11 ತಿಂಗಳ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಡಿಸಿಎಂ ಕಾರಜೋಳ ಕಾರ್ಯಾಲಯ ಆರಂಭ

ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-104ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಾಲಯ ತೆರೆದವರು ಬಹಳ ದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರದಲ್ಲಿ ಮುಂದುವರೆದಿಲ್ಲ. ಈ ಹಿಂದೆ ಮಾಜಿ ಸಚಿವೆ ಉಮಾಶ್ರೀ, ಆರ್ ಬಿ ತಿಮ್ಮಾಪುರ, ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ವೇಳೆ ಇದೇ ಕೊಠಡಿಯಲ್ಲಿ ತಮ್ಮ ಕಚೇರಿ ತೆರೆದಿದ್ದರು‌. ಮೈತ್ರಿ ಸರ್ಕಾರ ಪತನದ ಜೊತೆಗೆ ಶಿವಾನಂದ ಪಾಟೀಲ ಸಚಿವಗಿರಿಯೂ ಹೋಯಿತು.

news18-kannada
Updated:June 30, 2020, 3:56 PM IST
11 ತಿಂಗಳ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಡಿಸಿಎಂ ಕಾರಜೋಳ ಕಾರ್ಯಾಲಯ ಆರಂಭ
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಡಿಸಿಎಂ ಕಾರಜೋಳ ಅವರ ಕಚೇರಿ ಉದ್ಘಾಟಿಸಿದ ಸಂಸದ ಪಿ.ಸಿ.ಗದ್ದಿಗೌಡರ್.
  • Share this:
ಬಾಗಲಕೋಟೆ (ಜೂ.30): ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಯಾಗಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹನ್ನೊಂದು ತಿಂಗಳ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ತಮ್ಮ ಕಾರ್ಯಾಲಯಕ್ಕೆ ಉದ್ಘಾಟನೆ ಭಾಗ್ಯ ದೊರೆತಿದೆ. ಇವತ್ತು ಅಧಿಕೃತವಾಗಿ ಕಾರ್ಯಾಲಯ ಉದ್ಘಾಟಿಸಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-104 ಗೋವಿಂದ ಕಾರಜೋಳ ಅವರ ಕಾರ್ಯಾಲಯವನ್ನು ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟಿಸಿದರು‌. ಡಿಸಿಎಂ ಗೋವಿಂದ ಕಾರಜೋಳ ಕೂಡ ಈ ವೇಳೆ ಉಪಸ್ಥಿತರಿದ್ದರು.

ಕಾರ್ಯಾಲಯ ಆರಂಭಕ್ಕೆ ಇಷ್ಟೊಂದು ವಿಳಂಬವೇಕೆ!?

ಮೈತ್ರಿ ಸರ್ಕಾರ ಪತನದ ಬಳಿಕ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ವೇಳೆ ರಾಜ್ಯದಲ್ಲಿ ಪ್ರವಾಹ ರುದ್ರ ನರ್ತನದಿಂದಾಗಿ ಸಚಿವ ಸಂಪುಟ ರಚನೆಯಾಗಲಿಲ್ಲ. ಅಗಸ್ಟ್ 20, 2019ರಂದು 17 ಜನ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಮುಧೋಳ ಶಾಸಕ ಗೋವಿಂದ ಕಾರಜೋಳ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಎರಡು ಬಂಪರ್ ಖಾತೆ, ಜೊತೆಗೆ ಡಿಸಿಎಂ ಪಟ್ಟ ದೊರೆಯಿತು. ಪ್ರವಾಹ ಕಾರ್ಯ ನಿಭಾಯಿಸಲು ರಾಜ್ಯ ಸರ್ಕಾರ, ಸಚಿವರು ಹರಸಾಹಸಪಟ್ಟರು. ಪ್ರವಾಹ ಸಮಸ್ಯೆ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮಹಾಮಾರಿ ಕೊರೋನಾ ವೈರಸ್ ವಕ್ಕರಿಸಿಕೊಂಡುಬಿಟ್ಟಿತು‌. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಲಯ ತೆರೆಯಲು ವಿಳಂಬ ಮಾಡಿದ್ದಾರೆ ಎನ್ನಲಾಗಿದೆ.

ಕೊಠಡಿ ಸಂಖ್ಯೆ-104 ಕಾರಜೋಳರಿಗೆ ಅದೃಷ್ಟವಿದೆಯೇ?

ಇದೇ ಮೊದಲ ಬಾರಿಗೆ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಗೋವಿಂದ ಕಾರಜೋಳ ಅವರು ಕಚೇರಿ ತೆರೆದಿದ್ದಾರೆ. ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-104ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಾಲಯ ತೆರೆದವರು ಬಹಳ ದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರದಲ್ಲಿ ಮುಂದುವರೆದಿಲ್ಲ. ಈ ಹಿಂದೆ ಮಾಜಿ ಸಚಿವೆ ಉಮಾಶ್ರೀ, ಆರ್ ಬಿ ತಿಮ್ಮಾಪುರ, ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ವೇಳೆ ಇದೇ ಕೊಠಡಿಯಲ್ಲಿ ತಮ್ಮ ಕಚೇರಿ ತೆರೆದಿದ್ದರು‌. ಮೈತ್ರಿ ಸರ್ಕಾರ ಪತನದ ಜೊತೆಗೆ ಶಿವಾನಂದ ಪಾಟೀಲ ಸಚಿವಗಿರಿಯೂ ಹೋಯಿತು. ಇದೀಗ ಗೋವಿಂದ ಕಾರಜೋಳ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-104ರಲ್ಲೇ ತಮ್ಮ ಕಚೇರಿ ತೆರೆದಿದ್ದಾರೆ. ಕಾರಜೋಳರ ಪಾಲಿಗೆ ಕೊಠಡಿ ಸಂಖ್ಯೆ-104 ಅದೃಷ್ಟವಾಗುತ್ತಾ, ಇಲ್ಲವೇ ಕೊಠಡಿಯ ಹಿಂದಿನ ಸಂಪ್ರದಾಯ ಮುಂದುವರೆಯುತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗೋವಿಂದ ಕಾರಜೋಳ ಅವರ ಕಾರ್ಯಾಲಯ.


ಇದನ್ನು ಓದಿ: ಕೊರೋನಾ ತಡೆ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜತೆ ಸಿಎಂ ಸಭೆ: ಇಲ್ಲಿವೆ ಮುಖ್ಯಾಂಶಗಳು

ಜಿಲ್ಲಾ ಕೇಂದ್ರ ಕಚೇರಿಯಲ್ಲಿ  ಕಾರಜೋಳ  ಸಿಗುತ್ತಾರೆಯೇ?

ಹನ್ನೊಂದು ತಿಂಗಳ ಬಳಿಕ ಡಿಸಿಎಂ ಗೋವಿಂದ ಕಾರಜೋಳ ಸ್ವ-ಜಿಲ್ಲೆ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಲಯ ಉದ್ಘಾಟಿಸಿದ್ದಾರೆ. ಡಿಸಿಎಂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಉದ್ಘಾಟನೆ ಏನೋ ಆಗಿದೆ. ಆದರೆ ಕಾರಜೋಳರು ಕಚೇರಿಯಲ್ಲಿ ಜನಸಾಮಾನ್ಯರಿಗೆ ಸಿಗ್ತಾರೆಯೇ ಎನ್ನುವುದು ಎಲ್ಲರ ಪ್ರಶ್ನೆ. ಗೋವಿಂದ ಕಾರಜೋಳ ಡಿಸಿಎಂ  ಆದ ಬಳಿಕ ಹೆಚ್ಚಾಗಿ ಬೆಂಗಳೂರಿನಲ್ಲಿರುತ್ತಾರೆ. ಸ್ವಕ್ಷೇತ್ರ ಮುಧೋಳದತ್ತ ಬರುವುದು ಕಡಿಮೆ ಎನ್ನುವ ಮಾತಿದೆ. ಈಗ ಜಿಲ್ಲಾ ಕೇಂದ್ರದಲ್ಲಿನ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಿಗುವುದು ಬಹುತೇಕ ಅನುಮಾನ. ಕಚೇರಿ ಉದ್ಘಾಟನೆಗೆ ಮಾತ್ರ ಸೀಮಿತವಾಗಬಹುದು. ಕಚೇರಿಯಲ್ಲಿ ಆಪ್ತ ಕಾರ್ಯದರ್ಶಿ ಮಾತ್ರ ಸಿಗುತ್ತಾರೆ. ಅವರ ಮೂಲಕ ಜನಸಾಮಾನ್ಯರು ಅಹವಾಲು ಸಲ್ಲಿಕೆ ಮಾಡಬಹುದು. ತಿಂಗಳಲ್ಲಿ ಯಾವ  ದಿನ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಿಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟಸಾಧ್ಯ. ಜನ ಸಾಮಾನ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಿಗುವ ಮೂಲಕ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವುದು ಜನರ ಆಶಯ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading