Rape- ಚಿತ್ರದುರ್ಗದಲ್ಲಿ ಮೂಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಬಂಧನ; ಗಲ್ಲು ಶಿಕ್ಷೆಗೆ ಗ್ರಾಮಸ್ಥರ ಒತ್ತಾಯ

Disabled Lady Raped in Chitradurga: ಬಸ್ಸಿಳಿದು ಊರಿನ ದಾರಿಯಲ್ಲಿ ನಡೆದು ಹೋಗುತ್ತಿದ್ದ ಮೂಕ ಮಹಿಳೆಯ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ: ಶಾಂತಿ ಸಹನೆ ಹೆಸರಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಅದ್ಯಾಕೋ ಅಪರಾಧ ಪ್ರಕರಣಗಳ (Crime cases on rise in Chitradurga) ಹೆಚ್ಚಿದಂತೆ ಕಾಣುತ್ತಿದೆ. ಕಳೆದ ಒಂದೂವರೆ ವರ್ಷ ಗಳ ಕಾಲ ಕೊರೋನಾ ಕಾಲದ ಲಾಕ್​ಡೌನ್ ಸಮಯದಲ್ಲಿ ಅಪರಾಧಗಳು ಹಾಗೂ ಕಿಡಿಗೇಡಿತನದ ಕೃತ್ಯಗಳು ಕೊಂಚ ಕಡಿಮೆ ಆಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಸರ್ಕಾರ ಲಾಕ್ ಡೌನ್ ನಿಯಮ ಸಡಿಲಿಕೆ ನೀಡಿ ಸಾರ್ವಜನಿಕರ ಓಡಾಟ, ವ್ಯಾಪಾರ ವಹಿವಾಟು, ಕೆಲಸ ನಿರ್ವಹಿಸಲು ಅನುವು ನೀಡಿದ ಬಳಿಕ ಕೊಲೆ, ಅತ್ಯಾಚಾರ, ಸರಗಳ್ಳತನ, ಮನೆ ಕಳ್ಳತನ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದಿರೋ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ಚಿತ್ರದುರ್ಗ ಜಿಲ್ಲೆಯ ಜನರನ್ನ ಬಿಚ್ಚಿ ಬೀಳುವಂತೆ ಮಾಡಿವೆ. ಇದರ ಹಿನ್ನೆಲೆಯಲ್ಲಿ ಜಿಲ್ಲಾ ಪೋಲೀಸರು ಕ್ರೈಂ ಸಂಖ್ಯೆ ತಗ್ಗಿಸಲು ಹಗಲು ರಾತ್ರಿ ಎನ್ನದೆ ಹದ್ದಿನ ಕಣ್ಣಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಅದೆಲ್ಲಿಯಾದ್ರು ಇಂತಹ ಕ್ರೈಮ್ ಪ್ರಕರಣಗಳು ನಡೆದುಬಿಟ್ಟಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತುಪ್ಪದಹಳ್ಳಿ (Tuppadahalli in Holalkere Taluk) ಸಮೀಪ ನಡೆದಿರೋ‌ ಅತ್ಯಾಚಾರ ಪ್ರಕರಣ.

ಶುಕ್ರವಾರ ರಾತ್ರಿ ತುಪ್ಪದ ಹಳ್ಳಿ  ಲಂವಾಹಣಟ್ಟಿ ನಿವಾಸಿ ಮೂವತ್ತೈದು ವರ್ಷದ ವಿಶೇಷ ಚೇತನ ಮೂಕ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಮಾತು ಬಾರದ ಈ ಮೂಕ ಹೆಂಗಸು ದಾವಣಗೆರೆಗೆ ಹೋಗಿ ರಾತ್ರಿ 9:30 ರ ಸುಮಾರಿಗೆ ಬಸ್ಸಿನಲ್ಲಿ ಬಂದು ತುಪ್ಪದಹಳ್ಳಿ ಗ್ರಾಮದಲ್ಲಿ ಇಳಿದಿದ್ದಾರೆ. ಅಲ್ಲಿಂದ ಸ್ವಲ್ಪವೇ ದೂರು ನಡದು ಹೋಗುತ್ತಿದ್ದಂತೆ ಅದೇ ಬಸ್ಸಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆಕೆಯನ್ನ ಹಿಡಿದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಬಳಿಕ ಮಹಿಳೆಯ ಸಂಬಂಧಿಕರು, ಪೋಲೀಸರಿಗೆ ಮಾಹಿತಿ‌ ನೀಡಿ ಮಹಿಳೆಯನ್ನ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: Hassan Crime: ಮಗಳನ್ನು ಚುಡಾಯಿಸಬೇಡಿ ಎಂದು ಬುದ್ದಿ ಹೇಳಿದ ತಂದೆ ಮೇಲೆ ಹಲ್ಲೆ

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಚಿತ್ರದುರ್ಗ ಎಸ್​ಪಿ ರಾಧಿಕಾ ಅವರು ಪೋಲೀಸರ ತಂಡಗಳನ್ನ ರಚಿಸಿ ಪ್ರಕರಣ ಭೇದಿಸಿ ಆರೋಪಿ ಸೆರೆ ಹಿಡಿಯೋಕೆ ಸೂಚಿಸಿದ್ದರು. ಅದರಂತೆ ಪ್ರಕರಣ ಬೆನ್ನು ಹತ್ತಿದ ಪೋಲೀಸರು ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀ ಸಾಗರ ಮೂಲದ ನಾಗರಾಜ್ (Accused Nagaraj of Lakshmi Sagar in Chitradurga) ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ಬಳಿಕ ಪ್ರಕರಣ ನಡೆದ ಕುರಿತು ತಪ್ಪದಹಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಆಳವಡಿಸಿದ್ದ ಸಿಸಿ ಕ್ಯಾಮಾರ ಪರಿಶೀಲನೆ ಮಾಡಿದಾಗ ಅತ್ಯಾಚಾರ ಮಾಡುವ ಮುನ್ನ ಮಹಿಳೆ ನಡೆದು ಹೋಗಿದ್ದು, ಮಹಿಳೆಗೂ ಮುನ್ನ ಅತ್ಯಾಚಾರ ಆರೋಪಿ ಅದೇ ಮಾರ್ಗದಲ್ಲಿ‌ ಚಲಿಸಿದ್ದು ಸೇರಿ ಆರೋಪಿಯ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಗೆ ಸಿಕ್ತು ಸಾವಿಗೆ ಮುನ್ನ ಮಧುಸಾಗರ್​ ಬರೆದಿದ್ದ ಡೈರಿ

ಈ ಸಂಬಂಧ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರವಾಗಿ ಪೋಷಕರು, ತುಪ್ಪದಹಳ್ಳಿ ಲಂಬಾಣಿ ಹಟ್ಟಿ ಗ್ರಾಮಸ್ಥರು ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಹೊಳಲ್ಕೆರೆ ನಗರದ ಗಣೇಶ ವೃತ್ತದಲ್ಲಿ ಮಾನವ ಸರಪಳಿ‌ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಸಂತ್ರಸ್ತ ಮಹಿಳೆಗೆ ಚಿಕಿತ್ಸೆ ನಡೆಯುತ್ತಿದ್ದು, ಆರೋಪಿ ನಾಗರಾಜ್ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: