• Home
  • »
  • News
  • »
  • district
  • »
  • ಮಲ್ಲಾಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ, ಸತ್ತ ಮೀನುಗಳ ದುರ್ನಾತದಿಂದ ಕಂಗೆಟ್ಟ ಜನ

ಮಲ್ಲಾಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ, ಸತ್ತ ಮೀನುಗಳ ದುರ್ನಾತದಿಂದ ಕಂಗೆಟ್ಟ ಜನ

ಕೆರೆಯಲ್ಲಿ ಸತ್ತ ಮೀನುಗಳು

ಕೆರೆಯಲ್ಲಿ ಸತ್ತ ಮೀನುಗಳು

ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಬೃಹತ್ ಗಾತ್ರದ ಈ  ಐತಿಹಾಸಿಕ  ಕೆರೆ ಸುತ್ತಲೂ ಮೂರು ಹಳ್ಳಿಗಳನ್ನ ಆವರಿಸಿದೆ.  ಇದೇ ವರ್ಷ ಮಳೆಗೆ ಮೂರ್ನಾಕು ಬಾರಿ ಕೋಡಿ ಬಿದ್ದಿರುವ ಈ ಕೆರೆ ಇದೀಗ ಕಲುಷಿತ ನೀರಿನಿಂದ ಗಬ್ಬೆದ್ದು ನಾರುತ್ತಿದೆ. ಅಲ್ಲದೆ ಇದೇ ಕೊಳಚೆ ನೀರಿಗೆ ಕೆರೆಯಲ್ಲಿನ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಕೆರೆ ನೀರು ದುರ್ವಾಸನೆ ಹೊಡೆಯತ್ತಿವೆ. ಸತ್ತ ಮೀನುಗಳ ವಾಸನೆ ತಾಳಲಾಗದೆ ಜನರು ಕಂಗಾಲಾಗಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ : ಅದು ದುರ್ಗದ ಮಡಿಲಲ್ಲಿರುವ ಐತಿಹಾಸಿಕ ಕೆರೆ. ಕಲುಷಿತ ನೀರಿನಿಂದ ಕೆರೆ ಗಬ್ಬೆದ್ದು ನಾರುತ್ತಿದೆ. ಕೆರೆಗೆ ಬರೋ ಕೊಳಚೆ ನೀರಿಗೆ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿದೆ. ಇಷ್ಟಾದ್ರೂ ಕೂಡಾ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ಸತ್ತು ಬಿದ್ದಿರೋ ಲಕ್ಷಾಂತರ ಮೀನುಗಳು. ಈ ಸತ್ತ ಮೀನುಗಳ ವಾಸನೆ ತಾಳದೆ ಮೂಗು ಮುಚ್ಚಿಕೊಂಡು ಹೋಗ್ತಿರುವ ಸ್ಥಳೀಯರು. ಈ ಪರಿಸ್ಥಿತಿ ಕಂಡಿದ್ದು ಕೋಟೆನಾಡು‌ ಚಿತ್ರದುರ್ಗ ಸಮೀಪದ ಮಲ್ಲಾಪುರ ಕೆರೆ ಬಳಿ.


ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಬೃಹತ್ ಗಾತ್ರದ ಈ  ಐತಿಹಾಸಿಕ  ಕೆರೆ ಸುತ್ತಲೂ ಮೂರು ಹಳ್ಳಿಗಳನ್ನ ಆವರಿಸಿದೆ.  ಇದೇ ವರ್ಷ ಮಳೆಗೆ ಮೂರ್ನಾಕು ಬಾರಿ ಕೋಡಿ ಬಿದ್ದಿರುವ ಈ ಕೆರೆ ಇದೀಗ ಕಲುಷಿತ ನೀರಿನಿಂದ ಗಬ್ಬೆದ್ದು ನಾರುತ್ತಿದೆ. ಅಲ್ಲದೆ ಇದೇ ಕೊಳಚೆ ನೀರಿಗೆ ಕೆರೆಯಲ್ಲಿನ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಕೆರೆ ನೀರು ದುರ್ವಾಸನೆ ಹೊಡೆಯತ್ತಿವೆ. ಸತ್ತ ಮೀನುಗಳ ವಾಸನೆ ತಾಳಲಾಗದೆ ಜನರು ಕಂಗಾಲಾಗಿದ್ದಾರೆ. ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆರೆಯ ವಾಸನೆಯಿಂದ ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.


ಅಷ್ಟೆ ಅಲ್ಲದೆ ಮಲ್ಲಾಪುರ, ಗೊಲ್ಲರಹಟ್ಟಿ, ಪಿಳ್ಳೇಕೆರೆನಹಳ್ಳಿಯ ಜನರಂತೋ ಈ ಸತ್ತ ಮೀನುಗಳ ವಾಸನೆಗೆ ನಲುಗಿ ಹೋಗಿದ್ದಾರೆ. ಇನ್ನೂ ಕೆರೆಯ ಪಕ್ಕದಲ್ಲೇ ಶಾಲೆ ಕಾಲೇಜುಗಳು ಕೂಡಾ ಇದ್ದು, ವಿದ್ಯಾರ್ಥಿಗಳು ಕೂಡಾ ವಾಸನೆಯಿಂದ ಸುಸ್ತಾಗಿದ್ದಾರೆ. ಸುಮಾರು 50 ಟನ್ ಗೂ ಅಧಿಕ ಮೀನುಗಳು ಕೆರೆಯಲ್ಲಿ ಸಾವನ್ನಪ್ಪಿದ್ದು, ಸ್ಥಳೀಯ ನಿವಾಸಿಗಳು  ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಇಷ್ಟಾದ್ರೂ ಕೂಡಾ ಇತ್ತ ಯಾವುದೇ ಅಧಿಕಾರಿಗಳು ತಿರುಗಿಯೂ ನೋಡದೆ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


ಲಕ್ಷಾಂತರ ಮೀನುಗಳ ಸಾವಿಗೆ ಚಿತ್ರದುರ್ಗ ನಗರದ ಚರಂಡಿಯ ಕೊಳಚೆ ನೀರು ಕಾರಣ ಎನ್ನಲಾಗ್ತಿದೆ. ಯಾಕಂದ್ರೆ ನಿತ್ಯವೂ  ಚಿತ್ರದುರ್ಗ ನಗರದ ಎಲ್ಲಾ ಚರಂಡಿಗಳ ನೀರು ಚರಂಡಿಗಳ ಮೂಲಕ ಹರಿದು ಬಂದು ಮಲ್ಲಾಪುರ ಕೆರೆ ಸೇರುತ್ತಿದೆ. ಹೀಗೆ ಬಂದು ಸೇರೋ ವಿಷ ಪೂರಿತ ನೀರಿನಿಂದ ಜಲಚರ ಜೀವಿಗಳು ಸಾಯುತ್ತಿವೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಅಲ್ಲದೆ ಡ್ರೈನೇಜ್ ನೀರು ಬಿಡದಂತೆ ಚಿತ್ರದುರ್ಗ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಕೂಡಾ ಪ್ರಯೋಜನವಾಗಿಲ್ಲ. ಇದ್ರಿಂದ ಮೀನುಗಳು ಸಾವನ್ನಪ್ಪಿವೆ ಎಂಬ  ಆರೋಪ ಮಾಡಿದ್ದಾರೆ.


ಮತ್ತೊಂದು ಕಡೆ ಮೀನುಗಳ ಸಾವಿನಿಂದ ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದಿದ್ದ, ಟೆಂಡರ್ ದಾರರಿಗೂ ಕೂಡಾ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟಾರೆ ಇಡೀ ಚಿತ್ರದುರ್ಗದ ಕೊಳಚೆ ನೀರು ಮಲ್ಲಾಪುರ ಕೆರೆ ಸೇರುತ್ತಿದ್ದು, ಇದೆ ಕಾರಣದಿಂದ ಮೀನುಗಳ ಮಾರಣ ಹೋಮ ನಡೆದಿದೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಇನ್ನಾದ್ರೂ ಮೀನುಗಾರಿಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕೆರೆಗೆ ಬರುವ ಕಲುಶಿತ ಚರಂಡಿ ನೀರು ಬಾರದಂತೆ ತಡೆಯಬೇಕಿದೆ.

Published by:Soumya KN
First published: