Tungabhadra: ಜುಲೈ 18 ರಿಂದ ತುಂಗಾಭದ್ರಾ ನಾಲೆಗೆ ನೀರು ಬಿಡಲು ನಿರ್ಧಾರ; ರೈತರ ಮೊಗದಲ್ಲಿ ಸಂತಸ

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪಬೇಕು. ಇದೇ ವೇಳೆ ಜಲಾಶಯಕ್ಕೆ 40 ಟಿಎಂಸಿ ನೀರು ಬಂದಾಗ ಮಾತ್ರ ನಾಲೆಗೆ ನೀರು ಬಿಡಲು ರೈತರು ಆಗ್ರಹಿಸಿದರು.

ತುಂಗಭದ್ರಾ ಡ್ಯಾಂ

ತುಂಗಭದ್ರಾ ಡ್ಯಾಂ

  • Share this:
ಕೊಪ್ಪಳ(ಜು.13): ತುಂಗಭದ್ರಾ ನಾಲೆಗೆ ಜು.18ರಿಂದ ನವೆಂಬರ್​ 30ರವರೆಗೂ  ನೀರು ಬಿಡಲು ತೀರ್ಮಾನ ಮಾಡಲಾಗಿದೆ.  ಎಡದಂಡೆ ನಾಲೆಗೆ 4100 ಕ್ಯೂಸೆಕ್ಸ್​ ನೀರು ಬಿಡಲು ತೀರ್ಮಾನಿಸಲಾಗಿದೆ. ತುಂಗಭದ್ರಾ ಎಲ್ಲಾ ಕಾಲುವೆಗಳಿಗೂ ಜು. 18ರಿಂದ ನೀರು ಬಿಡಲು ತೀರ್ಮಾನಿಸಲಾಗಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1130 ಕ್ಯೂಸೆಕ್ಸ್​, ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯೂಸೆಕ್ಸ್​, ರಾಯ ಮತ್ತು ಬಸವ ಕಾಲುವೆಗೆ  235 ಕ್ಯೂಸೆಕ್ಸ್​​ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್ಸ್​ ನೀರು ಬಿಡಲು ಸಭೆಯ ನಂತರ ಅಧ್ಯಕ್ಷತೆ ವಹಿಸಿದ್ದ ಸಚಿವ ಆನಂದಸಿಂಗ್ ಹೇಳಿದರು. 

ಮುನಿರಾಬಾದಿನಲ್ಲಿ ತುಂಗಭದ್ರಾ 115ನೆಯ ನೀರು ನಿರ್ವಹಣಾ ಸಲಹಾ ಸಮಿತಿಯ ಸಭೆಯು ಸಚಿವ ಆನಂದಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ, ಈ ಕಾರಣಕ್ಕಾಗಿ ಇಂದು ತುಂಗಭದ್ರಾ ಜಲಾಶಯ ವ್ಯಾಪ್ತಿಯ ಶಾಸಕರು , ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದಾರೆ. ಎಡದಂಡೆ ನಾಲೆಯ ಮೇಲ್ಭಾಗದಲ್ಲಿ ಅನಧಿಕೃತ ನೀರು ಪಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ತೀರ್ಮಾನಿಸಲಾಗಿದೆ ಎಂದು ಸಚಿವ ಆನಂದ್​ ಸಿಂಗ್ ತಿಳಿಸಿದರು.

ಅನಧಿಕೃತವಾಗಿ ನೀರು ಬಳಕೆ ತಡೆಗೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಠಿಣ ಕ್ರಮ ಕೈಗೊಳ್ಳಬೇಕು, ಇದೇ ವೇಳೆ ಕಾರ್ಖಾನೆಗಳಿಂದ ಹೆಚ್ಚು ನೀರು ಪಡೆಯುತ್ತಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಇದೇ ವೇಳೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪಬೇಕು. ಇದೇ ವೇಳೆ ಜಲಾಶಯಕ್ಕೆ 40 ಟಿಎಂಸಿ ನೀರು ಬಂದಾಗ ಮಾತ್ರ ನಾಲೆಗೆ ನೀರು ಬಿಡಲು ರೈತರು ಆಗ್ರಹಿಸಿದರು.

ಈಗ ಜಲಾಶಯದಲ್ಲಿ 36 ಟಿಎಂಸಿ ನೀರಿದೆ. ಎಡದಂಡೆ ನಾಲೆಯ ಕೊನೆಯ ಭಾಗದ ರೈತರ ಭೂಮಿಗೆ ತಲುಪುತ್ತಿಲ್ಲ. ನಾಲೆಯ ಮೇಲ್ಭಾಗದಲ್ಲಿ ಅನಧಿಕೃತ ನೀರಾವರಿಯಾಗುತ್ತಿದೆ. ಅನಧಿಕೃತ ನೀರಾವರಿ ತಡೆಯಲು ಕೊಪ್ಪಳ ರಾಯಚೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದರು.

ಈ ಭಾಗದಲ್ಲಿ ಸುಮಾರು 1 ಲಕ್ಷ ಎಕರೆ ಪ್ರದೇಶದಲ್ಲಿ ಅಕ್ರಮ ನೀರಾವರಿ ಇದೆ. ಸಿಎಂ ಯಡಿಯೂರಪ್ಪ ಅಕ್ರಮ ನೀರಾವರಿ ತಡೆಯಲು ಸೂಚಿಸಿದರೂ ಅಕ್ರಮ ನೀರಾವರಿ ತಡೆದಿಲ್ಲ. ಹೆಸರಿಗೆ ಮಾತ್ರ ನೀರಾವರಿ ಪ್ರದೇಶವಾಗಿರುವ ಸಿರವಾರ, ರಾಯಚೂರು ಹಾಗೂ ಮಾನವಿ ತಾಲೂಕಿನ ಪ್ರದೇಶಕ್ಕೆ ನೀರು ತಲುಪುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ ಆಗ್ರಹಿಸಿದ್ದಾರೆ. ಮುನಿರಾಬಾದಿನಲ್ಲಿ ನಡೆಯುತ್ತಿರುವ ತುಂಗಭದ್ರಾ ಐಸಿಸಿ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಇದೇ ವೇಳೆ ತುಂಗಭದ್ರಾ ಬಲದಂಡೆಯ  ಮೇಲ್ಭಾಗ ಕಾಲುವೆಯ ವ್ಯಾಪ್ತಿಯಲ್ಲಿ ಆಂಧ್ರ ಸರಕಾರ ವೇದಾವತಿ ಆಣೆಕಟ್ಟೆ ಕಾಮಗಾರಿ ನಡೆಸುತ್ತಿದೆ. ವೇದಾವತಿ ಜಲಾಶಯದ ನಂತರ ಸಿರಗುಪ್ಪಾ ತಾಲೂಕಿನ ರೈತರ ಭೂಮಿ ಇದೆ. ಅಲ್ಲಿಗೆ ನಾಲೆ ನೀರು ತಲುಪಲು ಆಗುವುದಿಲ್ಲ. ಈ ಕಾರಣಕ್ಕೆ ವೇದಾವತಿ ಕಾಮಗಾರಿ ನಿಲ್ಲಿಸಿ ಎಂದು ಬಳ್ಳಾರಿ ರೈತರು ಆಗ್ರಹಿಸಿದರು.

ಇದನ್ನೂ ಓದಿ: ಸನ್ನಿ ಸಾವಿಗೆ ಕಣ್ಣೀರಾಕಿದ ಗೃಹ ಸಚಿವ ಬೊಮ್ಮಾಯಿ; ಜೀವದ ಗೆಳೆಯನಿಗೆ ಅಂತಿಮ ವಿದಾಯ !

ವಿಜಯನಗರ ಕಾಲುವೆ ನೀರು ಹಂಚಿಕೆ ಬದಲಾವಣೆ, ವಿಜನಗರ ಕಾಲುವೆಗ ಮೀಸಲಾದ 6.58 ಟಿಎಂಸಿ ಭದ್ರಾ ಮೇಲ್ದಂಡೆ ಯೋಜನೆಗೆ ಹಂಚಿಕೆಯಾಗಿತ್ತು ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲದಲ್ಲಿನ ಕಾಲುವೆಗಳು, ಒಟ್ಟು 12.43 ಟಿಎಂಸಿ ನೀರು ಹಂಚಿಕೆಯಾಗಿತ್ತು. ಈಗ ವಿಜಯನಗರ ಕಾಲುವೆಗಳನ್ನು ಎಡಿಬಿಯಿಂದ ಆಧುನೀಕರಣ ಮಾಡಲಾಗಿದೆ. 163 ಕೋಟಿ ರೂಪಾಯಿಯಲ್ಲಿ ಆಧುನೀಕರಣ ಆಗುತ್ತಿದೆ. ಆಧುನೀಕರಣದಿಂದ ಹೆಚ್ಚುವರಿಯಾಗಿ 6.58 ಟಿಎಂಸಿ  ನೀರು ಉಳಿದಿದೆ. ಈ ನೀರನ್ನು ತುಂಗಭದ್ರಾ ಜಲಾಶಯದ ಕೆಳಭಾಗದವರೆ ಬಳಸಲು ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿಯಿಂದ ಆಗ್ರಹಿಸಿದ್ದಾರೆ.

ಇದೇ ವೇಳೆ ತುಂಗಭದ್ರಾ ಕಾಡಾ ಅಧಿಕಾರಿ ವಿರುದ್ದವೂ ಆಕ್ರೋಶ, ಆಡಳಿತಾಧಿಕಾರಿಯನ್ನು ವರ್ಗಾಯಿಸಲು ಒತ್ತಾಯ, ಮುನಿರಾಬಾದ್ ತುಂಗಭದ್ರಾ ಕಾಡಾ ಕಚೇರಿಯ ಮುಂದೆ ಪ್ರತಿಭಟನೆ, ಕಾಡಾ ಆಡಳಿತಾಧಿಕಾರಿ ಬಿ ಆರ್ ಅನಿಲಕುಮಾರ ವಿರುದ್ದ ಆಕ್ರೋಶ, ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯಿಂದ ಹೋರಾಟ ನಡೆಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ‌ ಕುರಿತು ರೈತರು ಭೇಟಿಗೂ ಅವಕಾಶ ನೀಡುತ್ತಿಲ್ಲ. ಮುನಿರಾಬಾದ್ ನಲ್ಲಿ ತುಂಗಭದ್ರಾ ಐಸಿಸಿ ಸಭೆಯ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
Published by:Latha CG
First published: