• Home
  • »
  • News
  • »
  • district
  • »
  • ದಸರಾ ಆನೆಗಳ ನಡಿಗೆ ಮತ್ತು ಫಿರಂಗಿ ಗಾಡಿಗಳ ಮೊದಲ ದಿನದ ತಾಲೀಮು

ದಸರಾ ಆನೆಗಳ ನಡಿಗೆ ಮತ್ತು ಫಿರಂಗಿ ಗಾಡಿಗಳ ಮೊದಲ ದಿನದ ತಾಲೀಮು

ಮೈಸೂರು ದಸರಾ ಆಚರಣೆಗಾಗಿ ಫಿರಂಗಿ ಗಾಡಿಯನ್ನು ಶುಚಿಗೊಳಿಸಿ ಪೂಜೆ ಮಾಡುತ್ತಿರುವುದು.

ಮೈಸೂರು ದಸರಾ ಆಚರಣೆಗಾಗಿ ಫಿರಂಗಿ ಗಾಡಿಯನ್ನು ಶುಚಿಗೊಳಿಸಿ ಪೂಜೆ ಮಾಡುತ್ತಿರುವುದು.

Mysore Dasara - ಈ ಬಾರಿ ಸರಳವಾಗಿ ನಡೆಯಲಿರುವ ಮೈಸೂರು ದಸರಾ ಆಚರಣೆಗೆ ಆನೆಗಳನ್ನ ಅಣಿಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೆರವಣಿಗೆ ಪಥದಲ್ಲಿ ದಸರಾ ಆನೆಗಳ ನಡಿಗೆ ಅಭ್ಯಾಸವನ್ನು ಇಂದು ಪ್ರಾರಂಭಿಸಲಾಗಿದೆ.

  • Share this:

ಮೈಸೂರು(ಅ. 04): ನಾಡಹಬ್ಬ ದಸರಾ ಕಳೆಗಟ್ಟಿದ್ದು ಇಂದು ಬೆಳಗ್ಗೆ ಗಜಪಡೆ ಮೊದಲ ದಿನದ ತಾಲೀಮು ಆರಂಭಿಸಿದೆ. ಅರಮನೆ ಆವರಣದಲ್ಲೇ ತಾಲೀಮು ನಡೆಸುತ್ತಿರುವ ‘ಗಜಪಡೆ' ದಸರೆಗೆ ಸಿದ್ದವಾಗುತ್ತಿದೆ. ಈ‌ ನಡುವೆ ವರ್ಷದಿಂದ ಸದ್ದಿಲ್ಲದೆ ನಿಂತಿದ್ದ ಫಿರಂಗಿ ಗಾಡಿ ಶುಚಿಗೊಂಡು ಪೂಜೆ ಸಿಡಿಮದ್ದು ಸಿಡಿಸಲು ಸಿದ್ದವಾಗಿದ್ದು. ಅರಮನೆಯಲ್ಲಿ ದಸರಾ ಸಿದ್ದತೆಗಳು ಒಂದೊಂದೆ ಆರಂಭವಾಗಿದೆ. 


ನಾಡಹಬ್ಬ ದಸರೆ ಈ ಬಾರಿ ಸರಳ. ಆದ್ರೆ ಕಾರ್ಯಕ್ರಮಗಳು ಸಂಭ್ರಮದಿಂದ ಮಾಡಲು ಭರ್ಜರಿ ತಯಾರಿ ಶುರುವಾಗ್ತಿದೆ. ಈಗಾಗಲೇ ಅರಮನೆ ಅಂಗಳಕ್ಕೆ ಎಂಟ್ರಿ ಕೊಟ್ಟಿರೋ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ‘ಗಜಪಡೆ' ಇಂದಿನಿಂದ ಅಧಿಕೃತವಾಗಿ ತಾಲೀಮು ಆರಂಭಿಸಿದೆ. ಬೆಳ್ಳಂಬೆಳಗ್ಗೆ ಇಂದು ಗಜಪಡೆ ತಾಲೀಮು ಆರಂಭಿಸಿದೆ. ಅರಮನೆ ಆವರಣದಲ್ಲಿ ತಾಲೀಮು ಶುರು ಮಾಡಿರೋ ಅಭಿಮನ್ಯು ಅಂಡ್ ಟೀಂ, ಅರಮನೆಯೊಳಗೆ ವಾಕಿಂಗ್ ಮಾಡಿದೆ. ಮೊದಲ ದಿನ ಸಿಂಪಲ್ ವಾಕ್ ಮಾಡಿದ್ದು, ರಸ್ತೆ ಪರಿಚಯ ಮಾಡಿಕೊಡಲಾಗಿದೆ.


ಇದನ್ನೂ ಓದಿ: ಪರೋಲ್ ಮೇಲೆ ಬಿಡಲು ಲಂಚಕ್ಕೆ ಬೇಡಿಕೆ; ಎಸಿಬಿ ಕೈಗೆ ಸಿಕ್ಕಿಬಿದ್ದ ಜೈಲಧಿಕಾರಿ


ಇನ್ನು ಈ ನಡುವೆ ವರ್ಷದಿಂದ ನಿಂತಿದ್ದ ಫಿರಂಗಿಗಳು ಶುಚಿಗೊಂಡು ಪೂಜೆ ನೇರವೇರಿಸಿಕೊಂಡಿದೆ.‌ ವಿಜಯದಶಮಿಯಂದು ‘ಜಂಬೂಸವಾರಿ' ವೇಳೆ‌ ವಿಜಯದ ಸಂಕೇತವಾಗಿ ಫಿರಂಗಿ ಸಿಡಿಮದ್ದು ಸಿಡಿಸಲಾಗುತ್ತೆ. ಹಾಗಾಗಿ ಅಂದು ಯಾವುದೇ ಸಮಸ್ಯೆ ಆಗದಂತೆ ಇಂದು ಅರಮನೆ ಮುಂಭಾಗದಲ್ಲಿ ವಿಶೇಷ ಪೂಜೆ ನೇರವೇರಿಸಿ ಪ್ರಾರ್ಥಿಸಲಾಯಿತು. ಕುಶಲತೋಪು ಸಿಡಿಸುವ ಈ ಸಂಪ್ರದಾಯಕ್ಕೆ ತನ್ನದೇ ಅದ ವಿಶೇಷತೆ ಇದೆ. ಹಾಗಾಗಿ ಅರಮನೆ ಸಮೀಪದಲ್ಲಿ ಫಿರಂಗಿ ತಾಲೀಮಿನ ಅಭ್ಯಾಸ ಮಾಡಲಿದ್ದು, ಪುರಾತತ್ವ ಇಲಾಖೆಯ ಅನುಮತಿ ಮತ್ತು ಸೂಚನೆ ಮೇರೆಗೆ ಅಭ್ಯಾಸ ಮಾಡಲಾಗುವುದು ಎಂದು ಪೂಜೆ ಬಳಿಕ ನಗರ ಪೊಲೀಸ್ ಅಯುಕ್ತ ಚಂದ್ರಗುಪ್ತ ಹೇಳಿದ್ದಾರೆ.


ಒಟ್ಟಾರೆ, ನಾಡಹಬ್ಬದ ಸಂಭ್ರಮ ಶುರುವಾಗಿದ್ದು ಗಜಪಡೆಯ ಮೊದಲ ದಿನದ ತಾಲೀಮು ಆರಂಭವಾಗಿದೆ. ಈ‌ ಮೂಲಕ ನಾಡಹಬ್ಬ ಸಿಂಪಲ್ ಆದರೂ ಸಂಭ್ರಮದ ತಯಾರಿ ನಡೆಯುತ್ತಿರೋದು ಹೌದು.


ವರದಿ: ಪುಟ್ಟಪ್ಪ

Published by:Vijayasarthy SN
First published: