ಡಿಸಿಎಂ ತವರಿನಲ್ಲಿ ಕೊರೋನಾಘಾತ ; ಒಂದು ವಾರದಲ್ಲಿ ಐವರ ಬಲಿ ಪಡೆದ ಕೊರೋನಾ

ಇಂದಿನಿಂದ ಬರುವ ಭಾನುವಾರದ ವರೆಗೂ ಸ್ವಯಂ ಪ್ರೇರಿತವಾಗಿ ಬಂದ್ ಎಲ್ಲಾ ವ್ಯಾಪಾರಗಳನ್ನ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಜುಲೈ. 05): ರಾಜ್ಯದಾದ್ಯಂತ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ತಾಲೂಕಾಗಿರುವ ಅಥಣಿ ತಾಲೂಕಿನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.

ಡಿಸಿಎಂ ಲಕ್ಷ್ಮಣ ಸವದಿ ತವರು ಕ್ಷೇತ್ರ ಅಥಣಿ ತಾಲೂಕಿನಲ್ಲಿ ಸಮುದಾಯದ ಮಟ್ಟದಲ್ಲಿ ಕೊರೋನಾ ಬಂದಿದೆಯಾ ಎನ್ನುವ ಅನುಮಾನಗಳು ಹುಟ್ಟಿದ್ದು, ಅಥಣಿ ಒಂದೇ ತಾಲೂಕಿನಲ್ಲಿ ಇದುವರೆಗೂ ಒಟ್ಟು 39 ಜನರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ಇನ್ನು ಕೊರೋನಾದಿಂದಾಗಿಯೆ ಜಿಲ್ಲೆಯಲ್ಲಿ ಅತಿ ಹೆಚ್ವು ಸಾವಿನ ಸಂಖ್ಯೆಗಳು ಸಹ ಅಥಣಿ ತಾಲೂಕಿನಲ್ಲಿ ನಡೆದಿದ್ದು ಇದುವರೆಗೂ ಒಟ್ಟು 8 ಜನ ಮೃತ ಪಟ್ಟಿದ್ದಾರೆ.

ಅನುಮಾನಗೊಂಡ ಆರೋಗ್ಯ ಇಲಾಖೆ ಮೃತರಾದವರ ಕೊರೋನಾ ತಪಾಸಣೆ ನಡೆಸಿದ್ದು ಮೃತರಲ್ಲಿ ಒಟ್ಟು 5 ಜನರ ವರದಿ ಕೊರೋನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ ಅಲ್ಲದೆ ಇನ್ನು ಒಬ್ಬರ ವರದಿ ಬರಬೇಕಿದೆ ಇಬ್ಬರು ಜನರ ವರದಿ ನೆಗೆಟಿವ್ ಬಂದಿದೆ.

ಕೊರೋನಾಘಾತದಿಂದ ಹೆಚ್ಚಿದ ಆತಂಕ

ಇನ್ನು ಅಥಣಿ ತಾಲೂಕು ಮಹಾರಾಷ್ಟ್ರದ ಜತ್ತ ತಾಲೂಕಿಗೆ ಹೊಂದಿಕೊಂಡಿರುವ ತಾಲೂಕು ಆಗಿದೆ ಮಹಾರಾಷ್ಟ್ರದದಿಂದ ಹೆಚ್ಚಾಗಿ ಅಥಣಿಗೆ ವ್ಯಾಪಾರ ನಡೆಸಲು ಹಾಗೂ ಆಸ್ಪತ್ರೆಗಳಿಗೆ ಅಂತ ಮಹಾರಾಷ್ಟ್ರದ ಜನ ಇಲ್ಲಿಗೆ ಬರುತ್ತಾರೆ. ಮಹಾರಾಷ್ಟ್ರ ಇಬ್ಬರು ಅಥಣಿಗೆ ಬಂದು ಹೋದ ಬಳಿಕ ಕೊರೋನಾ ಪಾಸಿಟಿವ್ ಬಂದಿತ್ತು. ಪರಿಣಾಮ ಎರಡು ಖಾಸಗಿ ಆಸ್ಪತ್ರೆಗಳನ್ನ ಸೀಲ್ ಮಾಡುವಂತ ಪರಿಸ್ಥಿತಿ ಅಥಣಿಯಲ್ಲಿ ನಡೆದಿತ್ತು. ಈಗ ಮತ್ತೆ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಅಥಣಿ ಜನರಲ್ಲಿ ಆತಂಕ ಮನೆ ಮಾಡಿದೆ.

ಒಂದು ವಾರ ಸ್ವಯಂ ಪ್ರೇರಿತ ಬಂದ್ ಗೆ ಶಾಸಕರ ಮನವಿ

ಇನ್ನು ತಾಲೂಕಿನಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನಲೆ ನಿನ್ನೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅಧಿಕಾರಿಗಳು ಹಾಗೂ ಅಥಣಿ ತಾಲೂಕಿನ ವ್ಯಾಪಾರಸ್ಥರ ಸಭೆಯನ್ನ ನಡೆಸಿದ್ದಾರೆ. ಇಂದಿನಿಂದ ಬರುವ ಭಾನುವಾರದ ವರೆಗೂ ಸ್ವಯಂ ಪ್ರೇರಿತವಾಗಿ ಬಂದ್ ಎಲ್ಲಾ ವ್ಯಾಪಾರಗಳನ್ನ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.

ಕೊರೋನಾದಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಭವಿಷ್ಯ ಘೋರವಾಗಲಿದೆ ವ್ಯಾಪಾರ ಬಂದ್ ಮಾಡುವುದರಿಂದ ಸೋಂಕು ಹರಡುವಿಕೆಯನ್ನ ತಡೆಯಬಹುದು ಹಾಗಾಗಿ ಬಂದ್ ನಿರ್ಧಾರ ಅನಿರ್ವಾರ್ಯ ಎಂದಿದ್ದಾರೆ.

ಇದನ್ನೂ ಓದಿ :  ಕಡಲ ಕೊರೆತಕ್ಕೆ ಸೌಂದರ್ಯ ಕಳೆದುಕೊಂಡ ಗೋಕರ್ಣ ಮುಖ್ಯ ಕಡಲತೀರ; ಅಬ್ಬರದ ಅಲೆಗಳಿಗೆ ತೀರದ ಜನ ಕಂಗಾಲು

ಇನ್ನು ಪಕ್ಕದ ಮಹಾರಾಷ್ಟ್ರ ಜನ ಕಳ್ಳ ಮಾರ್ಗವಾಗಿ ಸಾಕಷ್ಟು ಜನ ಅಥಣಿಗೆ ಬಂದು ಹೋಗುತ್ತಿದ್ದಾರೆ. ಗಡಿಗಳಲ್ಲಿ ಪೊಲೀಸ ವ್ಯವಸ್ಥೆ ಸರಿಯಾಗಿಲ್ಲಾ ಪರಿಣಾಮ ಮಹಾರಾಷ್ಟ್ರದ ಜನ ಇಲ್ಲಿಗೆ ಬಂದು ವ್ಯಾಪಾರ ನಡೆಸುತ್ತಿದ್ದಾರೆ.

ಇದನ್ನ ಪೊಲೀಸ್ ತಡೆಗಟ್ಟಬೇಕು ಗಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ಹೆಚ್ವಿನ ಚೆಕ್ ಪೊಸ್ಟ್ ಗಳನ್ನ ನಿರ್ಮಾಣ ಮಾಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
Published by:G Hareeshkumar
First published: