ಸೋಂಕಿನ ಮುಂದೆ ಚೇತರಿಕೆ ಕ್ಷೀಣ; ಕೊರೋನಾಗೆ ಅಕ್ಷರಶಃ ಕನಲಿರುವ ಬೆಂಗಳೂರು
ಬಿಬಿಎಂಪಿ ಎಂತಹದ್ದೇ ಕ್ರಮ ಕೈಗೊಂಡರೂ ಪರಿಸ್ಥಿತಿ ತಹಬದಿಗೆ ಬರುತ್ತಿಲ್ಲ. ಕೊರೋನಾ ಜತೆಗೆ ಬದುಕುವುದನ್ನು ಕಲಿಯದೆ ವಿಧಿಯಿಲ್ಲ ಎನ್ನುವ ಆರೋಗ್ಯ ಸಚಿವರ ಮಾತು ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ.
news18-kannada Updated:June 19, 2020, 2:54 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: June 19, 2020, 2:54 PM IST
ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಹೈ ರಿಸ್ಕ್ ಏರಿಯಾ ಆಗುತ್ತಿದೆ. ಸೋಂಕಿನ ಪ್ರಕರಣಗಳಿಗಿಂತ ಸಾವಿನ ಪ್ರಕರಣಗಳ ಬಗ್ಗೆ ಆತಂಕ ಪಡುವಂತಾಗಿದೆ. ಕಳೆದೊಂದು ವಾರದಲ್ಲಿ ಹತ್ತಿರತ್ತಿರ 25ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ಕೊರೋನಾ ಕಾರಣಕ್ಕೆ ಸಂಭವಿಸಿರುವುದರಿಂದ ಬೆಂಗಳೂರಿಗರು ಜೀವಭಯದಿಂದ ಬಳಲುವಂತಾಗಿದೆ.
ಕೊರೋನಾ ಮಹಾಮಾರಿ ವಿಷಯದಲ್ಲಿ ರಾಜಧಾನಿ ಬೆಂಗಳೂರಿನ ನಾಗಾಲೋಟ ನೋಡಿದರೆ ಮಹಾರಾಷ್ಟ್ರ, ದೆಹಲಿಯನ್ನು ಓವರ್ ಟೇಕ್ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಕಳೆದೊಂದು ವಾರದಿಂದ ಹತ್ತಿರತ್ತಿರ 25ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಅಕ್ಷರಶಃ ಬೆಚ್ಚಿಬಿದ್ದಿರುವ ಬೆಂಗಳೂರಿಗರು ಪರಿಸ್ಥಿತಿ ಹೀಗೆಯೇ ಆದರೆ ಮುಂದೇನಪ್ಪ ಎಂದು ಚಿಂತೆಗೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಸಹನೀಯವಾಗಿರುವ ಮಟ್ಟಿಗೆ ಬೆಂಗಳೂರಿನ ಪರಿಸ್ಥಿತಿ ಅಷ್ಟೇನೂ ಆತಂಕ ಇರಲಿಲ್ಲ. ಆದರೆ ಕಳೆದೊಂದು ವಾರದಿಂದ ಸೋಂಕಿನ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿರುವುದಕ್ಕೆ ಸ್ವತಃ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗಳೇ ಆತಂಕಕ್ಕೆ ಸಿಲುಕುವಂತೆ ಮಾಡಿದೆ. ಪರಿಸ್ಥಿತಿ ತಹಬದಿಗೆ ಟಾಸ್ಕ್ ಪೋರ್ಸ್ನ ಸಲಹೆ ಪಡೆಯಲು ಮುಂದಾಗಿವೆ. ಆದರೆ ಪರಿಸ್ಥಿತಿ ನವೆಂಬರ್ ಅವಧಿವರೆಗೂ ತಾರಕಕ್ಕೇರುತ್ತದೆ ಎನ್ನುವ ಆತಂಕಕಾರಿ ಮುನ್ಸೂಚನೆ ನಂತರವಂತೂ ಕೈ ಚೆಲ್ಲುವಷ್ಟು ಅಸಹಾಯಕಗೊಂಡಿವೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಚಿತ್ರಣ ನೋಡುವುದಾದರೆ ಆಕ್ಟೀವ್ ಪ್ರಕರಣಗಳು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಗುಣಮುಖರಾಗುವ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿರುವುದೇ ಇದು. ವಲಯವಾರು ಪ್ರಕರಣಗಳ ಸಂಖ್ಯೆ ನೋಡುವುದಾದರೆ ದಕ್ಷಿಣ ವಲಯದಲ್ಲಿ 63 ಆಕ್ಟೀವ್ ಪ್ರಕರಣಗಳಿದ್ದರೆ ಗುಣಮುಖ ಆಗಿರುವುದು ಕೇವಲ 3 ಮಂದಿ ಮಾತ್ರ. ಪಶ್ಚಿಮ ವಲಯದಲ್ಲಿ 39 ಆಕ್ಟೀವ್ ಪ್ರಕರಣಗಳಿದ್ದರೆ 4 ಜನ ಮಾತ್ರ ಗುಣಮುಖರಾಗಿದ್ದಾರೆ. ಆರ್ ಆರ್ ನಗರ ವಲಯದಲ್ಲಿ 8 ಆಕ್ಟೀವ್ ಪ್ರಕರಣಗಳಿದ್ದರೆ 4 ಮಂದಿ ಮಾತ್ರ ರಿಕವರಿ ಆಗಿದ್ದಾರೆ. ಮಹಾದೇವಪುರದಲ್ಲಿ 26 ಆಕ್ಟೀವ್ ಪ್ರಕರಣಗಳಿದ್ದರೆ ರಿಕವರಿ ಆಗಿರೋದು ಕೇವಲ 3 ಜನ. ಇನ್ನು ಪೂರ್ವ ವಲಯದಲ್ಲಿ 26 ಆಕ್ಟೀವ್ ಪ್ರಕರಣಗಳಿದ್ದರೆ ಮೂವರು ಮಾತ್ರ ರಿಕವರಿಯಾಗಿದ್ದಾರೆ. ದಾಸರಹಳ್ಳಿಯಲ್ಲಿ 7 ಆಕ್ಟೀವ್ ಪ್ರಕರಣಗಳಿದ್ದರೆ ಯಾರೊಬ್ಬರು ಗುಣಮುಖರಾಗಿಲ್ಲ. ಬೊಮ್ಮನಹಳ್ಳಿಯಲ್ಲಿ 32 ಆಕ್ಟೀವ್ ಪ್ರಕರಣಗಳಿದ್ದರೆ 5 ರಿಕವರಿ ಪ್ರಕರಣಗಳಿವೆ. ಹಾಗೆಯೇ ಯಲಹಂಕ ವಲಯದಲ್ಲಿ 11 ಆಕ್ಟೀವ್ ಪ್ರಕರಣಗಳಿದ್ದರೆ ರಿಕವರಿ ಆದವರು ಕೇವಲ ಒಬ್ಬರು.
ಇದನ್ನು ಓದಿ: Coronavirus India Updates: ದೇಶದಲ್ಲಿ ದಿನೇದಿನೇ ದುಪ್ಪಟ್ಟಾಗುತ್ತಿರುವ ಕೊರೋನಾ: ಒಂದೇ ದಿನ 13,586 ಹೊಸ ಕೇಸ್ ಪತ್ತೆ
ಕೊರೋನಾ ಸೋಂಕಿನ ಜೊತೆಗೇನೆ ಸಾವಿನ ಪ್ರಕರಣಗಳು ಹಾಗೂ ಕಂಟೈನ್ಮೆಂಟ್ ವಲಯಗಳೂ ಹೆಚ್ಚಾಗುತ್ತಿವೆ. ಬಿಬಿಎಂಪಿ ಏನೇ ಮಾಡಿದರೂ ಸೀಲ್ ಡೌನ್ ಆಗುತ್ತಿರುವ ಪ್ರದೇಶಗಳ ಸಂಖ್ಯೆಗೂ ಕಡಿವಾಣ ಸಾಧ್ಯವಾಗುತ್ತಿಲ್ಲ. ಬಿಬಿಎಂಪಿ ಎಂತಹದ್ದೇ ಕ್ರಮ ಕೈಗೊಂಡರೂ ಪರಿಸ್ಥಿತಿ ತಹಬದಿಗೆ ಬರುತ್ತಿಲ್ಲ. ಕೊರೋನಾ ಜತೆಗೆ ಬದುಕುವುದನ್ನು ಕಲಿಯದೆ ವಿಧಿಯಿಲ್ಲ ಎನ್ನುವ ಆರೋಗ್ಯ ಸಚಿವರ ಮಾತು ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ.
ಕೊರೋನಾ ಮಹಾಮಾರಿ ವಿಷಯದಲ್ಲಿ ರಾಜಧಾನಿ ಬೆಂಗಳೂರಿನ ನಾಗಾಲೋಟ ನೋಡಿದರೆ ಮಹಾರಾಷ್ಟ್ರ, ದೆಹಲಿಯನ್ನು ಓವರ್ ಟೇಕ್ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಕಳೆದೊಂದು ವಾರದಿಂದ ಹತ್ತಿರತ್ತಿರ 25ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಅಕ್ಷರಶಃ ಬೆಚ್ಚಿಬಿದ್ದಿರುವ ಬೆಂಗಳೂರಿಗರು ಪರಿಸ್ಥಿತಿ ಹೀಗೆಯೇ ಆದರೆ ಮುಂದೇನಪ್ಪ ಎಂದು ಚಿಂತೆಗೆ ಸಿಲುಕಿದ್ದಾರೆ.