Corona: ಕೊರೋನಾ ಅಂಕಿ-ಅಂಶಗಳು; ಕೆಟ್ಟ ದಿನಗಳು ಹತ್ತಿರದಲ್ಲೇ ಇವೆ ಎಂದು ಹೇಳುತ್ತಿವೆಯೇ?

ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರದ ಹೊತ್ತಿಗೆ 8,364 ರಿಂದ 8,346 ಕ್ಕೆ ಏರಿಕೆ ಕಂಡಿದೆ. ಅಲ್ಲದೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಸಹ ಕಡಿಮೆಯಾಗಿದೆ, ಶುಕ್ರವಾರ 97.9ರಷ್ಟು ಇದ್ದ ಸೋಂಕಿನ ಪ್ರಮಾಣ ಶನಿವಾರದ ಹೊತ್ತಿಗೆ 97.91 ಕ್ಕೆ ಏರಿಕೆಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಕೋವಿಡ್  ಲಾಕ್​ಡೌನ್​ ಸಡಿಲಿಕೆ, ಸುರಕ್ಷತಾ ಕ್ರಮಗಳನ್ನು ಮರೆತಿರುವ ಜನ ಮತ್ತು ಎಲ್ಲಾ ವಲಯಗಳನ್ನು ತೆರೆಯಲು ಮುಕ್ತ ಅವಕಾಶ ನೀಡಿರುವ ಈ ಸಮಯದಲ್ಲಿ ಕರ್ನಾಟಕ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳದ ಪರಿಸ್ಥಿತಿ ಮತ್ತೆ ಹದಗೆಡುತ್ತಿರುವ ವಾತಾವರಣದ ಆತಂಕಕಾರಿ ಮುನ್ಸೂಚನೆಯನ್ನು ನೀಡುತ್ತಿವೆ.

    ಎರಡನೇ ಅಲೆಯ ಆರಂಭದಲ್ಲಿ ಕಂಡುಬಂದಷ್ಟು ತೀವ್ರತೆ ಈಗ ಇಲ್ಲ. ಬಿಡುಗಡೆಯಾದ ರೋಗಿಗಳು ಮತ್ತು ಹೊಸ ಪ್ರಕರಣಗಳ ನಡುವಿನ ಅಂತರವು ವೇಗವಾಗಿ ಕಡಿಮೆಯಾಗುತ್ತಿದೆ, ಸಕ್ರಿಯ ಪ್ರಕರಣಗಳ ಪ್ರಮಾಣವು ಕೂಡ  ಕಡಿಮೆಯಾಗುತ್ತಿದೆ. ಮೇಲೆ ಹೇಳಿದ ಎಲ್ಲಾ ಸಂಗತಿಗಳು ಶುಭ ಸೂಚನೆಯ ಸಂಕೇತವಲ್ಲ, ಅದರಲ್ಲೂ ವಿಶೇಷವಾಗಿ ಎರಡನೇ ಅಲೆಯ ಪ್ರಭಾವ ಕಡಿಮೆಯಾದ ಕಾರಣ, ಈಗ ನಗರ  ಪ್ರದೇಶ ಮತ್ತು ರಾಜ್ಯದ ಹೆಚ್ಚಿನ ಪಟ್ಟಣಗಳು ಮುಕ್ತ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ, ಎಲ್ಲಾ ವಲಯಗಳು ಮುಕ್ತವಾಗಿರುವುದರಿಂದ ಜನರ ಓಡಾಟವು  ಹೆಚ್ಚಾಗಿದೆ. ಈ ರೀತಿ ಜನರು ಎಚ್ಚರಿಕೆ ಇಲ್ಲದೇ ಓಡಾಡುವುದಕ್ಕೆ ಬಾರೀ ಮಳೆ ಬ್ರೇಕ್​ ಹಾಕಬಹುದು, ಮನೆಯಿಂದ ಹೊರ ಹೋಗದಂತೆ ತಡೆಯಬಹುದು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

    ರಾಜ್ಯಾದ್ಯಂತ ಕಂಡುಬಂದ ಹೊಸ ಕೋವಿಡ್  ಪ್ರಕರಣಗಳ ದೈನಂದಿನ ಸರಾಸರಿಯನ್ನು ಹೋಲಿಸಿ ನೋಡಿದರೆ ಸ್ಥಿರವಾಗಿ ಇರುವುದನ್ನು ನೋಡಬಹುದು. ಆದರೆ ಜುಲೈ 15 ರಂದು ಬಿಡುಗಡೆಯಾದ ರೋಗಿಗಳ ಸಂಖ್ಯೆ  3,188 ಇದ್ದರೆ  ಶನಿವಾರದಂದು ಇದು 2,050 ಕ್ಕೆ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶನಿವಾರದ ಹೊತ್ತಿಗೆ 0.92 ರಷ್ಟು ಕಡಿಮೆಯಾಗಿದೆ,ಆದರೆ  ಶುಕ್ರವಾರದಂದು 24,127 ಪ್ರಕರಣಗಳು ವರದಿಯಾಗಿದ್ದವು,  ಶನಿವಾರದಂದು  23,905 ಪ್ರಕರಣ ಇಳಿಕೆಯಾಗಿ ಅಲ್ಪ ಇಳಿಕೆಯಾಗಿತ್ತು.

    ಜುಲೈ 15 ರ ನಂತರ ಸೋಂಕಿನ ಕುಸಿತವು ಗಣನೀಯವಾಗಿ ಕುಸಿಯುತ್ತಾ ಹೋಗಿದೆ ಎಂದು ಹೇಳಲಾಗುತ್ತಿದೆ, ಜುಲೈ 19 ರಂದು ಶೇಕಡಾ 6.02  ಮತ್ತು ಜುಲೈ 20 ರಂದು 4.61 ಕ್ಕೆ ಕುಸಿದಿದೆ, ಜುಲೈ 22 ರಂದು ಶೇಕಡಾ 3.7, ಜುಲೈ 23 ರಂದು ಶೇ 2.3 ಮತ್ತು ಶನಿವಾರದ ಹೊತ್ತಿಗೆ 0.92 ಕ್ಕೆ ಇಳಿದಿದೆ.

    ಶನಿವಾರ, ಬೆಂಗಳೂರಿನಲ್ಲಿ ಕಂಡು ಬಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕೇವಲ 0.21 ರಷ್ಟು ಮಾತ್ರ ಕುಸಿತ ಕಂಡುಬಂದಿದೆ, ಜುಲೈ 19 ರಂದು ಶೇ 8.01 ಕ್ಕೆ ಸೋಂಕಿನ ಪ್ರಮಾಣ ಕುಸಿದಿತ್ತು, ಅಲ್ಲದೇ 11,751 ರಿಂದ 10,809 ಸೋಂಕಿತರ ಸಂಖ್ಯೆ ಇಳಿದಿತ್ತು.

    ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರದ ಹೊತ್ತಿಗೆ 8,364 ರಿಂದ 8,346 ಕ್ಕೆ ಏರಿಕೆ ಕಂಡಿದೆ. ಅಲ್ಲದೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಸಹ ಕಡಿಮೆಯಾಗಿದೆ, ಶುಕ್ರವಾರ 97.9ರಷ್ಟು ಇದ್ದ ಸೋಂಕಿನ ಪ್ರಮಾಣ ಶನಿವಾರದ ಹೊತ್ತಿಗೆ 97.91 ಕ್ಕೆ ಏರಿಕೆಯಾಗಿದೆ.

    ಕೊರೋನಾ ನಿರ್ಬಂಧಗಳನ್ನು ರಾಜ್ಯದಲ್ಲಿ ಮತ್ತಷ್ಟು ಸರಾಗಗೊಳಿಸಲಾಗಿದೆ.  ಸರ್ಕಾರ ಶನಿವಾರದಂದು ಅಮ್ಯೂಸ್​ಮೆಂಟ್​ ಪಾರ್ಕ್​ ತೆರೆಯುವಂತೆ ಹಾಗೂ ಇತರೇ ಧಾರ್ಮಿಕ ಆಚರಣೆಗಳನ್ನು ನಡೆಸಲು ಅನುಮತಿ ನೀಡಿತ್ತು. ಈ ಎಲ್ಲಾ ಜಾಗಗಳಲ್ಲಿ ಆರೋಗ್ಯ ಇಲಾಖೆ ಸೂಚಿಸಿರುವಂತಹ ಮಾರ್ಗಸೂಚಿಗಳ ಅನ್ವಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಎನ್ ಮಂಜುನಾಥ ಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ.

    ಅಮ್ಯೂಸ್​ಮೆಂಟ್​ ಪಾರ್ಕ್​ಗಳನ್ನು ತೆರೆಯಬಹುದು ಆದರೆ ಜಲಕ್ರೀಡೆ ಹಾಗೂ ಜಲ ಸಾಹಸ ಕ್ರೀಡೆಗಳಿಗೆ ಅನುಮತಿ ನಿರಾಕರಿಸಲಾಗಿದೆ. ಎಲ್ಲಾ ರೀತಿಯ ಧಾರ್ಮಿಕ ಕೇಂದ್ರಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸೂಚನೆಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ದೇವಾಲಯದ ಉತ್ಸವಗಳು, ಮೆರವಣಿಗೆಗಳು ಮತ್ತು ಸಭೆಗಳಿಗೆ ಅವಕಾಶವಿಲ್ಲ ಎಂದು ಆದೇಶವನ್ನು ಹೇಳಲಾಗಿದೆ. ಈ ತಿಂಗಳ ಆರಂಭದಲ್ಲಿ ಸರ್ಕಾರವು ದರ್ಶನಕ್ಕಾಗಿ ಮಾತ್ರ ದೇವಾಲಯಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿತ್ತು ಮತ್ತು ಬೇರೆ ಯಾವುದೇ ವಿಶೇಷ ಸೇವೆ ಅಥವಾ ಇತರ ಚಟುವಟಿಕೆಗಳಿಗೆ ಅನುಮತಿ ನೀಡಿರಲಿಲ್ಲ. 
    Published by:HR Ramesh
    First published: