HOME » NEWS » District » DASARA TECHNICAL COMMITTEE RECOMMENDS ALLOWING 300 PERSONS IN JAMBU SAVARI PMTV SNVS

ದಸರಾ ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ; ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆ

ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾದ ರೂಪು ರೇಷೆ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಇದೀಗ ದಸರಾ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಜನರನ್ನ ಸೇರಿಸಿ ದಸರಾ ಮಾಡಬೇಕೆಂದುಕೊಂಡಿದ್ದ ಜನ ಪ್ರತಿನಿಧಿಗಳಿಗೆ ಶಾಕ್ ಕೊಟ್ಟಿದ್ದಾರೆ.

news18-kannada
Updated:October 9, 2020, 9:44 PM IST
ದಸರಾ ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ; ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಕೆ
ದಸರಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರು
  • Share this:
ಮೈಸೂರು(ಅ. 09): ದಸರಾ ಉದ್ಘಾಟನೆಗೆ ಕೇವಲ 7 ದಿನಗಳ ಮಾತ್ರ ಬಾಕಿ ಉಳಿದಿದೆ. ಅರಮನೆಯಲ್ಲಿ ಗಜಪಡೆಗಳು ಬೀಡು ಬಿಟ್ಟು ತಾಲೀಮು ನಡೆಸುತ್ತಿವೆ. ಇಷ್ಟೆಲ್ಲಾ ತಯಾರಿಗಳು ನಡೆದು ಉದ್ಘಾಟನೆಗೆ ಸಿದ್ದಗೊಂಡಿದ್ರು ದಸರಾಗೆ ಎಷ್ಟು ಜನರನ್ನ ಸೇರಿಸಬೇಕು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಬೇಕಾ ಅನ್ನುವ ಗೊಂದಲ ಈವರೆಗೆ ಇತ್ತು. ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಎರಡು ಸಾವಿರ ಜನರನ್ನ ಸೇರಿಸಿ ದಸರಾ ಮಾಡಬೇಕೆಂದು ಉತ್ಸುಕರಾಗಿದ್ರು. ಅದ್ರೆ ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸ್ವಪಕ್ಷದ ಶಾಸಕರೇ ತೀರ್ವ ವಿರೋಧ ವ್ಯಕ್ತ ಪಡಿಸಿದ್ರು. ಯಾವಾಗ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಯಿತ್ತು ವೈದ್ಯಕೀಯ ಮತ್ತು ಆರೋಗ್ಯ ಸಚಿವರು ಎಚ್ಚೆತ್ತುಗೊಂಡು ಸಭೆ ನಡೆಸಿ ಕೊರೊನಾ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಪಡೆದು ನಿರ್ಣಯ ಕೈಗೊಳ್ಳಲು ಮುಂದಾದ್ರು. ಇದಾದ ಬಳಿಕ ಒಂದೇ ದಿನದೊಳಗಾಗಿ ತಾಂತ್ರಿಕ ಸಲಹಾ ಸಮಿತಿಯನ್ನ ಮೈಸೂರಿಗೆ ಕಳುಹಿಸಿ ವರದಿ ಪಡೆದುಕೊಂಡಿದ್ದಾರೆ. 

ಇಂದು ಮೈಸೂರಿಗೆ ಆಗಮಿಸಿದ ಡಾ. ಸುದರ್ಶನ್ ನೇತೃತ್ವದ ಸಲಹಾ ಸಮಿತಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯೊಂದಿಗೆ ಮಾತುಕತೆ ನಡೆಸಿ ನಂತರ ದಸರಾ ಉದ್ಘಾಟನೆ ಸ್ಥಳವಾದ ಚಾಮುಂಡಿ ಬೆಟ್ಟ ಹಾಗೂ ಜಂಬೂ ಸವಾರಿಯ ನಡೆಯುವ ಅರಮನೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿ ಸಂಜೆ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದರು. ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ವರಿದಿಯಲ್ಲಿರುವ ಅಂಶಗಳು ಇಲ್ಲಿವೆ:

ಇದನ್ನೂ ಓದಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: 8 ನಾಮಪತ್ರ ತಿರಸ್ಕಾರ; 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ವರದಿಯಲ್ಲಿ ಜಂಬೂಸವಾರಿ ನಡೆಯುವ ಸ್ಥಳಕ್ಕೆ ಕೇವಲ 300 ಮಂದಿಗೆ ಮಾತ್ರ ಅವಕಾಶ ಇರಬೇಕು. ಹಾಗೂ ಯಾವುದೇ ಸಾರ್ವಜನಿಕರು ಈ ಬಾರಿಯ ದಸರಾದಲ್ಲಿ ಭಾಗವಹಿಸುವಂತಿಲ್ಲ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಅದಷ್ಟೇ ಅಲ್ಲದೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 200 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೇವಲ 50 ಮಂದಿಗೆ ಸೀಮಿಸಿತಗೊಳಿಸಿ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಕಲಾವಿದರು ಭಾಗವಹಿಸುವಂತಿಲ್ಲ ಎಂದು ಷರತ್ತು ವಿಧಿಸಿದ್ದಾರೆ. ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವವರೆಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದಿದೆ.

ಇದನ್ನೂ ಓದಿ: ಮೀಸಲಾತಿಯಲ್ಲಿ ಅನ್ಯಾಯ ; ಅಡ್ವೊಕೇಟ್ ಜನರಲ್‌ ರಾಜೀನಾಮೆಗೆ ಮಾಜಿ ಸಚಿವ ರೇವಣ್ಣ ಒತ್ತಾಯ

ಒಟ್ಟಾರೆ ಸರಳ ದಸರಾ ನೆಪದಲ್ಲಿ ಸಾವಿರಾರು ಜನರನ್ನ ಸೇರಿಸಿ ದಸರಾ ಮಾಡಬೇಕು ಅಂದುಕೊಂಡಿದ್ದ ಜನ ಪ್ರತಿನಿಧಿಗಳಿಗೆ ತಾಂತ್ರಿಕ ಸಲಹಾ ಸಮಿತಿ ವರದಿ ಅಂತೂ ಶಾಕ್ ನೀಡಿದೆ. ಇನ್ನು, ವರದಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದ್ದು, ಹಲವರಿಂದ ಮೆಚ್ಚುಗೆಯೂ ಸಹ ವ್ಯಕ್ತವಾಗಿದೆ. ಆದ್ರೆ ಈ ವದರಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳನ್ನ‌ ಜಿಲ್ಲಾಡಳಿತ ಹೇಗೆ ಜಾರಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.ವರದಿ: ಪುಟ್ಟಪ್ಪ

ಇದನ್ನೂ ಓದಿ: ವಿದ್ಯಾಗಮ ಮುಂದುವರಿಯುತ್ತದೆ; ಯೋಜನೆ ವೈಫಲ್ಯ ಎನ್ನುವುದು ತಪ್ಪು: ಶಿಕ್ಷಣ ಸಚಿವ
Published by: Vijayasarthy SN
First published: October 9, 2020, 9:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories