HOME » NEWS » District » DAUGHTER COMMITTED SUICIDE FATHER KILLED YOUNG MAN RH

ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದನೆಂದು ಯುವಕನ ಕೊಲೆ ಮಾಡಿದ ತಂದೆ

ಪ್ರೀತಿಸಿದವನಿಗೆ ಕೊಟ್ಟು ಮದುವೆ ಮಾಡಲಿಲ್ಲವೆಂದು ಮಗಳು ಆತ್ಮಹತ್ಯೆಗೆ ಶರಣಾದಳೆಂದು ಪ್ರೀತಿಸಿದ ಯುವಕನನ್ನು ಕೊಲೆ ಮಾಡಿ ತಂದೆ ಜೈಲು ಸೇರಿದನಲ್ಲದೆ. ಮನೆ ಮತ್ತು ಮನೆ ಮಂದಿ ಗ್ರಾಮಸ್ಥರ ಆಕ್ರೋಷಕ್ಕೆ ಸಿಲುಕುವಂತೆ ಮಾಡಿ, ಇದ್ದ ಸೂರು ಬೆಂಕಿಗೆ ಆಹುತಿ ಯಾಗುವಂತೆ ಮಾಡಿಕೊಂಡಿದ್ದಾನೆ.

news18-kannada
Updated:July 25, 2020, 7:49 PM IST
ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದನೆಂದು ಯುವಕನ ಕೊಲೆ ಮಾಡಿದ ತಂದೆ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಬಳ್ಳಾಪುರ: ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳ ಸಾವಿಗೆ ಆಕೆಯನ್ನು ಪ್ರೀತಿಸುತ್ತಿದ್ದ ಯುವಕನೆ ಕಾರಣ ಎಂದು ಉದ್ರಿಕ್ತಗೊಂಡ ಯುವತಿ ತಂದೆ ಆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಸಮೀಪದ ಯಗವ ಮದ್ದಲ ಖಾನೆ ಗ್ರಾಮದಲ್ಲಿ ನಡೆದಿದೆ.

ಯಗವ ಮದ್ದಲ‌ಖಾನೆಯ ಗ್ರಾಮದ 25 ವರ್ಷದ ಹರೀಶ್ ಕೊಲೆಯಾದ ದುರ್ದೈವಿ. ಹರೀಶ್ ಅದೇ ಗ್ರಾಮದ ವೆಂಕಟೇಶ್ ಪುತ್ರಿ ಸಿರಿಷಾರನ್ನು ಪ್ರೀತಿಸುತ್ತಿದ್ದ. ಆದರೆ ಸಿರಿಷಾಳನ್ನು ಕೊಟ್ಟು ಹರೀಶ್‌ಗೆ ಮದುವೆ ಮಾಡಿಕೊಡಲು ವೆಂಕಟೇಶ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಕಳೆದ 8 ತಿಂಗಳ ಹಿಂದೆ ಸಿರಿಷಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಹರೀಶ್ ಊರು ಬಿಟ್ಟು ಬೆಂಗಳೂರಿನಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಾಪಸ್ಸು ಬಂದು ಊರಿನಲ್ಲಿದ್ದ. 

ಕೊಲೆಯಾದ ಯುವಕ ಹರೀಶ್.


ತನ್ನ ಮಗಳ ಸಾವಿಗೆ ಹರೀಶ್ ಕಾರಣ ಎಂದು  ಸಿರಿಷಾ ತಂದೆ ವೆಂಕಟೇಶ್, ಹರೀಶ್‌ನ ಕೊಲೆಗೆ ಸಂಚು ರೂಪಿಸಿ, ನಿನ್ನೆ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ ಹರೀಶ್‌ ನನ್ನು  ತನ್ನ ಸ್ನೇಹಿತ ಗಣೇಶ್‌ನೊಂದಿಗೆ ಸೇರಿ ಇನ್ನೊಂದು ಬೈಕ್ ನಲ್ಲಿ ಹಿಂಬಾಲಿಸಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆಯ ಮೇಲೆ ಇಪ್ಪತ್ಮೂರು ಬಾರಿ ತಿವಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಸಿರಿಷಾ


ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶನನ್ನು ಕೊಲೆ ಮಾಡಿದ ಬಳಿಕ ಬಾಗೇಪಲ್ಲಿ ಸಿಪಿಐ ನೈಯಾಜ್ ಬೇಗ್ ಮುಂದೆ ಶರಣಾಗಿದ್ದಾರೆ. ಮೃತ ಹರೀಶ್ ಶವ ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಪೋಷಕರ ವಶಕ್ಕೆ ನೀಡಿದ್ದಾರೆ. ಇತ್ತ ಕೊಲೆಯಾದ ಯುವಕ ಹರೀಶನ  ಶವವನ್ನು ಮನೆಯ ಬಳಿಗೆ ತರುತ್ತಿದ್ದಂತೆ ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿ, ಕೆಲ ಸಂಬಂಧಿಕರು ಕೊಲೆ ಮಾಡಿದ ವೆಂಕಟೇಶ್ ಮನೆಯ ಮೇಲೆ ದಾಳಿ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿ, ಮನೆಗೆ ಬೆಂಕಿ ಹಚ್ಚಿದ್ದಾರೆ.

ಇದನ್ನು ಓದಿ: ಹಲೋ ಸರ್ ನಿಮಗೆ ಪಾಸಿಟಿವ್ ಇದೆ ಎಲ್ಲಿದ್ದೀರಿ ? ಹೀಗಂತ ಡಿಸಿಗೆ ಫೋನ್ ಮಾಡಿದ ಸಿಬ್ಬಂದಿ; ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿದ ಸೋಂಕಿತ
Youtube Video

ಪ್ರೀತಿಸಿದವನಿಗೆ ಕೊಟ್ಟು ಮದುವೆ ಮಾಡಲಿಲ್ಲವೆಂದು ಮಗಳು ಆತ್ಮಹತ್ಯೆಗೆ ಶರಣಾದಳೆಂದು ಪ್ರೀತಿಸಿದ ಯುವಕನನ್ನು ಕೊಲೆ ಮಾಡಿ ತಂದೆ ಜೈಲು ಸೇರಿದನಲ್ಲದೆ. ಮನೆ ಮತ್ತು ಮನೆ ಮಂದಿ ಗ್ರಾಮಸ್ಥರ ಆಕ್ರೋಷಕ್ಕೆ ಸಿಲುಕುವಂತೆ ಮಾಡಿ, ಇದ್ದ ಸೂರು ಬೆಂಕಿಗೆ ಆಹುತಿ ಯಾಗುವಂತೆ ಮಾಡಿಕೊಂಡಿದ್ದಾನೆ.
Published by: HR Ramesh
First published: July 25, 2020, 7:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories