HOME » NEWS » District » DCM LAKSHMAN SAVADI INTEGRATED COVID CARE CENTER IN NIPANI KVD

ಜೊಲ್ಲೆ ಸಮೂಹದಿಂದ ನಿಪ್ಪಾಣಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ: ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ

ಸಚಿವೆ ಶಶಿಕಲಾ ಜೊಲ್ಲೆಯವರು ಮಾತನಾಡಿ ಕೊರೋನಾ 2ನೇ ಅಲೆಯು ವ್ಯಾಪಕವಾಗಿ ಹರುಡುತ್ತಿದೆ. ಈ‌ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದಿಟ್ಟಹೆಜ್ಜೆಯನ್ನು ಇಟ್ಟಿದೆ ಎಂದರು.

Kavya V | news18-kannada
Updated:May 7, 2021, 7:07 PM IST
ಜೊಲ್ಲೆ ಸಮೂಹದಿಂದ ನಿಪ್ಪಾಣಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ: ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ
ಜೊಲ್ಲೆ ಸಮೂಹದಿಂದ ನಿಪ್ಪಾಣಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ: ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ
  • Share this:
ಬೆಳಗಾವಿ: ಜೊಲ್ಲೆ ಉದ್ಯೋಗ ಸಮೂಹದಿಂದ ನಿಪ್ಪಾಣಿ ಪಟ್ಟಣದ ಶಿವಶಂಕರ ಜೋಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸಿದರು. ನೆರೆಯ ಮಹಾರಾಷ್ಟ್ರ ಸೇರಿದಂತೆ ನಿಪ್ಪಾಣಿ ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ.ಇದನ್ನ ಅರಿತ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ತಮ್ಮ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಇವತ್ತು ಆರೋಗ್ಯ ಕೇಂದ್ರದ ಸಹಕಾರದಿಂದ ನಿಪ್ಪಾಣಿಯಲ್ಲಿ ತಮ್ಮದೆಯಾದ ಶಿವಶಂಕರ ಜೋಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಿದ್ದಾರೆ. ಈ ಕೋವಿಡ್​​ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರು ಲೋಕಾರ್ಪಣೆಗೊಳಿಸಿದರು.

ಇಂದು ನಿಪ್ಪಾಣಿಯಲ್ಲಿರುವ ಸಂಸ್ಥೆಯ ಸಿಬಿಎಸ್ ಸಿಯಲ್ಲಿ, ಜೊಲ್ಲೆ ಉದ್ಯೋಗ ಸಮೂಹ, ಸಮುದಾಯ ಆರೋಗ್ಯ ಕೇಂದ್ರ, ಆಯುಷ್ಮಾನ್ ವಿಭಾಗ, ನಿಪ್ಪಾಣಿ ಪರಿಸರದಲ್ಲಿರುವ ಎಲ್ಲಾ ಖಾಸಗಿ ವೈದ್ಯರು ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ನಿರ್ಮಿಸಲಾದ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು.

ಉದ್ಘಾಟನೆ ಬಳಿ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಿಪ್ಪಾಣಿಯು ಮಹಾರಾಷ್ಟ್ರದ ಗಡಿಯಲ್ಲಿ ಇರುವುದರಿಂದ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವುದನ್ನು ಮನಗಂಡು ಇವತ್ತು ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸ್ವಂತ ಖರ್ಚಿನಿಂದ ಕೋವಿಡ್​​ ಆಸ್ಪತ್ರೆ ಆರಂಭಿಸುವುದು ಶ್ಲಾಘನೀಯ ಎಂದರು.

ಸಚಿವೆ ಶಶಿಕಲಾ ಜೊಲ್ಲೆಯವರು ಮಾತನಾಡಿ ಕೊರೋನಾ 2ನೇ ಅಲೆಯು ವ್ಯಾಪಕವಾಗಿ ಹರುಡುತ್ತಿದೆ. ಈ‌ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದಿಟ್ಟಹೆಜ್ಜೆಯನ್ನು ಇಟ್ಟಿದೆ. ನಿಪ್ಪಾಣಿಯು ಮಹಾರಾಷ್ಟ್ರದ ಗಡಿಯ ಹತ್ತಿರ ಇರುವುದರಿಂದ ಹಾಗೂ ನಿಪ್ಪಾಣಿ ಕ್ಷೇತ್ರದ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ರೋಗಿಗಳ ಅನುಕೂಲಕ್ಕಾಗಿ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಿದ್ದೆವೆ ಎಂದರು.

ಈ ಸೆಂಟರ್ ನಲ್ಲಿ 16 ಮಾನಿಟರ್ ಗಳನ್ನು ಒಳಗೊಂಡ ಸುಸಜ್ಜಿತ ಕೇಂದ್ರೀಕೃತ ಆಕ್ಸಿಜನ್ ಬೆಡ್ ಹಾಗೂ ಚಿಕಿತ್ಸೆಗಾಗಿ 24 ಬೆಡ್ ಗಳು ಸೇರಿ, ಒಟ್ಟು 40 ಬೆಡ್ ಗಳ‌ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸೋಂಕಿತರಿಗೆ ಬೇಕಾಗುವ ಎಲ್ಲಾ ರೀತಿಯ ಚಿಕಿತ್ಸೆ, ಪೌಷ್ಟಿಕ ಆಹಾರ, ಅತ್ಯುತ್ತಮ ವಸತಿ, ಪೇಷೆಂಟ್ ಕಿಟ್, ಕುಡಿಯಲು ಹಾಗೂ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಗಳನ್ನು ನಮ್ಮ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ವ್ಯವಸ್ಥೆ ಒದಗಿಸಲಾಗುವುದು.

ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದರಾದ ಶ್ರೀ ಅಣ್ಣಾಸಾಹೆಬ ಜೊಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣಾಧಿಕಾರಿಗಳದ ಡಾ. ಎಸ್.ವಿ.ಮುನ್ಯಾಳ, ತಾಲೂಕು ವೈದ್ಯಾಧಿಕಾರಿಗಳಾದ ಡಾ. ವಿಠ್ಠಲ ಶಿಂಧೆ, ತಹಶೀಲ್ದಾರರಾದ ಶ್ರೀ ಪ್ರಕಾಶ್ ಗಾಯಕವಾಡ, ವೈದ್ಯಾಧಿಕಾರಿಗಳಾದ ಡಾ. ಸೀಮಾ ಗುಂಜ್ಯಾಳೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ನಗರಸಭೆ ಅಧ್ಯಕ್ಷರಾದ ಶ್ರೀ ಜಯವಂತ ಭಾಟಲೆ, ವೈದ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Published by: Kavya V
First published: May 7, 2021, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories