ಹಾಸನದಲ್ಲಿ ಕೊರೋನಾ ಕರ್ತವ್ಯನಿರತ ವೈದ್ಯ ಸಾವು ; ಕೆಲಸದ ಒತ್ತಡದಿಂದ ಸಾವು ಶಂಕೆ

ಕೊರೋನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂದು ಮೃತ ವೈದ್ಯರ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ

ಮೃತ ವೈದ್ಯ ಡಾ. ಶಿವಕಿರಣ್

ಮೃತ ವೈದ್ಯ ಡಾ. ಶಿವಕಿರಣ್

  • Share this:
ಹಾಸನ(ಜೂ.10): ಕೊರೋನಾ  ವಿರುದ್ಧ ಧಣಿವರಿಯದೆ ಕೆಲಸ ಮಾಡಿದ್ದ ವೈದ್ಯರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ಮೃತರನ್ನು ಡಾ. ಶಿವಕಿರಣ್​ ಎಂದು ಗುರುತಿಸಲಾಗಿದೆ. 

ಮೃತ ಶಿವಕಿರಣ್ ಅವರು ಹಾಸನ ಜಿಲ್ಲೆಯ ಆಲೂರು ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊರೋನಾ ಸಮಯದಲ್ಲಿ ರಜೆಯಿಲ್ಲದೆ ನಿರಂತರವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಎಸ್ಕಾರ್ಟ್ ವಾಹನಕ್ಕಾಗಿ ಕೊಲೆ ಬೆದರಿಕೆ ತಂತ್ರ ; ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಟೀಲ್ ಲೇವಡಿ

ಕೆಲಸದ ಸಮಯದಲ್ಲೇ ತಲೆನೋವಿನಿಂದ ಬಳಲಿ. ಸ್ಟ್ರೋಕ್‌ನಿಂದಾಗಿ ತಲೆ ಸುತ್ತಿ  ಬಿದ್ದಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 5 ದಿನಗಳಿಂದ ವೆಂಟಿಲೇಷನ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ,ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಡಾ. ಶಿವಕಿರಣ್​​  ಅವರು ಸಾವನ್ನಪ್ಪಿದ್ದಾರೆ.

ಕೊರೋನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂದು ಮೃತ ವೈದ್ಯರ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಸದ್ಯಕ್ಕೆ ವೈದ್ಯರಲ್ಲಿ ಯಾವುದೇ ಕೊರೋನಾ ಲಕ್ಷಣ ಕಂಡು ಬಂದಿಲ್ಲ.
First published: