• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗ್ರಾಪಂ ಚುನಾವಣೆ ಫಲಿತಾಂಶಕ್ಕೂ ಮುನ್ನ ಮೀಸಲಾತಿ ಪ್ರಕಟಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯ

ಗ್ರಾಪಂ ಚುನಾವಣೆ ಫಲಿತಾಂಶಕ್ಕೂ ಮುನ್ನ ಮೀಸಲಾತಿ ಪ್ರಕಟಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯ

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್ .ಕೆ .ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್ .ಕೆ .ಕುಮಾರಸ್ವಾಮಿ

ಜೆಡಿಎಸ್ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವ ಪ್ರಶ್ನೆ ಇಲ್ಲ ಹಾಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಂತಹ ಸಂದರ್ಭ ಬಂದರೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಲೀನದಂತಹ ಯಾವುದೇ ತೀರ್ಮಾನ ಪಕ್ಷದ ಮುಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

  • Share this:

    ಹಾಸನ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸುವಂತೆ ಸರ್ಕಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್ .ಕೆ .ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಡಿ. 27.ರಂದು ನಡೆಯಲಿದೆ. ಚುನಾವಣಾ ಫಲಿತಾಂಶವು ಕೂಡ ಡಿ. 30ರಂದು ಹೊರಬೀಳಲಿದ್ದು, ಸರ್ಕಾರ ಅದಕ್ಕೂ ಮೊದಲೇ ಮೀಸಲಾತಿ ಪ್ರಕಟಿಸುವಂತೆ ಆಗ್ರಹಿಸಿದರು.


    ಮೀಸಲಾತಿ ಫಲಿತಾಂಶಕ್ಕೂ ಮುನ್ನ ಪ್ರಕಟಿಸದಿದ್ದರೆ ಬಿಜೆಪಿ ಪಕ್ಷದವರು ಗೆದ್ದಿರುವ ಪಂಚಾಯತಿಗೆ ಬೇಕಾದ ಮೀಸಲಾತಿ ನಿಗದಿ ಮಾಡುತ್ತಾರೆ. ಆದ್ದರಿಂದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.


    ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅನ್ಯಾಯವಾಗಿದ್ದು, ಮತ್ತೆ ಆ ಸ್ಥಿತಿ ಪುನರಾವರ್ತನೆ ಆಗಬಾರದು. ನ್ಯಾಯಯುತವಾಗಿ ಪಂಚಾಯಿತಿಗಳಿಗೆ ನಿಗದಿಯಂತೆ ಮೀಸಲಾತಿ ಪ್ರಕಟಿಸುವುದು ಒಳ್ಳೆಯದು ಎಂದರು.


    ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿದ್ದು ಶೇಕಡಾ 80ರಷ್ಟು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್-ಬಿಜೆಪಿ ಒಪ್ಪಂದ ಮಾಡಿಕೊಂಡು ಜೆಡಿಎಸ್ ಸೋಲಿಸಲು ಪ್ರಯತ್ನ ನಡೆಸಿದೆ ಎಂದು ದೂರಿದ ಅವರು ಎರಡು ಪಕ್ಷಗಳಿಗೂ ಸೈದ್ಧಾಂತಿಕ ನೆಲೆಗಟ್ಟಿಲ್ಲ ಎಂದು ಆರೋಪಿಸಿದರು.


    ರಾತ್ರಿ ಕರ್ಫ್ಯೂ ಹೇರುವ ಸಂಬಂಧ ಸರ್ಕಾರ ಒಂದೇ ದಿನದಲ್ಲಿ 3 ತೀರ್ಮಾನ ಮಾಡುತ್ತದೆ. ಈ ಮೂಲಕ ಜನರೊಂದಿಗೆ ಸರ್ಕಾರ ಹುಡುಗಾಟ ಆಡುತ್ತಿದೆ. ಯಾವುದೇ ಒಂದು ಘೋಷಣೆಗೂ ಮುನ್ನ ಜನಪ್ರತಿನಿಧಿಗಳು ಪಕ್ಷದ ಮುಖಂಡರನ್ನು ಹಾಗೂ ಅಧಿಕಾರಿಗಳನ್ನು ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ಗೊಂದಲದ ಆಡಳಿತ ನೀಡಿದಂತಾಗುತ್ತದೆ ಎಂದು ಟೀಕಿಸಿದರು.


    ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರು ಇರುವೆಡೆ ಸರ್ಕಾರ ಅನುದಾನವನ್ನು ಕಡಿತಗೊಳಿಸಿದೆ. ಅಲ್ಲದೆ ಹಳೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಆದರೆ ಹಾಸನ ಬಿಜೆಪಿ ಶಾಸಕರಿಗೆ 350ಕೋಟಿ ಅನುದಾನ ನೀಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದರು.


    ಪಕ್ಷ ಬಿಟ್ಟು ಹೋಗುವವರು ಹೋಗಲಿ


    ಜೆಡಿಎಸ್ ಪಕ್ಷ ತೊರೆದು ಹೋಗುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ. ಅದನ್ನು ಬಿಟ್ಟು ವಿರೋಧ ಪಕ್ಷದ ನಾಯಕರಂತೆ ಮಾತನಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.


    ಶಾಸಕರಾದ ಜಿ ಟಿ ದೇವೇಗೌಡ -ಗುಬ್ಬಿ ಶ್ರೀನಿವಾಸ್ ಪಕ್ಷ ಬಿಡುವುದಾಗಿ ಹೇಳುತ್ತಾರೆ. ಇವರು ರಾಜಿನಾಮೆ ನೀಡಿ ಪಕ್ಷ ತೊರೆಯಲಿ ಎಂದು ಸವಾಲು ಹಾಕಿದರು. ಯಾರೇ ಪಕ್ಷವನ್ನು ಬಿಟ್ಟು ಹೋದರು ಜೆಡಿಎಸ್ ಪಕ್ಷ ಇರುತ್ತದೆ. ಶಾಸಕರಾಗಿ ಇದ್ದುಕೊಂಡು ವಿಪಕ್ಷದ ಕೆಲಸ ಮಾಡುವುದು ಸರಿಯಲ್ಲ ಎಂದರು.


    ಇದನ್ನು ಓದಿ: ದರ ಏರಿಕೆಯ ಬರೆ ಎಳೆದ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ; ವಿವಿಧ ಸೇವಾ ಶುಲ್ಕ ಹೆಚ್ಚಳ


    ಜೆಡಿಎಸ್ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವ ಪ್ರಶ್ನೆ ಇಲ್ಲ ಹಾಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಂತಹ ಸಂದರ್ಭ ಬಂದರೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಲೀನದಂತಹ ಯಾವುದೇ ತೀರ್ಮಾನ ಪಕ್ಷದ ಮುಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.


    ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಆನೆ ಸಮಸ್ಯೆ ವಿಪರೀತವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಸಕಲೇಶಪುರ ಆಲೂರು ಭಾಗದ ಆನೆ ಪೀಡಿತ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

    Published by:HR Ramesh
    First published: