ಆ.1ರಿಂದ 15ರವರೆಗೆ ಶಾಲಾ ಚುಚ್ಚುಮದ್ದು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಚಾಲನೆ

ಜಿಲ್ಲೆಯಲ್ಲಿ 5 ಮತ್ತು 10ನೇ ತರಗತಿ ಸೇರಿ ಒಟ್ಟು 54,177 ಮಕ್ಕಳಿಗೆ ಚುಚ್ಚುಮದ್ದು ನೀಡುವ ಗುರಿ ಹೊಂದಲಾಗಿದೆ ಎಂದು ಆರ್​ಸಿಎಚ್​ಓ ಹಾಗೂ ಡಿಹೆಚ್‍ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುಚ್ಚುಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿಸಿ ಮಹಾಂತೇಶ್ ಬೀಳಗಿ.

ಚುಚ್ಚುಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿಸಿ ಮಹಾಂತೇಶ್ ಬೀಳಗಿ.

  • Share this:
ದಾವಣಗೆರೆ; ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ 15 ರವರೆಗೆ ಶಾಲಾ ಚುಚ್ಚುಮದ್ದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಇಂದು ಕಾರ್ಯಕ್ರಮ ಕುರಿತಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚುಚ್ಚುಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೊದಲನೇ ಹಂತದಲ್ಲಿ ಕೋವಿಡ್ ಇಲ್ಲದೇ ಇರುವ ಗ್ರಾಮೀಣ ಭಾಗಗಳಲ್ಲಿ 5 ಮತ್ತು 10ನೇ ತರಗತಿ ಮಕ್ಕಳಿಗೆ ಧನುರ್ವಾಯು ಮತ್ತು ಗಂಟಲು ಮಾರಿ ರೋಗವನ್ನು ತಡೆಗಟ್ಟಲು ಡಿ.ಟಿ ಚುಚ್ಚುಮದ್ದನ್ನು ಜಿಲ್ಲೆಯ ಎಲ್ಲಾ ಉಪ ಕೇಂದ್ರ, ಹಳ್ಳಿಯ ಶಾಲೆಗಳಲ್ಲಿ ನಿಗದಿತ ದಿನಾಂಕಗಳಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನೀಡಲಾಗುವುದು. ಪೋಷಕರು ನಿಗದಿತ ದಿನಾಂಕಗಳಂದು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಬಂದು ಚುಚ್ಚುಮದ್ದನ್ನು ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳು ಈ ವೇಳೆ ತಿಳಿಸಿದರು.

ಈ ವೇಳೆ ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಆರ್​ಸಿಎಚ್‍ಓ ಡಾ.ಮೀನಾಕ್ಷಿ ಇದ್ದರು. ಜಿಲ್ಲೆಯಲ್ಲಿ 5 ಮತ್ತು 10ನೇ ತರಗತಿ ಸೇರಿ ಒಟ್ಟು 54,177 ಮಕ್ಕಳಿಗೆ ಚುಚ್ಚುಮದ್ದು ನೀಡುವ ಗುರಿ ಹೊಂದಲಾಗಿದೆ ಎಂದು ಆರ್​ಸಿಎಚ್​ಓ ಹಾಗೂ ಡಿಹೆಚ್‍ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತ ಪ್ರಕರಣಗಳು

ದಾವಣಗೆರೆ ಜಿಲ್ಲೆಯಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುವೆ. ಇಂದು ದಾವಣಗೆರೆ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ‌ ಕೃಷಿ ಇಲಾಖೆಯ 5 ಜನ ಸಿಬ್ಬಂದಿ ಹಾಗೂ ಓರ್ವ ಬ್ಯಾಂಕ್ ನೌಕರ ಮತ್ತು ಓರ್ವ ಪತ್ರಕರ್ತರಿಗೆ ಕೊರೋನಾ ಸೋಂಕು ಬಂದಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐಗೆ ಸೋಂಕು ತಗುಲಿದೆ. ಇಂದು‌ 121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದನ್ನು ಓದಿ: ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಭಾರೀ ಬದಲಾವಣೆ; ಬಿ.ವೈ ವಿಜಯೇಂದ್ರಗೆ ಕೈ ತಪ್ಪಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ

ದಾವಣಗೆರೆ 69, ಹರಿಹರ 14, ಜಗಳೂರು 1, ಚನ್ನಗಿರಿ 18, ಹೊನ್ನಾಳಿ 15, ಅನ್ಯ ಜಿಲ್ಲೆ 2 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇನ್ನು‌ ಇಂದು ದಾವಣಗೆರೆ ಜಿಲ್ಲೆಯ
ಒಂದೇ ಗ್ರಾಮದ ಇಬ್ಬರು ವೃದ್ಧೆಯರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Published by:HR Ramesh
First published: