ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಶಿಕ್ಷಕ ; ಮದ್ಯದ ನಶೆಯಲ್ಲಿ ತೇಲಾಡಿದ ಶಿಕ್ಷಕನನ್ನು‌ ಅಮಾನತು ಮಾಡಿದ ಡಿಡಿಪಿಐ

ಮದ್ಯದ ನಶೆಯಲ್ಲಿ ತೇಲಾಡಿದ ಮುಖ್ಯ ಶಿಕ್ಷಕನನ್ನು ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

news18-kannada
Updated:July 8, 2020, 4:53 PM IST
ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಶಿಕ್ಷಕ ; ಮದ್ಯದ ನಶೆಯಲ್ಲಿ ತೇಲಾಡಿದ ಶಿಕ್ಷಕನನ್ನು‌ ಅಮಾನತು ಮಾಡಿದ ಡಿಡಿಪಿಐ
ಮುಖ್ಯ ಶಿಕ್ಷಕ ದೇವಿಂದ್ರಪ್ಪ
  • Share this:
ಯಾದಗಿರಿ(ಜುಲೈ.08): ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಕೂಡ ಕೋವಿಡ್ ತಡೆಗೆ ಹಗಲಿರುಳು ಶ್ರಮವಹಿಸುತ್ತಿದೆ. ಆದರೆ, ಶಿಕ್ಷಕರೊಬ್ಬರು ಮಾತ್ರ ಕೊರೋನಾ ಮುಂಜಾಗ್ರತೆ ವಹಿಸದೆ ಸಂಪೂರ್ಣ ಸರಕಾರ ಆದೇಶ ಉಲ್ಲಂಘನೆ ಮಾಡುವ ಜೊತೆ ವಿದ್ಯಾದೇಗುಲದಲ್ಲಿ ಎಣ್ಣೆ ನಶೆಯಲ್ಲಿ ತೇಲಾಡಿದ್ದಾರೆ. ಮದ್ಯದ ಮತ್ತಿನಲ್ಲಿ ತೇಲಾಡಿದ ಮುಖ್ಯ ಶಿಕ್ಷಕನನ್ನು ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಿಂದ್ರಪ್ಪ ಜುಲೈ 3 ರಂದು ರಾತ್ರಿ ತಾನು ಕರ್ತವ್ಯ ನಿರ್ವಹಣೆ ಮಾಡುವ ಜ್ಞಾನದೇಗುಲವನ್ನೆ ಮದ್ಯದಂಗಡಿ ಮಾಡಿಕೊಂಡು ಕುಡಿದಿದ್ದಾನೆ. ತಾನು ಮದ್ಯ ಸೇವನೆ ಮಾಡುವ ಜೊತೆಗೆ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನಿರ್ವಾಹಕರಿಗೆ ಕೂಡ ಎಣ್ಣೆ ಪಾರ್ಟಿ ನೀಡಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಸಂದರ್ಭದಲ್ಲಿ ಶಾಲೆಯ ‌ಮಕ್ಕಳನ್ನು ಹಳ್ಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಬರಲು ಬಸ್ ಗಳು ರಾತ್ರಿ ಹಳ್ಳಿಯಲ್ಲಿ ನಿಲ್ಲಿಸಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಬರಲು ಚಾಲಕ , ನಿರ್ವಾಹಕರಿಗೆ  ಕಳುಹಿಸಲಾಗಿತ್ತು. ಆದರೆ, ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕೂಡ ಹಳ್ಳಿಯಲ್ಲಿ ಇದ್ದು ಶಾಲೆಯಲ್ಲಿ ಮುಖ್ಯ ಶಿಕ್ಷಕನ ಜೊತೆ ಎಣ್ಣೆ ಪಾರ್ಟಿ ಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೂಡ ಮುಖ್ಯ ಶಿಕ್ಷಕ‌ ಸಾಕಷ್ಟು ಬಾರಿ ತಪ್ಪು ಮಾಡುತ್ತಿದ್ದರು ಈಗ ಶಾಲೆಯಲ್ಲಿ ಕುಡಿಯುವ ಕಾರ್ಯ ಮಾಡಿದ್ದಾರೆ. ಇಂತಹ ಶಿಕ್ಷಕರನ್ನು ನಮ್ಮ ಶಾಲೆಗೆ ಬೇಡವೆಂದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಎಸ್ ಡಿಎಂಸಿ ಸದಸ್ಯ ಸಿಮನ್ ತಿಳಿಸಿದ್ದಾರೆ.

ಇದೆ 3 ರಂದು ಮುಖ್ಯ ಶಿಕ್ಷಕ ದೇವಿಂದ್ರಪ್ಪ ಶಾಲೆಯಲ್ಲಿ ಪಾರ್ಟಿ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಕೂಡ ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಅವರು ಡಿಡಿಪಿಐ ಅವರಿಗೆ ಪ್ರಾಥಮಿಕ ವರದಿ ನೀಡಿದ್ದರು.

ಇದನ್ನೂ ಓದಿ : ರಾಜ್ಯದ ಹಲವು ಕಾರಾಗೃಹಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ; ಶಿವಮೊಗ್ಗ ಕಾರಾಗೃಹ ಮಾತ್ರ ಕೊರೋನಾ ಮುಕ್ತ

ಶಾಲೆಯಲ್ಲಿ ಶಿಕ್ಷಕ ದೇವಿಂದ್ರಪ್ಪ ಮದ್ಯ ಸೇವನೆ ಮಾಡಿ ತಪ್ಪು ಮಾಡಿದ್ದು ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಗುರುವಂದರೆ ಎಲ್ಲರಿಗೂ ಮಾದರಿಯಾಗಿರಬೇಕು ಆದರೆ, ಈ ಘಟನೆಯು ಶಿಕ್ಷಣ ಇಲಾಖೆಗೆ ತಲೆ ತಗ್ಗಿಸುವಂತೆ ಮಾಡಿದೆ.
Published by: G Hareeshkumar
First published: July 8, 2020, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading