HOME » NEWS » District » DASARA CELEBRATED IN A SIMPLE WAY AT JANAPADALOKA IN RAMANAGARA ATVR SNVS

ಜಾನಪದಲೋಕದಲ್ಲಿ ಸರಳ ದಸರಾ ಆಚರಣೆ; ಜಾನಪದ ಕಾಶಿಗೂ ಕೊರೋನಾ ಕಾಟ

ವರ್ಷವಿಡೀ ದಸರಾ ಬೊಂಬೆಯ ಪ್ರದರ್ಶನ ಮಾಡುವ ರಾಮನಗರದ ವಿಖ್ಯಾತ ಜಾನಪದಲೋಕದಲ್ಲಿ ನಿನ್ನೆ ಸರಳ ರೀತಿಯಲ್ಲಿ ದಸರಾ ಆಚರಣೆ ಮಾಡಲಾಯಿತು.

news18-kannada
Updated:October 27, 2020, 2:17 PM IST
ಜಾನಪದಲೋಕದಲ್ಲಿ ಸರಳ ದಸರಾ ಆಚರಣೆ; ಜಾನಪದ ಕಾಶಿಗೂ ಕೊರೋನಾ ಕಾಟ
ರಾಮನಗರದ ಜಾನಪದಲೋಕದಲ್ಲಿ ಸರಳ ದಸರಾ ಆಚರಣೆ
  • Share this:
ರಾಮನಗರ: ಕಲೆ, ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳನ್ನು ನಾಡಿಗೆ ಪರಿಚಯಿಸುವಲ್ಲಿ ಹೆಸರಾಗಿರುವ, ಜನಪದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಗರದ ಜಾನಪದ ಲೋಕದಲ್ಲಿ ನಾಡಹಬ್ಬ ದಸರಾ ಹಬ್ಬವನ್ನು ಬನ್ನಿ ಮುರಿಯುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಯಿತು. ಆದರೆ ಜಾನಪದ ಲೋಕದಲ್ಲಿ ವರ್ಷವಿಡಿ ದಸರಾ ಬೊಂಬೆ ಪ್ರದರ್ಶನವು ನಡೆಯುತ್ತದೆ.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಅಧಿಕಾರಿಗಳು ಸಂಪ್ರದಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಾಳೆಕಂದು ಕತ್ತರಿಸುವ ಮೂಲಕ ಸರಳ ದಸರಾಗೆ ಚಾಲನೆ ನೀಡಿದರು. ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಬನ್ನಿ ಮುರಿದು ಪ್ರವಾಸಿಗರು, ಜಾನಪದ ಲೋಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ತಿಮ್ಮೇಗೌಡರು ಮಾತನಾಡಿ ರಾಜ್ಯದಲ್ಲಿ ಪ್ರತಿವರ್ಷ ವಿಜಯದಶಮಿ ಅಂದರೆ ವಿಶೇಷ. ಅದರಲ್ಲೂ ಮೈಸೂರು ದಸರಾ ಅಂದರೆ ವಿಶ್ವದಿಂದ ಜನ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಕೊರೋನಾಯಿಂದಾಗಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಸರಳವಾಗಿ ದಸರಾ ಆಚರಣೆ ಮಾಡಲಾಗಿದೆ. ಈ ಹಿನ್ನೆಲೆ ಜಾನಪದ ಲೋಕದಲ್ಲೂ ಸಹ ಸರಳವಾಗಿ ಆಚರಣೆ ಮಾಡಿದ್ದೇವೆಂದು ತಿಳಿಸಿದರು.

ಇದನ್ನೂ ಓದಿ: ಒಳಗೆ ಸೇರಿದರೆ ಗುಂಡು ಹಾಡಿಗೆ ಸ್ಟೆಪ್ ಹಾಕಿದ ಧಾರವಾಡದ ಸ್ವಾಮೀಜಿ!

ಆಚರಣೆಯಲ್ಲಿ ಜಾನಪದ ಲೋಕದ ಮುಖ್ಯಸ್ಥರಾದ ಟಿ. ತಿಮ್ಮೇಗೌಡ, ರುದ್ರಪ್ಪ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಸುತಾ ರಾಮೇಗೌಡ, ತಾ.ಅಧ್ಯಕ್ಷ ಗೋ.ರಾ.ಶ್ರೀನಿವಾಸ್ ಸೇರಿದಂತೆ ಜಾನಪದ ಲೋಕದ ಲೋಕದ ಸಿಬ್ಬಂದಿ ಮತ್ತು ಪ್ರವಾಸಿಗರು ಸರಳ ದಸರಾ ಆಚರಣೆಗೆ ಸಾಕ್ಷಿಯಾದರು.

ವರದಿ: ಎ.ಟಿ. ವೆಂಕಟೇಶ್
Published by: Vijayasarthy SN
First published: October 27, 2020, 2:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories