗೆ ಜಿಲ್ಲೆಯಲ್ಲೇ ಅದೆಷ್ಟೋ ತಿಂಗಳು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿತ್ತು. ದೀಪಕ್ ರಾವ್ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಲ್ಲಿ ಪಿಂಕಿ ನವಾಜ್ ಕೂಡ ಒಬ್ಬನಾಗಿದ್ದ. ಈ ಪಿಂಕಿ ನವಾಜ್ ಒಬ್ಬ ರೌಡಿಶೀಟರ್. ಫ್ಲೆಕ್ಸ್ ಹಾಕೊ ವಿಚಾರಕ್ಕೆ ಗಲಾಟೆಯಾಗಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನ್ನು ಡಿಲಿಟ್ ಮಾಡದಿದ್ದಕ್ಕೆ ದೀಪಕ್ ರಾವ್ ನನ್ನೇ ಮುಗಿಸಿಬಿಟ್ಟಿದ್ರು. ಇನ್ನು ಈ ಪ್ರಕರಣದಲ್ಲಿ ಪಿಂಕಿ ನವಾಜ್ ಬಂಧನವಾಗಿದ್ದ‌. ಈ ಘಟನೆ ಕಳೆದು ಮೂರು ವರ್ಷ ಆಗಿ ಹೋಗಿದೆ‌.

ಈಗ ಪಿಂಕಿ ನವಾಜ್ ಕೊಲೆ ಯತ್ನ ನಡೆದಿದೆ. ಸುರತ್ಕಲ್ ಬಳಿಯ ಕಾಟಿಪಳ್ಳ ಎರಡನೇ ಬ್ಲಾಕ್ ಬಳಿ ಪಿಂಕಿ ನವಾಜ್ ಮೇಲೆ ತಲ್ವಾರ್ ಅಟ್ಯಾಕ್ ಮಾಡಲಾಗಿದೆ‌. ಸ್ವಿಫ್ಟ್ ಕಾರಿನಲ್ಲಿ ಬಂದ 6 ಜನರ ತಂಡ ಪಿಂಕಿ ನವಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಕೈ ಮತ್ತು ಕುತ್ತಿಗೆ ಭಾಗಕ್ಕೆ ಇರಿದಿದ್ರಿಂದ ಗಂಭೀರ ಗಾಯಗೊಂಡ ಪಿಂಕಿ ನವಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.ಇನ್ನೂ ಕೂಡ ಪಿಂಕಿ ನವಾಜ್ ಸ್ಥಿತಿ ಗಂಭೀರವಾಗಿದೆ ಅಂತಾ ತಿಳಿದು ಬಂದಿದೆ.

ಇದು ದೀಪಕ್ ರಾವ್ ಪ್ರತಿಕಾರ ಅಂತಾ ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಇದ್ರಿಂದ ಆಗುವ ಅನಾಹುತದ ಬಗ್ಗೆ ಎಚ್ಚೆತ್ತುಕೊಂಡ ಮಂಗಳೂರು ಪೊಲೀಸ್ ಕಮಿಷನರ್ ಪಿಂಕಿ ನವಾಜ್ ಬಳಿ ಮಾತನಾಡಿ ಯಾರು ಅಟ್ಯಾಕ್ ಮಾಡಿದ್ದು ಅಂತಾ ಮಾಹಿತಿ ಕಲೆ ಹಾಕಿದ್ರು. ಪಿಂಕಿ ನವಾಜ್ ಜೊತೆ ಮಾತನಾಡಿ ಅಟ್ಯಾಕ್ ಮಾಡಿದ್ದು ಯಾರು ಅನ್ನೊದ್ರ ಬಗ್ಗೆ ರಿವಿಲ್ ಮಾಡಿದ್ರು.

ಇದನ್ನೂ ಓದಿ: Farmers Protest: ಪಂಜಾಬ್​ನಲ್ಲಿ ಮೊದಲ ಕಿಸಾನ್ ಮಹಾ ಪಂಚಾಯತ್; ಲಕ್ಷಕ್ಕೂ ಅಧಿಕ ರೈತರು ಭಾಗಿ, ತೀವ್ರವಾಗಲಿದೆಯೇ ಚಳುವಳಿ?

ಮೇಲ್ನೋಟಕ್ಕೆ ದೀಪಕ್ ರಾವ್ ಕೊಲೆಗೆ ರಿವೇಂಜ್ ಅಲ್ಲ ಎಂದು ಕಂಡು ಬರುತ್ತಿದೆ.ಶಾಕಿಬ್ ಅಲಿಯಾಸ್ ಶಬ್ಬು ಮತ್ತು ನಾಲ್ವರಿಂದ ಕೊಲೆ ಯತ್ನವಾಗಿದೆ.ಸ್ವಿಫ್ಟ್ ಕಾರಿನಲ್ಲಿ ಬಂದು ತಲ್ವಾರ್ ಅಟ್ಯಾಕ್ ನಡೆಸಿದ ದುಷ್ಕರ್ಮಿಗಳು.ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿಭಾಗಿಯಾಗಿದ್ದ ಶಾಕೀಬ್.ಅನೈತಿಕ ಸಂಬಂಧ ವಿಚಾರವಾಗಿ ಕೊಲೆ ಯತ್ನ ಮಾಡಿರೋ ಶಂಕೆ.
ಇದು ಪೊಲೀಸರು ಹೇಳುತ್ತಿರೋ ವಿಚಾರ. ಆದ್ರೆ ಇನ್ನು ಕೆಲ ಮೂಲದ ಪ್ರಕಾರ ಅವರ ತಂಡವನ್ನೆ ಬಳಸಿ ದೀಪಕ್ ರಾವ್ ಕೊಲೆಗೆ ಪ್ರತಿಕಾರ ತೆಗೆದುಕೊಂಡಿರಹುದು ಅನ್ನೊ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕೂಡ ಸುಮ್ಮನೆ ಕೂರದೆ ಸೈಲೆಂಟಾಗೆ ತನಿಖೆ ಆರಂಭಿಸಿದೆ. ಇನ್ನು ಅಟ್ಯಾಕ್ ಮಾಡಿದವರು ಎಸ್ಕೇಪ್ ಆಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
Published by: MAshok Kumar
First published: February 12, 2021, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories