ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಗೆ, ಮಟ್ಕಾ ಅಡ್ಡೆ; ಕೆಡಿಪಿ ಸಭೆಯಲ್ಲಿ ಗರಂ ಆದ ಡಿಸಿಎಂ ಸವದಿ

ರಾಜ್ಯ ಸರಕಾರವು ರಸ್ತೆ ಅಭಿವೃದ್ಧಿಗಾಗಿ ಸರಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಿದೆ. ಧಾರವಾಡ ವಿಭಾಗಕ್ಕೆ 130 ಕೋಟಿ ನೀಡುತ್ತೀರಿ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ 30 ಕೋಟಿ ನೀಡುತ್ತಾರೆ ಎಂದು ಪರೋಕ್ಷವಾಗಿ ಗೋವಿಂದ ಕಾರಜೋಳರ ವಿರುದ್ದ ಆಡಳಿತ ಪಕ್ಷದ ಸದಸ್ಯರಾದ ಶಿವನಗೌಡ ನಾಯಕ, ಡಾ ಶಿವರಾಜಪಾಟೀಲ ಆರೋಪಿಸಿದರು.

ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆ.

ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆ.

  • Share this:
ರಾಯಚೂರು; ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಇಂದು ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಮಟ್ಕಾ ದಂಧೆ  ತಡೆಯಲು ಆಗಿಲ್ಲ. ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದವರೆಗೂ ನೀರು ಸಿಗುತ್ತಿಲ್ಲ. ಭದ್ರಾದಿಂದ ತುಂಗಭದ್ರಾಕ್ಕೆ ನೀರು ಬಿಡಲು ಆಗ್ರಹ ಮಾಡಿದರು.

ಸಭೆಯ ಆರಂಭದ ಮುನ್ನ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಕೊನೆಯ ಭಾಗಕ್ಕೆ ನೀರು ಸಿಗುತ್ತಿಲ್ಲ. ರೈತರು ಹೋರಾಟ ಮಾಡುತ್ತಿದ್ದಾರೆ. ಈಗ ತಕ್ಷಣ ನೀರು ಬಿಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯದಲ್ಲಿ ಈಗ 4.88 ಟಿಎಂಸಿ ನೀರಿನ ಕೊರತೆ ಇದೆ. ಹೀಗಾಗಿ 300 ಕ್ಯೂಸೆಕ್ ನೀರಿನ ಹರಿವು ಕಡಿಮೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಡಿಸಿಎಂ ಅಧಿಕಾರಿಗಳ ವಿರುದ್ದ ಗರಂ ಆದರು.

ಇದೇ ವೇಳೆ ರಾಯಚೂರು ಜಿಲ್ಲೆಯ ಕೃಷ್ಣಾ ಹಾಗು ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಮರಳು ಗುತ್ತಿಗೆ ಪಡೆದವರು ಅಧಿಕ ಪ್ರಮಾಣದಲ್ಲಿ ಮರಳು ಸಾಗಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇಲ್ಲಿ ಶಾಸಕರು ಅಕ್ರಮ‌ ಮರಳು ದಂಧೆ ಪಾಲುದಾರರು ಎಂಬಂತೆ ಜನ ಮಾತನಾಡುತ್ತಿದ್ದಾರೆ. ನಾವು ಈ ಅಕ್ರಮದಲ್ಲಿ ಭಾಗಿಯಾಗದಿದ್ದರೂ ನಮ್ಮ ಹೆಸರಿಗೆ ಕಳಂಕ ಬರುತ್ತಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಓವರ್ ಲೋಡ್ ಮರಳು ತಡೆಯುವಲ್ಲಿ ಆರ್​ಟಿಒ, ಪೊಲೀಸರು, ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಕ್ರಮದಲ್ಲಿ ಈ ಅಧಿಕಾರಿಗಳು ಭಾಗಿಯಾದಂತೆ ಕಾಣುತ್ತಿದೆ. ತಕ್ಷಣವೇ ಈ ಅಕ್ರಮ ತಡೆಯದಿದ್ದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗಣಿ ಅಧಿಕಾರಿಗಳನ್ನೇ ಹೊಣೆ ಮಾಡಿ ಅಮಾನತ್ತು ಮಾಡಲಾಗುವುದು ಎಂದು ಹೇಳಿದರು.

ಇದನ್ನು ಓದಿ: 6ನೇ ಹೆಂಡತಿ ಸೆಕ್ಸ್ ಮಾಡಲು ನಿರಾಕರಿಸಿದ ಕಾರಣ ಏಳನೇ ಮದುವೆಯಾಗಲು ಮುಂದಾದ 63 ವರ್ಷದ ವೃದ್ಧ!

ಇದೇ ಸಂದರ್ಭದಲ್ಲಿ ಬೆಳೆ ವಿಮೆಯನ್ನು ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಗೆ ಬೆಳೆ ವಿಮೆ ಬರುತ್ತಿಲ್ಲ. ಕಳೆದ ಬಾರಿ ಬೆಳೆ ಹಾನಿಯಾದರೂ ರಾಯಚೂರು ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿ ಬೆಳೆ ಹಾನಿಯಾಗಿಲ್ಲ ಎಂದರು. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ತಕ್ಷಣ ರೈತರ ಖಾತೆಗೆ ಜಮಾ ಆಗುತ್ತಿದೆ. ಆದರೆ ಬೆಳೆ ವಿಮೆ ಜಮಾ ಆಗುತ್ತಿಲ್ಲ ಎಂದರೆ ಹೇಗೆ ಎಂದರು. ನಾವು ಹಣ ಕಟ್ಟಿದ್ದರಿಂದ ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಕೊಡಿಸಬೇಕೆಂದರು. ಇದೇ ವೇಳೆ ರಾಜ್ಯ ಸರಕಾರವು ರಸ್ತೆ ಅಭಿವೃದ್ಧಿಗಾಗಿ ಸರಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಿದೆ. ಧಾರವಾಡ ವಿಭಾಗಕ್ಕೆ 130 ಕೋಟಿ ನೀಡುತ್ತೀರಿ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ 30 ಕೋಟಿ ನೀಡುತ್ತಾರೆ ಎಂದು ಪರೋಕ್ಷವಾಗಿ ಗೋವಿಂದ ಕಾರಜೋಳರ ವಿರುದ್ದ ಆಡಳಿತ ಪಕ್ಷದ ಸದಸ್ಯರಾದ ಶಿವನಗೌಡ ನಾಯಕ, ಡಾ ಶಿವರಾಜಪಾಟೀಲ ಆರೋಪಿಸಿದರು.

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ ಸಿಇಒ ಶೇಖ್ ತನ್ವೀರ್ ಅಹ್ಮದ್ , ಎಸ್ಪಿ ಪ್ರಕಾಶ ನಿಕ್ಕಂ ಇದ್ದರು.
Published by:HR Ramesh
First published: