ಧಾರವಾಡ: ರೈತ ಸೇನಾ ಕರ್ನಾಟಕ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ವಾರಗಳ ಕಾಲ ನಡೆದ ಅಹೋರಾತ್ರಿ ನಿರಂತರ ಧರಣಿಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಧಾರವಾಡದಲ್ಲಿ ಮುಂದುವರೆಕೆಗೆ ಸರ್ಕಾರ ಆದೇಶ ಮಾಡಿದೆ.
ಕರ್ನಾಟಕ ನೀರಾವರಿ ನಿಗಮ ಕಚೇರಿ ಕೆಲವು ಹಿರಿಯ ಅಧಿಕಾರಿಗಳು ನಿಗಮದ ಹಣ ದುರ್ಬಳಿಸಿಕೊಂಡಿದ್ದಲ್ಲದೇ, ತಮ್ಮ ಸ್ವಾರ್ಥಕ್ಕೆ ಕಚೇರಿ ಬೆಂಗಳೂರು ಅಥವಾ ಬೆಳಗಾವಿ ಜಿಲ್ಲೆಗೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದು ತಿಳಿದು ರೈತ ಸೇನಾ ಹೋರಾಟ ಆರಂಭಿಸಿತ್ತು. ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ನಡೆದ ನಿರಂತರ ಧರಣಿಗೆ ಹೈಕೋರ್ಟ್ ಪೀಠದ ಹೋರಾಟಗಾರ ಮತ್ತು ಹಿರಿಯ ವಕೀಲ ಬಿ.ಡಿ. ಹಿರೇಮಠ, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ-ಸoಸ್ಥೆಗಳು ಬೆಂಬಲ ಸೂಚಿಸಿದ್ದವು. ಆದಾಗ್ಯೂ ಸ್ಪಂದಿಸಿದ ಹಿನ್ನೆಲೆ ಕೊನೆಗೆ ಕಚೇರಿ ಸ್ಥಳಾಂತರ ಮಾಡದಂತೆ ನ್ಯಾಯಾಲಯದ ಮೊರೆ ಕೂಡ ಹೋದರು. ಅಲ್ಲದೆ, ಕಚೇರಿ ಬೆಳಗಾವಿಗೆ ಸ್ಥಳಾಂತರಿಸದಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಗೂ ರೈತ ಸೇನಾ ಮನವಿ ಮಾಡಿತ್ತು.
ರೈತರ ಹೋರಾಟ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಮನವಿಗೆ ಸ್ಪಂದಿಸಿ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಬದಲಿಗೆ ಧಾರವಾಡದಲ್ಲೇ ಮುಂದವರಿಕೆಗೆ ಮರು ಆದೇಶ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದ ಐಐಎಸ್ಸಿಯಿಂದ ಹೊಸ ಶೈಲಿ ಇಟ್ಟಿಗೆ; ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
ರೈತ ಹೋರಾಟಕ್ಕೆ ಮಣಿದು ಸರ್ಕಾರ ಕರ್ನಾಟಕ ನೀರಾವರಿ ನಿಗಮದ ಕಚೇರಿ ಧಾರವಾಡದಲ್ಲಿ ಮುಂದುವರಿಸಲು ಆದೇಶ ಸ್ವಾಗತಾರ್ಹ. ಇದು ರೈತ ಸೇನಾ ಹೋರಾಟಕ್ಕೆ ಸಂದ ಜಯ. ಕಚೇರಿ ಉಳಿಸಿದ ಸರ್ಕಾರಕ್ಕೆ, ರೈತ ಸೇನಾ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಂಘಟನೆಗಳಿಗೆ, ಮಾಧ್ಯಮಗಳಿಗೆ ಕೃತಜ್ಞತೆಗಳು. ಅಧಿಕಾರ ವಿಕೇಂದ್ರಕರಣದ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ 9 ಕಚೇರಿ ಸ್ಥಳಾಂತರ ವಿಚಾರದ ಬಗ್ಗೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ರೈತ ಹೋರಾಟಗಾರ ವೀರೇಶ ಸೊಬರದಮಠ ಹೇಳಿದ್ದಾರೆ.
ವರದಿ: ಮಂಜುನಾಥ ಯಡಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ