• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಚಿಂತನೆ: ಡಿಸಿಎಂ ಅಶ್ವಥ್ ನಾರಾಯಣ

ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಚಿಂತನೆ: ಡಿಸಿಎಂ ಅಶ್ವಥ್ ನಾರಾಯಣ

ಡಿಸಿಎಂ ಅಶ್ವಥ್ ನಾರಾಯಣ

ಡಿಸಿಎಂ ಅಶ್ವಥ್ ನಾರಾಯಣ

ಚನ್ನಪಟ್ಟಣದಲ್ಲಿಯೇ 500 ಜನರಿಗೆ ಅನುಕೂಲವಾಗುವ ಕೋವಿಡ್ ಕೇರ್ ಸೆಂಟರ್ ಇದೆ. ಮುಂದೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ಧರ್ಜೆಗೆ ಏರಿಸಲಾಗುತ್ತೆ. ಜನರಿಗೆ ಯಾವ ತೊಂದರೆಯೂ ಆಗದಂತೆ ಕ್ರಮವಹಿಸಲಾಗುತ್ತೆ ಎಂದು ಅಶ್ವಥ್ ನಾರಾಯಣ್ ಭರವಸೆ ಕೊಟ್ಟಿದ್ದಾರೆ.

  • Share this:

ರಾಮನಗರ(ಚನ್ನಪಟ್ಟಣ): ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಭೇಟಿ ಕೊಟ್ಟಿದ್ದರು. ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ ಡಿಸಿಎಂ, ವೈದ್ಯರ ಜೊತೆಗೆ ಕೆಲಕಾಲ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ 100 ಬೆಡ್​ಗಳಿದ್ದು, 50 ಬೆಡ್ ಕೋವಿಡ್​ಗೆ ಮೀಸಲಿಡಲಾಗಿದೆ. ವರದಿ ಬರುವವರೆಗೆ ಇಲ್ಲಿ ದಾಖಲು ಮಾಡಲಾಗುತ್ತೆ. ನಂತರ ಪಾಸಿಟಿವ್ ಬಂದರೆ ಅವರನ್ನ ರಾಮನಗರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತೆ ಎಂದು ಹೇಳಿದರು.

ಇನ್ನು, ಚನ್ನಪಟ್ಟಣದಲ್ಲಿಯೇ 500 ಜನರಿಗೆ ಅನುಕೂಲವಾಗುವ ಕೋವಿಡ್ ಕೇರ್ ಸೆಂಟರ್ ಇದೆ. ಮುಂದೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ಧರ್ಜೆಗೆ ಏರಿಸಲಾಗುತ್ತೆ. ಜನರಿಗೆ ಯಾವ ತೊಂದರೆಯೂ ಆಗದಂತೆ ಕ್ರಮವಹಿಸಲಾಗುತ್ತೆ ಎಂದು ಅಶ್ವಥ್ ನಾರಾಯಣ್ ಭರವಸೆ ಕೊಟ್ಟರು.

ಬಿಜೆಪಿಯಲ್ಲಿ ಕೆಲ ಶಾಸಕರು, ಸಚಿವರು ರಹಸ್ಯ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ಸಚಿವರು, ಶಾಸಕರು ಸೇರದೆ ಇನ್ಯಾರು ಸೇರುತ್ತಾರೆ. ಅಶೋಕ್ ಅವರ ಹುಟ್ಟುಹಬ್ಬವಿದ್ದ ಕಾರಣ ಶುಭಕೋರಲು ಸೇರಿದ್ದಾರೆ. ಅಶೋಕ್ ಅವರು ಪ್ರವಾಸದಲ್ಲಿದ್ದರು. ಹಾಗಾಗಿ ಶಾಸಕರು, ಮಂತ್ರಿಗಳು ಒಟ್ಟಾಗಿ ಹೋಗಿದ್ದಾರೆ. ಇದರಲ್ಲಿ ಅನುಮಾನಪಡುವ ವಿಚಾರ ಏನಿಲ್ಲ ಎಂದರು.

ಇದನ್ನೂ ಓದಿ: ಬೆಳೆ ನಾಶ ಮಾಡುತ್ತವೆ ಎಂದು ನೀರಿಗೆ ವಿಷ ಬೆರಕೆ; 12 ಹಸುಗಳು ಸಾವು, 50ಕ್ಕೂ ಹೆಚ್ಚು ರಾಸುಗಳ ಸ್ಥಿತಿ ಚಿಂತಾಜನಕ

ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಳು ಹೆಚ್ಚಳವಾಗುತ್ತಿದ್ದರೂ ಆರೋಗ್ಯ ಇಲಾಖೆ ಕೊರೋನಾ ತಡೆಗಟ್ಟುವಲ್ಲಿ ವಿಫಲ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ವಿಫಲವಾಗಿಲ್ಲ. ಆದರೆ ಕೆಲವರ ಆರೋಗ್ಯದಲ್ಲಿ ವ್ಯತ್ಯಾಸವಿರುತ್ತೆ. ಅವರಿಗೆ ಯಾವ ಖಾಯಿಲೆ ಇದೆ ಎಂದು ಗೊತ್ತಿರಲ್ಲ. ನಾವು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಇದುವರೆಗೂ ಕೊರೋನಾ ಸಮುದಾಯಕ್ಕೆ ಹಬ್ಬಿಲ್ಲ, ನಿಯಂತ್ರಣದಲ್ಲಿದೆ. ಕೆಲವರು ಆತಂಕದಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದಾರೆ. ಅನುಮಾನಗಳಲ್ಲಿ ಕೆಲವರು ಭಯಭೀತರಾಗಿದ್ದಾರೆಂದು ತಿಳಿಸಿದರು.



ರಾಜ್ಯದ ಖಾಸಗಿ ಕಾಲೇಜು ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಿರುವ ವಿಚಾರಕ್ಕೆ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಮಾರ್ಚ್​ನಿಂದ ಎಲ್ಲಾ ಕಾಲೇಜುಗಳು ಲಾಕ್​ಡೌನ್ ಆಗಿವೆ. ಜುಲೈ ಕೊನೆಯವರೆಗೂ ಲಾಕ್​ಡೌನ್ ಇರಲಿದೆ. ಹಾಗೇ ಯಾವಾಗ ಪ್ರಾರಂಭವಾಗಲಿದೆ ಅನ್ನೋದು ಸ್ಪಷ್ಟತೆಯಿಲ್ಲ. ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಬಹಳಷ್ಟು ಆತಂಕ ಇದೆ. ಅತಿಥಿ ಉಪನ್ಯಾಸಕರು ಕೆಲಸ ಮಾಡಿರುವ ತಿಂಗಳಿಗೆ ಸಂಬಳ ಕೊಡಲಾಗುತ್ತೆ. ಮತ್ತೆಕಾಲೇಜುಗಳು ಪ್ರಾರಂಭವಾದ ನಂತರ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತೆ ಎಂದು ಸ್ಪಷ್ಟನೆ ನೀಡಿದರು.

ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು