ಕೊರೋನಾಗೆ ಟಕ್ಕರ್ ಕೊಡ್ತಿದ್ದಾನೆ ನಮ್ಮ ಹುಡ್ಗ.. ಸೋಂಕಿಗೆ ಕಡಿವಾಣ ಹಾಕಲು ಇವನದ್ದು ಒನ್ ಮ್ಯಾನ್ ಆರ್ಮಿ!

ನಗರದ ಮನೆಗಳಿಗೆ, ಜನಸಂದಣಿ ಇರುವ ಪ್ರದೇಶ ಹಾಗೂ ಬೀದಿ ಬೀದಿಗಳಲ್ಲಿ ಔಷಧ ಸಿಂಪಡಣೆ ಮಾಡುವ ಮೂಲಕ ಕೊರೊನಾ‌ ನಿಯಂತ್ರಣಕ್ಕೆ ತನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದಾನೆ ಈ ರುದ್ರೇಶ.

ಕಾಲೇಜ್​ ವಿದ್ಯಾರ್ಥಿ ರುದ್ರೇಶ್​

ಕಾಲೇಜ್​ ವಿದ್ಯಾರ್ಥಿ ರುದ್ರೇಶ್​

 • Share this:
  ದಾವಣಗೆರೆ: ಇತ್ತೀಚೆಗೆ ಯುವಕರಿಗೆ ಮೊಬೈಲ್, ಬೈಕ್, ಟಿಕ್ ಟಾಕ್ ಬರಿ ಇದರದ್ದೇ ಕ್ರೇಜ್ ಹೆಚ್ಚು. ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ತಂದೆಗೆ ಬೈಕ್ ಕೊಡಿಸು ಮೊಬೈಲ್ ಕೊಡಿಸು ಅಂತ ಕಾಟ ಕೊಡೋರೆ ಹೆಚ್ಚು. ಆದರೆ ದಾವಣಗೆರೆಯ ಈ ಯುವಕರ ಬೇರೆಲ್ಲ ಯುವಕರಿಗಿಂತ ಭಿನ್ನ. ರಾಜ್ಯದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿರೋದನ್ನ ಗಮನಿಸಿ ಸೋಂಕು ನಿಯಂತ್ರಣಕ್ಕೆ ತನ್ನದೆ ಆದ ಕೊಡುಗೆ ನೀಡುತಿದ್ದಾನೆ. ಕೊರೊನಾ ಸೋಂಕು ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಈ ಹೊತ್ತಲ್ಲಿ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನ ರುದ್ರೇಶ್ ಎಂಬ ಯುವಕ ಸದ್ದಿಲ್ಲದೇ ಸಮಾಜಮುಖಿ ಕೆಲಸ ಮಾಡುತ್ತಿದ್ದಾನೆ.

  ನಗರದ ಮನೆಗಳಿಗೆ, ಜನಸಂದಣಿ ಇರುವ ಪ್ರದೇಶ ಹಾಗೂ ಬೀದಿ ಬೀದಿಗಳಲ್ಲಿ ಔಷಧ ಸಿಂಪಡಣೆ ಮಾಡುವ ಮೂಲಕ ಕೊರೊನಾ‌ ನಿಯಂತ್ರಣಕ್ಕೆ ತನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದಾನೆ. ಗುತ್ತಿಗೆದಾರ ಕೆ. ಟಿ.‌ವೀರಪ್ಪ ಹಾಗೂ ವಿಶಾಲಮ್ಮ ದಂಪತಿಯ ಪುತ್ರನಾದ ರುದ್ರೇಶ್, ದಾವಣಗೆರೆ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಪ್ರತಿ ನಿತ್ಯವೂ ಸ್ಯಾನಿಟೈಸರ್ ಸ್ಪ್ರೇ ವಿತ್ ಕಂಟೈನರ್ ಹೆಗಲಿಗೆ ಹಾಕಿಕೊಂಡು ಆಸ್ಪತ್ರೆಯ ಹೊರಾಂಗಣ, ಅಂಗಡಿ ಮುಂಗಟ್ಟುಗಳ ಬಳಿ ಸಿಂಪಡಣೆ ಮಾಡುತ್ತಿದ್ದಾನೆ.

  ಇದನ್ನೂ ಓದಿ: ಮದುವೆ ಮಂಟಪದಲ್ಲಿ ಮಗ್ಗಿ ಹೇಳುವಂತೆ ವರನಿಗೆ ಪರೀಕ್ಷೆಯೊಡ್ಡಿದ ವಧು.. ಮುರಿದು ಬಿತ್ತು ಮದುವೆ!

  ಪ್ರತಿದಿನ ಬೆಳಿಗ್ಗೆ ಎರಡರಿಂದ ಮೂರು ಗಂಟೆ ಈ ಕಾರ್ಯ ಮಾಡುವ ರುದ್ರೇಶನಿಗೆ ಔಷಧಿ ಸಿಂಪಡಣೆ ಮಾಡಲು ತಾಯಿಯೇ ಸ್ಪೂರ್ತಿಯಂತೆ. ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಆಕ್ಸಿಜನ್ ಸಿಗದೆ, ಬೆಡ್ ಸಿಗದೆ ಸಾವು ನೋವು, ಸಂಬಂಧಿಕ ಆಕ್ರಂದನ ನೋಡಿ ಸಮಾಜಕ್ಕೆ ತನ್ನ ಕೈಲಾದಷ್ಟು ಸೇವೆ ನೀಡಬೇಕು ಅಂತ ಸ್ಯಾನಿಟೈಸ್ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಅವರ ತಂದೆ ಸಾಥ್ ನೀಡಿದ್ದು ಮಗನಿಗೆ ನಿತ್ಯ 500 ಹಣ ಖರ್ಚು ಮಾಡಿ ಸ್ಯಾನಿಟೈಸ್ ಕೊಡಿಸುತ್ತಿದ್ದಾರೆ.. ರುದ್ರೇಶ್ ಬೆಳಿಗ್ಗೆ 6 ಗಂಟೆಯಿಂದ 9  ಗಂಟೆಯವರೆಗೂ ಸ್ಯಾನಿಟೈಸ್ ಮಾಡಿ ನಂತರ 10 ಗಂಟೆಯಿಂದ ತನ್ನ ಆನ್ ಲೈನ್ ಕ್ಲಾಸ್ ಗೆ ಅಟೆಂಡ್ ಆಗ್ತಾನೆ.

  ಇನ್ನೂ ರುದ್ರೇಶ್ ಇಡೀ ದಾವಣಗೆರೆ ನಗರವನ್ನ ಸ್ಯಾನಿಟೈಸ್ ಮಾಡುವ ಗುರಿ ಹೊಂದಿದ್ದಾನೆ. ಈಗಾಗಲೇ ವಿದ್ಯಾನಗರ, ಎಂಸಿಸಿ ಬಿ ಬ್ಲಾಕ್, ಗುಂಡಿ ಸರ್ಕಲ್, ಜಿಲ್ಲಾಸ್ಪತ್ರೆ ಸ್ಯಾನಿಟೈಸ್ ಮಾಡಿದ್ದಾನೆ. ಇನ್ನೂ ಯಾವುದೇ ಜವಬ್ದಾರಿ ಇಲ್ಲದೆ ಓಡಾಡೋ ಯುವಕರು ಮನೆಯಲ್ಲಿ ಹೇಳಿದ ಕೆಲಸ ಮಾಡದೆ ಇರುವವರ ಸಾಕಷ್ಟು ಜನ ಇದ್ದಾರೆ. ಅಂತವರ ಮಧ್ಯ ರುದ್ರೇಶ್ ಈ ರೀತಿ ಸಮಾಜಮುಖಿ ಕೆಲಸ ಮಾಡುತ್ತಿರೋದಕ್ಕೆ ಜಿಲ್ಲೆಯ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇನ್ನೂ ಕಳೆದ ವಾರದಿಂದ ಇದೇ ರೀತಿ ಕೆಲಸವನ್ನ ರುದ್ರೇಶ್ ಮಾಡಿಕೊಂಡು ಬಂದಿದ್ದಾನೆ. ಅವನ ಕೆಲಸ ಹೀಗೆ ಮುಂದುವರೆಯಲಿ. ಎಲ್ಲ ಯುವಕರು ಇದೇ ರೀತಿ ಸಮಾಜಮುಖಿಯಾಗಿ ಚಿಂತಿಸಿದ್ರೆ ಕೊರೋನಾವನ್ನ ಓಡಿಸೋದ್ರ ಜೊತೆಗೆ ದೇಶವನ್ನ ನಂಬರ್ ಒನ್ ಕೂಡ ಮಾಡಬಹುದು.

  ವರದಿ: ಸಂಜಯ್ ಎ.ಪಿ. ಕುಂದುವಾಡ
  Published by:Kavya V
  First published: