HOME » NEWS » District » DCM LAXMAN SAVADI REFUTES THE ALLEGATION OF HDK THAT HIS GOVERNMENT UNDONE BY DRUG MAFIA SNVS

ಡ್ರಗ್ಸ್ ಆರೋಪ: ಹೆಚ್​ಡಿಕೆ ಹೇಳಿಕೆ ಅಸಮರ್ಥತೆಯ ಪ್ರತೀಕ – ಡಿಸಿಎಂ ಸವದಿ ವಾಗ್ದಾಳಿ

ಬಿಜೆಪಿ ಸರ್ಕಾರ ರಚನೆಗೂ ಮುನ್ನ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿದ್ದರಲ್ಲವೆ. ಆಗ ಅವರು ಪೊಲೀಸರಿಂದ ತನಿಖೆ ಮಾಡಿಸಬೇಕಿತ್ತು. ಆಗ ಸುಮ್ಮನೆ ಕುಳಿತಿದ್ದರ ಅರ್ಥವೇನು? ಮುಖ್ಯಮಂತ್ರಿಯಾಗಿ ಅಸಮರ್ಥರಾಗಿದ್ದುದನ್ನ ತಮ್ಮ ಹೇಳಿಕೆ ಮೂಲಕ ತೋರಿಸಿಕೊಳ್ಳುತ್ತಿದ್ದಾರೆ ಎಂದು ಸವದಿ ಟೀಕಿಸಿದ್ದಾರೆ.

news18-kannada
Updated:September 7, 2020, 1:52 PM IST
ಡ್ರಗ್ಸ್ ಆರೋಪ: ಹೆಚ್​ಡಿಕೆ ಹೇಳಿಕೆ ಅಸಮರ್ಥತೆಯ ಪ್ರತೀಕ – ಡಿಸಿಎಂ ಸವದಿ ವಾಗ್ದಾಳಿ
ಲಕ್ಷ್ಮಣ ಸವದಿ
  • Share this:
ಕಲಬುರ್ಗಿ: ಮೈತ್ರಿ ಸರ್ಕಾರ ಕೆಡವಲು ಡ್ರಗ್ಸ್ ದಂಧೆ ಹಣ ಬಳಕೆ ಮಾಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಿಣ ಸವದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಮಾಜಿ ಸಿಎಂ ಮಾಡಿರೋ ಆರೋಪದ ವಿರುದ್ಧ ಕಿಡಿಕಾರಿದ್ದಾರೆ. ಕುಮಾರಸ್ವಾಮಿಯವರಿಗೆ ಈಗ ಜ್ಞಾನೋದಯವಾದಂತೆ ಕಾಣ್ತಿದೆ. ತಮ್ಮ ಸರ್ಕಾರವಿದ್ದಾಗ ಗುಪ್ತಚರ ಇಲಾಖೆ ಏನ್ ಮಾಡ್ತಿತ್ತು ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಸರ್ಕಾರ ರಚನೆಗೂ ಮುನ್ನ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿದ್ದರಲ್ಲವೆ. ಆಗ ಅವರು ಪೊಲೀಸರಿಂದ ತನಿಖೆ ಮಾಡಿಸಬೇಕಿತ್ತು. ಆಗ ಸುಮ್ಮನೆ ಕುಳಿತಿದ್ದರ ಅರ್ಥವೇನು? ಮುಖ್ಯಮಂತ್ರಿಯಾಗಿ ಅಸಮರ್ಥರಾಗಿದ್ದುದನ್ನ ತಮ್ಮ ಹೇಳಿಕೆ ಮೂಲಕ ತೋರಿಸಿಕೊಳ್ಳುತ್ತಿದ್ದಾರೆ. ಸುಮ್ನೆ ಈಗ ರಾಜಕೀಯವಾಗಿ ಟೀಕೆ ಮಾಡೋದು ಸರಿಯಲ್ಲ ಎಂದು ಹರಿಯಾಯ್ದ ಡಿಸಿಎಂ ಲಕ್ಷ್ಮಣ ಸವದಿ, ಸರ್ಕಾರ ಡ್ರಗ್ ಮಾಫಿಯಾದಲ್ಲಿರುವವರನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದೆ. ಯಾರನ್ನೂ ಕ್ಷಮಿಸೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Drugs Mafia: ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್; ಸಚಿವ ಸುರೇಶ್ ಕುಮಾರ್ ಅನುಮಾನ

ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ನೌಕರರಿಗೆ ವೇತನ ಪಾವತಿ:

ಇಂದಿಗೂ ಸಾರಿಗೆ ಇಲಾಖೆಗೆ ಪ್ರತಿ ದಿನ ಎರಡುವರೆ ಕೋಟಿ ರೂಪಾಯಿ ಹಾನಿಯಾಗುತ್ತಿದೆ. ಆದರೂ ಸಾರಿಗೆ ನೌಕರರ ವೇತನ ನೀಡಲಾಗುತ್ತಿದೆ. ಸರ್ಕಾರದ ನೆರವು ಪಡೆದು ಆರು ತಿಂಗಳ ವೇತನ ಪಾವತಿಸಲಾಗಿದೆ. ಅಂತರರಾಜ್ಯ ಸಾರಿಗೆ ಪ್ರಾರಂಭದ ಬಗ್ಗೆ ಮಾತುಕತೆ ನಡೆದಿದೆ. ನೆರೆಯ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಅನೇಕ ರಾಜ್ಯಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ಕೂಡಲೇ ಅನ್ಯ ರಾಜ್ಯಗಳಲ್ಲಿ ಕರ್ನಾಟಕ ಸಾರಿಗೆ ಬಸ್​ಗಳ ಸಂಚಾರ ಆರಂಭಗೊಳ್ಳಲಿದೆ ಎಂದರು.

ಕೋವಿಡ್ ನೆಪದಲ್ಲಿ ಯಾವ ಸಾರಿಗೆ ಸಿಬ್ಬಂದಿಗೂ ಒತ್ತಾಯಪೂರ್ವಕ ರಜೆ ಮೇಲೆ ಕಳುಹಿಸುತ್ತಿಲ್ಲ. ಯಾವುದೇ ಎಂ.ಡಿ.ಗೆ ನಾನು ಈ ಸಂಬಂಧ ಸೂಚನೆಗಳನ್ನು ನೀಡಿಲ್ಲ. ಆದರೆ ಕೆಲವೊಬ್ಬ ಸಿಬ್ಬಂದಿ ಕೋವಿಡ್ ಕಾರಣದಿಂದಾಗಿ ಸೇವೆಗೆ ಹಾಜರಾಗಲಾಗುವುದಿಲ್ಲ ಎನ್ನುವವರಿಗೆ ಮಾತ್ರ ರಜೆ ನೀಡುತ್ತಿರೋದಾಗಿ ಸವದಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸತತ ಕಾರ್ಯಾಚರಣೆ ಬಳಿಕ ಪತ್ತೆಯಾಯ್ತು ಭೀಮಾ ನದಿ ಪಾಲಾಗಿದ್ದ ನಾಲ್ವರು ಬಾಲಕರ ಶವಬಸ್ ಪ್ರಯಾಣಕ್ಕಿಲ್ಲ ನಿರ್ಬಂಧ:

ಬೈಕ್ ಮೇಲೆ ಇಬ್ಬರು ಕೂತು ಹೋಗುತ್ತಾರೆ. ಆಟೋಗಳಲ್ಲಿ ಯಥಾ ರೀತಿ ಜನ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಬಸ್​ಗಳಲ್ಲಿ ಸಾಮಾಜಿಕ ಅಂತರ ಪದ್ಧತಿ ತೆಗೆದುಹಾಕಲಾಗಿದೆ. ಅಲ್ಲೆಲ್ಲಾ ಇಲ್ಲದ ಸಮಸ್ಯೆ ಬಸ್​ಗಳಲ್ಲಿ ಸಾಮಾಜಿಕ ಅಂತರ ತೆಗೆದಾಗ ಏಕೆ ಬರುತ್ತೆ ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದರು.

ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡೋದು ಸಿಎಂಗೆ ವಿವೇಚನೆಗೆ ಬಿಟ್ಟದ್ದು. ಸಿಎಂ ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರನ್ನು ಸೇರಿಸಿಕೊಳ್ತಾರೋ, ಯಾರನ್ನು ಕೈಬಿಡ್ತಾರೋ ಅವರಿಗೆ ಬಿಟ್ಟದ್ದ ಎಂದು ಸವದಿ ಅಭಿಪ್ರಾಯಪಟ್ಟರು.

ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: September 7, 2020, 1:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories