HOME » NEWS » District » DASARA PREPARATION IN MYSURU ELEPHANT TROOP COMPLETES EXERCISE OF EXPLOSIVE PMTV HK

Mysuru Dasara 2020: ಮೈಸೂರಿನಲ್ಲಿ ದಸರಾ ತಯಾರಿ : ಸಿಡಿಮದ್ದು ತಾಲೀಮು ಮುಗಿಸಿದ ಗಜಪಡೆ

ಜಂಬೂ ಸವಾರಿಯಂದು ವಿಜಯದ ಸಂಕೇತವಾಗಿ ಸಿಡಿಸುವ 21ಕುಶಲತೋಪಿನ ಸಿಡಿಮದ್ದಿನ ತಾಲೀಮು ಸಹ ನಡೆಯಿತು. ಇಂದು ಮೂರು ಸುತ್ತಿನ ತಾಲೀಮು ನಡೆಸಿದ ಪೊಲೀಸರು ಮೊದಲ ದಿನದ ತಾಲೀಮು ಮುಗಿಸಿದರು

news18-kannada
Updated:October 15, 2020, 11:20 PM IST
Mysuru Dasara 2020: ಮೈಸೂರಿನಲ್ಲಿ ದಸರಾ ತಯಾರಿ : ಸಿಡಿಮದ್ದು ತಾಲೀಮು ಮುಗಿಸಿದ ಗಜಪಡೆ
ಗಜಪಡೆಯ ತಾಲೀಮು
  • Share this:
ಮೈಸೂರು(ಅಕ್ಟೋಬರ್​. 15): ವಿಶ್ವವಿಖ್ಯಾತ ನಾಡಹಬ್ಬ ದಸರೆ‌ ಕಳೆ ಕಟ್ಟಿದ್ದು, ಶನಿವಾರ ದಸರಾ ಉದ್ಘಾಟನೆಗೆ ಭರ್ಜರಿ ತಯಾರಿ ಶುರುವಾಗಿದೆ. ಇತ್ತ ಗಜಪಡೆಯ ತಾಲೀಮು ಕೂಡ ಯಶಸ್ವಿಯಾಗಿ ಸಾಗಿದ್ದು ಫಿರಂಗಿ ಮೂಲಕ ಸಿಡಿಮದ್ದು ತಾಲೀಮು ಸಹ ಇಂದಿನಿಂದ ಆರಂಭವಾಗಿದೆ. ಆಗಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಎರಡು ದಿನ ಮಾತ್ರ ಬಾಕಿ ಇದ್ದು, ದಸರಾ ತಯಾರಿಗಳು ಕೂಡ ಭರ್ಜರಿಯಾಗಿ ಸಾಗುತ್ತಿದ್ದು, ಕೊನೆ ಹಂತ ತಲುಪಿದೆ. ಇತ್ತ ಬೆಳ್ಳಂ ಬೆಳಗ್ಗೆ ಅರಮನೆ ಅಂಗಳದಲ್ಲಿ ಗಜಪಡೆ ತಾಲೀಮು ನಡೆಸಿ' ಅಭಿಮನ್ಯು 600 ಕೆ ಜಿ ತೂಕದ ಮರಳು ಮೂಟೆ ಹೊತ್ತು ಸಾಗಿದ್ದಾನೆ. ನಾಳೆ ಅಮವಾಸ್ಯೆ ಹಿನ್ನಲೆಯಲ್ಲಿ‌ ಆ ದಿನ ಮುಗಿದ ಬಳಿಕ ಮರದ ಅಂಬಾರಿ ತಾಲೀಮು ನಡೆಸಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಈ ನಡುವೆ ಶನಿವಾರ ದಸರಾ ಉದ್ಘಾಟನೆ ಹಿನ್ನಲೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದೆ.‌

ಈಗಾಗಲೇ ಬೆಟ್ಟದ ರಸ್ತೆಯ ಎಂಟ್ರಿಯಲ್ಲಿ ಬ್ಯಾರಿಕೇಡ್‌ಗಳ ಅಳವಡಿಸಿ, ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ ದಸರಾ ಸರಳವಾಗಿ ಮಾಡುವ ಹಾಗೂ ನೂಕು ನುಗ್ಗಲು ಉಂಟಾಗದಿರಲಿ ಎಂಬ ಕಾರಣದಿಂದ ಚಾಮುಂಡಿ ಬೆಟ್ಟ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದೇವೆ ಅಂತಾರೆ ಜಿಲ್ಲಾ ಮಂತ್ರಿಗಳು. ಇತ್ತ ಫಿರಂಗಿ ತಾಲೀಮು ದಸರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಜಂಬೂ ಸವಾರಿಯಂದು ವಿಜಯದ ಸಂಕೇತವಾಗಿ ಸಿಡಿಸುವ 21ಕುಶಲತೋಪಿನ ಸಿಡಿಮದ್ದಿನ ತಾಲೀಮು ಸಹ ನಡೆಯಿತು. ಇಂದು ಮೂರು ಸುತ್ತಿನ ತಾಲೀಮು ನಡೆಸಿದ ಪೊಲೀಸರು ಮೊದಲ ದಿನದ ತಾಲೀಮು ಮುಗಿಸಿದರು.

ಇದನ್ನೂ ಓದಿ : ದೊಡ್ಡ ಸ್ಥಾನ ಸಿಕ್ಕಿದಂತೆ ಅಹಂಕಾರ ಬರಬಾರದು; ಸಿಟಿ ರವಿ ವಿರುದ್ಧ ಚಾಟಿ ಬೀಸಿದ ಎಚ್​ಡಿಕೆ

ಕೊರೋನಾ ಹಿನ್ನಲೆಯಲ್ಲಿ ಅರಮನೆಯಿಂದ ಹೊರ ಬಾರದ ಆನೆಗಳೆ ಅಲ್ಲೆ ನಿಂತಿದ್ದವು. ಆದರೆ, ಸಿಡಿಮದ್ದುು ಸಿಡಿಸುವ ಸ್ಥಳದಲ್ಲಿ ಇದ್ದ ಅಶ್ವಗಳು ಬೆಚ್ಚಿದವು. ಆದರೆ, ಇದು ಕಳೆದ ಬಾರಿಗಿಂತ ಕಡಿಮೆ ಇದೆ. ಎರಡನೇ ಬಾರಿಯ ಫಿರಂಗಿ ತಾಲೀಮಿನಲ್ಲಿ ಹೊಂದಾಣಿಕೆಯಾಗಲಿದೆ ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳುತ್ತಾರೆ.

ಒಟ್ಟಾರೆ, ನಾಡಹಬ್ಬ ದಸರಾ ಉದ್ಘಾಟನೆಗೆ ಒಂದು ದಿನ ಮಾತ್ರ ಬಾಕಿ ಇದ್ದು, ದಸರೆ ಕಾರ್ಯಕ್ರಮಗಳು ಕೊನೆ ಹಂತ ತಲುಪಿದೆ‌. ಈ ನಡುವೆ ಇಂದಿನಿಂದ ಫಿರಂಗಿ ತಾಲೀಮು ಸಹ ಆರಂಭವಾಗಿದ್ದು, ಸರಳ ಹಾಗೂ ಸಾಂಪ್ರದಾಯಿಕ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಅಣಿಯಾಗಿದೆ.
Published by: G Hareeshkumar
First published: October 15, 2020, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories